
ಬೆಂಗಳೂರು(ಅ.25): ದುಬೈನಲ್ಲಿ ನಡೆದ ಪ್ರತಿಷ್ಠಿತ ‘ದುಬೈ ಎಕ್ಸ್‌ಫೋ’ದಲ್ಲಿ(Dubai Expo) ರಾಜ್ಯ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್(Roopa Moudgil) ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದುಬೈ ಎಕ್ಸ್‌ಫೋದಲ್ಲಿ ನಿಗಮದಿಂದ ಮಳಿಗೆ ಪ್ರಾರಂಭಿಸಲಾಗಿದ್ದು, ಮಳಿಗೆಯಲ್ಲಿ ಶ್ರೀಗಂಧದ ಕೆತ್ತನೆ, ಚನ್ನಪಟ್ಟಣದ ಆಟಿಕೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಈ ವಸ್ತುಗಳಿಗೆ ದೇಶ ವಿದೇಶಗಳ ಅನೇಕ ಪ್ರವಾಸಿಗರು(Tourists) ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಅನೇಕ ಮಂದಿ ಕಾವೇರಿ(Kaveri) ಬ್ರಾಂಡ್‌ಅನ್ನು ಬೇರೆಡೆ ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ. ಹಲವಾರು ಮಂದಿ ಪ್ರಾಂಚೈಸಿಗಳನ್ನು ತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ. ಈ ಬೆಳವಣಿಗೆ ನಿಜಕ್ಕೂ ಹರ್ಷದಾಯಕ ವಿಚಾರ ಎಂದು ತಿಳಿಸಿದ್ದಾರೆ.
ಪ್ರತಿಷ್ಠಿತ ದುಬೈ ಎಕ್ಸ್‌ಪೋದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗದ ಮಳಿಗೆ..!
ದುಬೈ ಎಕ್ಸ್‌ಪೋದಲ್ಲಿ ಕರ್ನಾಟಕ(Karnataka) ರಾಜ್ಯ ಕರಕುಶಲ(Handicrafts) ಅಭಿವೃದ್ಧಿ ನಿಗಮದ ಮಳಿಗೆ ಒಂದು ವಾರದ ಕಾಲ ಪ್ರದರ್ಶನ ಮತ್ತು ವಹಿವಾಟು ನಡೆಸಿತ್ತು. ಈ ಸಂದರ್ಭದಲ್ಲಿ ದುಬೈ, ಯುಎಇಯ ಎಕ್ಸ್‌ಫೋ 2020(UAE Expo 2020) ರಲ್ಲಿ ಭಾಗವಹಿಸುವ 192ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳಿಗೆ ಶ್ರೀಮಂತ ಪ್ರವಾಸೋದ್ಯಮ(Tourism) ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಜೊತೆಗೆ ವ್ಯಾಪಾರ ಮತ್ತು ಹೂಡಿಕೆ ಸಾಮರ್ಥ್ಯ ಪ್ರದರ್ಶಿಸಿತು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ