ವಾಹನ ಸವಾರರೇ ಗಮನಿಸಿ: HSRP ಇಲ್ಲದಿದ್ದರೆ 5 ದಿನಗಳ ನಂತರ 500 ರೂ. ದಂಡ

By Sathish Kumar KHFirst Published Sep 11, 2024, 12:51 PM IST
Highlights

ಸೆಪ್ಟೆಂಬರ್ 16 ರಿಂದ ರಾಜ್ಯದಲ್ಲಿ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಈಗಾಗಲೇ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಲಾಗಿದ್ದು, ಮತ್ತೆ ವಿಸ್ತರಣೆ ಇಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರು (ಸೆ.11): ರಾಜ್ಯದಲ್ಲಿ ಎಲ್ಲ ಮೋಟಾರು ವಾಹನಗಳಿಗೂ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ (High Security Registration Plate- HSRP) ಮಾಡಿಸಿಕೊಳ್ಳಲು ಇನ್ನು 5 ದಿನಗಳು ಮಾತ್ರ ಬಾಕಿಯಿವೆ. ಒಂದು ವೇಳೆ ಹೆಚ್‌ಎಸ್‌ಆರ್‌ಪಿ ನಂಬರ್ ಮಾಡಿಸದಿದ್ದರೆ ಅಂಥವರಿಗೆ ಸೆ.16ರಿಂದ 500 ರೂ. ದಂಡ ವಿಧಿಸಲಾಗುತ್ತದೆ.

ಹೌದು, ಕೇಂದ್ರ ಸಾರಿಗೆ ಇಲಾಖೆಯಿಂದ ದೇಶದಾದ್ಯಂತ ಎಲ್ಲ ಮೋಟಾರು ವಾಹನಗಳಿಗೆ ಒಂದೇ ಮಾದರಿಯ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಸಂಬಂಧ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಅಳವಡಿಕೆ ಮಾಡಲು ಆದೇಶ ಹೊರಡಿಸಿದೆ. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿ ನಂತರ ದಂಡ ಪಾವತಸಿಕೊಳ್ಳಲು ಅನುಮತಿಯನ್ನೂ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದಕ್ಕೆ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿಕೊಂಡು ಬಂದಿದೆ. ಇದೀಗ ನಾಲ್ಕನೇ ಬಾರಿಯ ಗಡುವು ವಿಸ್ತರಣೆ ಅವಧಿಯು ಸೆ.15ಕ್ಕೆ ಮುಕ್ತಾಯಗೊಳ್ಳಲಿದೆ.

Latest Videos

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಬುಕಿಂಗ್‌ ಮಾಡುವವರಿಗೆ ಹೊಸ ಸಂಕಷ್ಟ!

ಇನ್ನೂ ಟೈಮ್ ಇದೆ ಅಂತಿದ್ದವರಿಗೆ, ಬರೀ 5 ದಿನ ಟೈಮ್ ಬಾಕಿ ಉಳಿದುಕೊಂಡಿದೆ. ಸೆಪ್ಟೆಂಬರ್ 16 ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡು ಸಂಚಾರ ಮಾಡುವುದು ಕಡ್ಡಾಯವಾಗಲಿದೆ. ಸೆ.15ಕ್ಕೆ ಡೆಡ್ ಲೈನ್ ಕೊಟ್ಟಿರುವ ಸಾರಿಗೆ ಇಲಾಖೆ, ಮತ್ತೆ ಡೆಡ್ ಲೈನ್ ವಿಸ್ತರಣೆ ಮಾಡಲ್ಲವೆಂದು  ಶಪಥ ಮಾಡಿದಂತಿದೆ. ಈ ಹಿನ್ನೆಲೆಯಲ್ಲಿ ಕೇವಲ 5 ದಿನಗಳು ಬಾಕಿ ಇದ್ದರೂ ಯಾವುದೇ ಸಾರಿಗೆ ಇಲಾಕೆ ಅಧಿಕಾರಿಗಳಾಲೀ ಅಥವಾ ಸಾರಿಗೆ ಇಲಾಖೆ ಮಂತ್ರಿ ರಾಮಲಿಂಗಾರೆಡ್ಡಿ ಅವರಾಗಲೀ ಈ ಬಗ್ಗೆ ಯಾವುದೇ ಚಕಾರವನ್ನೆತ್ತಿಲ್ಲ.

ಇನ್ನು ರಾಜ್ಯ ಸರ್ಕಾರವು HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದ್ದಲ್ಲದೇ ನ್ಯಾಯಾಲಯವೂ ಕೂಡ ವಾಹನ ಸವಾರರಿಗೆ ಕೆಲವು ದಿನಗಳ ಕಾಲ ಗಡುವು ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಹೀಗಾಗಿ, ನಾಲ್ಕು ಬಾರಿ ಗಡುವು ನೀಡಿದ ನಂತರವೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದವರ ವಿರುದ್ಧ ದಂಡವನ್ನು ವಿಧಿಸಲು ತೀರ್ಮಾನಿಸಲಾಗಿದೆ. ಸೆ.16ರಿಂದ ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಇಲ್ಲವೆಂದರೆ 500 ರೂ. ದಂಡ ವಿಧಿಸಲಾಗುತ್ತದೆ. ಇದಕ್ಕೆ ಆರ್ ಟಿ ಓ ಮಾತ್ರವಲ್ಲ, ಟ್ರಾಫಿಕ್‌ ಪೊಲೀಸರಿಂದಲೂ ದಂಡ ವಿಧಿಸಲಾಗುತ್ತದೆ.

ರಾಜ್ಯದಲ್ಲಿ ಒಟ್ಟಾರೆಯಾಗಿ ರಾಜ್ಯದಲ್ಲಿವೆ 2 ಕೋಟಿಗೂ ಅಧಿಕ ಮೋಟಾರು ವಾಹನಗಳಿವೆ. ಆದರೆ, ಇಲ್ಲಿವರೆಗೆ ಕೇವಲ 51 ಲಕ್ಷ ವಾಹನಗಳು ಮಾತ್ರ HSRP ನಂಬರ್  ನೊಂದಣಿಯಾಗಿವೆ. ಉಳಿದ 1.49 ಕೋಟಿ ವಾಹನಗಳು ಇನ್ನೂ HSRP ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ. ಹೀಗಾಗಿ, ಸೆಪ್ಟೆಂಬರ್ 16 ರಿಂದಲೇ ಸಾರಿಗೆ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲೂ ಸ್ಪೆಷಲ್ ಡ್ರೈವ್ ಮಾಡಲು ಚಿಂತನೆ ಮಾಡಿದೆ. ಮೊದಲ ಸಲಕ್ಕೆ 500 ರೂ ದಂಡ, ಎರಡನೇ ಸಲಕ್ಕೆ 1000 ದಂಡ ಎಂದು ಸಾರಿಗೆ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.

ವಾಹನ ಸವಾರರೇ ಎಚ್ಚರ: HSRP ಗಡುವು ಮುಗಿಯಲು ಕೇವಲ 12 ದಿನಗಳು ಬಾಕಿ!

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮದ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ HSRP ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 2019ರ ಎಪ್ರಿಲ್‌ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. HSRP ನಂಬರ್ ಪ್ಲೇಟ್ ಬುಕಿಂಗ್‌ನಲ್ಲಿ ನಗದು ವ್ಯವಹಾರವಿಲ್ಲ. ಆನ್‌ಲೈನ್ ಮೂಲಕವೇ ಬುಕಿಂಗ್, ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು. ಕರ್ನಾಟಕದಲ್ಲಿ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಬುಕ್ ಮಾಡಲು ಅನುಸರಿಸಬೇಕಾದ ವಿಧಾನ ಇಲ್ಲಿದೆ

ಇಲ್ಲಿದೆ ನೋಡಿ ಹಂತ ಹಂತದ ಮಾಹಿತಿ:
https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು.
Book HSRP ಕ್ಲಿಕ್ ಮಾಡಿ.
ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ
ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ
ನಿಮ್ಮ ಹತ್ತಿರದ ಅಥವಾ ನಿಮ್ಮ  ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ
HSRP ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ
ಮೊಬೈಲ್ ನಂಬರ್‌ಗೆ ಬರವು ಒಟಿಪಿಯನ್ನು ನಮೂದಿಸಿ
HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ.

click me!