
ಬೆಂಗಳೂರು(ಜ.02): ಬಿಬಿಎಂಪಿ ವ್ಯಾಪ್ತಿಯಲ್ಲಿ 1.65 ಲಕ್ಷ ಆರೋಗ್ಯ ಕಾರ್ಯಕರ್ತರ ಮಾಹಿತಿ ಪೊರ್ಟಲ್ ನಲ್ಲಿ ಅಪ್ ಲೋಡ್ ಆಗಿದೆ. ಸುಮಾರು 1600 ವ್ಯಾಕ್ಸಿನೇಷನ್ ಸೈಟ್ ಗುರುತಿಸಲಾಗಿದೆ.200 ಕೋಲ್ಡ್ ಚೈನ್ ಯೂನಿಟ್ ಗುರುತಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಹೇಳಿದ್ದಾರೆ.
ಡ್ರೈ ರನ್ ಬೆಂಗಳೂರಿನ ಮೂರು ಸ್ಥಳಗಳಲ್ಲಿ ನಡೆಯುತ್ತಿದೆ. ಕೋವಿಡ್ ವ್ಯಾಕ್ಸಿನೇಷನ್ ರೂಂ ನಲ್ಲಿ 3 ಕೊಠಡಿ ಇರಲೇಬೇಕು. ಎಲ್ಲಾ ಕಾರ್ಯಚಟುವಟಿಕೆಗಳನ್ನು ಕೋವಿಡ್ ಪೋರ್ಟಲ್ ಮೂಲಕ ಮ್ಯಾನೇಜ್ ಮಾಡಲಾಗುತ್ತದೆ.
ಕೊರೋನಾ ನಂತ್ರ ಅಪ್ಪನ ಸ್ಯಾಲರಿಯಲ್ಲಿ ಕಡಿತ: ಫೀಸ್ ಕಟ್ಟೋಕೆ ದರೋಡೆ ಮಾಡಿದ ವಿದ್ಯಾರ್ಥಿ
ಫಲಾನುಭವಿಗಳಿಗೆ ಮೊದಲು ಮೆಸೇಜ್ ಹೋಗುತ್ತದೆ. ನಂತರ ಅವರು ಬಂದು ಇಲ್ಲಿ ಲಸಿಕೆ ಪಡೆಯುತ್ತಾರೆ. ಲಸಿಕೆ ಪಡೆದ ನಂತರ ರಸೀದಿ ತಗೊಬೇಕು
ಈ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ 144 ಪ್ರೈಮರಿ ಹೆಲ್ತ್ ಸೆಂಟರ್ ಇದೆ. ಲಸಿಕೆಗೆ 1.65 ಲಕ್ಷ ಫಲಾನುಭವಿಗಳು ದಾಖಲಾತಿ ಮಾಡಿಸಿದ್ದಾರೆ ಎಂದಿದ್ದಾರೆ.
ವ್ಯಾಕ್ಸಿನೇಷನ್ ಸ್ಟೋರೇಜ್ ಗೆ ಪ್ರೈವೇಟ್ ಆಸ್ಪತ್ರೆಗಳ ಬೆಂಬಲ ಸದ್ಯದ ಮಟ್ಟಿಗೆ ಅಗತ್ಯ ಇಲ್ಲ. 1700 ವ್ಯಾಕ್ಸಿನೇಟರ್ ಆಯ್ಕೆ ಮಾಡಲಾಗಿದೆ. 1700 ವ್ಯಾಕ್ಸಿನೇಟರ್ ಗೆ ಟ್ರೈನಿಂಗ್ ನೀಡಲಾಗಿದೆ. ಒಂದು ವೇಳೆ ಲಸಿಕೆ ಹಂಚಿಕೆ ಸಂದರ್ಭದಲ್ಲಿ ಸಿಬ್ಬಂದಿಗಳ ಕೊರತೆ ಉಂಟಾದರೆ ಆಗ ನರ್ಸಿಂಗ್ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಲಾಗುತ್ತದೆ. ಸದ್ಯ 48 ಸಾವಿರ ನರ್ಸಿಂಗ್ ವಿದ್ಯಾರ್ಥಿಗಳು ಇದ್ದಾರೆ ಎಂದಿದ್ದಾರೆ.
1300 ಮಂದಿ ಯುಕೆಯಿಂದ ವಾಪಸ್ಸಾಗಿದ್ದಾರೆ. 58 ಜನರ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಇವರ ಪತ್ತೆ ಕಾರ್ಯಕ್ಕಾಗಿ ಪಾಸ್ ಪೋರ್ಟ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಹಾಯ ಪಡೆಯಲಾಗಿದೆ. 58 ಪ್ರಯಾಣಿಕರು ನಾಪತ್ತೆ ಆದವರನ್ನ ಸದ್ಯದಲ್ಲೇ ಹುಡುಕಲಾಗುವುದು. ನಾಪತ್ತೆಯಾದ ಕೆಲವರು ಯುಕೆ ದೂರವಾಣಿ ನಂಬರ್ ಕೊಟ್ಟಿದ್ದಾರೆ. ಹೀಗಾಗಿ ಟ್ರೇಸಿಂಗ್ ಕಷ್ಟವಾಗ್ತಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ