ಕಳ್ಳರು ಮನೆಯೊಂದಕ್ಕೆ ನುಗ್ಗಿ ನಗದ್ದು ಚಿನ್ನಾಭರಣ ಸೇರಿ ಒಟ್ಟು 5,28,000ರೂ. ಮೌಲ್ಯದ ಸ್ವತ್ತು ಕಳವು ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ.
ಉತ್ತರ ಕನ್ನಡ (ಆ.24): ಕಳ್ಳರು ಮನೆಯೊಂದಕ್ಕೆ ನುಗ್ಗಿ ನಗದ್ದು ಚಿನ್ನಾಭರಣ ಸೇರಿ ಒಟ್ಟು 5,28,000ರೂ. ಮೌಲ್ಯದ ಸ್ವತ್ತು ಕಳವು ಮಾಡಿದ ಘಟನೆ ಶಿರಸಿಯಲ್ಲಿ ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಅಯೋಧ್ಯಾ ಕಾಲೋನಿ ನಿವಾಸಿ, ಹೊಲಿಗೆ ಮಷೀನ್ ಡೀಲರ್ ಆಶೀಶ್ ಲೋಖಂಡೆ (30) ಎಂಬವರ ಮನೆಗೆ ನಿನ್ನೆ ರಾತ್ರಿ 11 ಗಂಟೆಯಿಂದ ಇಂದು ಬೆಳಗ್ಗೆ 6 ಗಂಟೆಯ ನಡುವೆ ಹೊಕ್ಕಿದ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ. ಆಶೀಶ್ ಅವರ ಅಣ್ಣ ಪ್ರತೀಕ್ ಎಂಬವರು ಮಲಗುವ ಕೋಣೆಯ ಕಿಟಕಿಯ ಸರಳುಗಳನ್ನು ಕಟ್ ಮಾಡಿ ಒಳಹೊಕ್ಕ ಕಳ್ಳರು, ದೇವರ ಕೋಣೆಗೆ ಹೊಕ್ಕಿ ದೇವರ ಮೇಲಿದ್ದ 1,45,000ರೂ. ಮೌಲ್ಯದ ಬಂಗಾರದ ನೆಕ್ಲೇಸ್, 2,40,000ರೂ. ಮೌಲ್ಯದ ಲಾಕೆಟ್ ಇರುವ ರೋಪ್ ಚೈನ್, 86,000ರೂ.ಮೌಲ್ಯದ ಬಂಗಾರದ ಬಳೆಗಳು, 20,000ರೂ. ಮೌಲ್ಯದ ಬೆಳ್ಳಿ ತಂಬಿಗೆ, 25,000ರೂ. ಮೌಲ್ಯದ ಆರತಿ ಸೆಟ್, 5,000ರೂ. ಮೌಲ್ಯದ ಬೆಳ್ಳಿ ದೀಪ, 3,000ರೂ. ಬೆಳ್ಳಿ ಲೋಟೆ ಹಾಗೂ ಚಮಚ, 4,000ರೂ. ನಗದು ಕಳ್ಳತನ ಮಾಡಿದ್ದು, ಬಳಿಕ ಮನೆಯ ಹಿಂದಿನ ಬಾಗಿಲಿನ ಕೀಯನ್ನು ಕಟ್ ಮಾಡಿ ಪರಾರಿಯಾಗಿದ್ದಾರೆ.
ಹಾವೇರಿ: ಮೊಬೈಲ್ ಕದ್ದು ಹಣ ದೋಚುತ್ತಿದ್ದ 3 ಆರೋಪಿಗಳ ಬಂಧನ
undefined
ಶಿರಸಿ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆರಳಚ್ಚು ತಂಡ ಹಾಗೂ ಶ್ವಾನದಳ ಮನೆಯೊಳಗೆ ಹಾಗೂ ಸುತ್ತಮುತ್ತಲೂ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರನ್ನು ಹಿಡಿಯಲು ಜಾಲ ಬೀಸಿದ್ದಾರೆ.
ಪಕ್ಷಿಕೆರೆ: ಮನೆಯಿಂದ ಲಕ್ಷಾಂತರ ಮೌಲ್ಯದ ನಗ, ನಗದು ಕಳವು
ಮೂಲ್ಕಿ: ಪಕ್ಷಿಕೆರೆ ಸಮೀಪದ ಕೊಯಿಕುಡೆ ಮದರ್ ತೆರೇಸಾ ಲೇಔಟ್‌ನಲ್ಲಿ ವಾಸ್ತವ್ಯವಿರುವ ಶ್ರೀಲತಾ ಪೂಜಾರಿ ಎಂಬವರ ಮನೆಯಿಂದ ಕಳ್ಳರು ಲಕ್ಷಾಂತರ ರುಪಾಯಿ ಮೌಲ್ಯದ ನಗ-ನಗದನ್ನು ದೋಚಿದ ಘಟನೆ ನಡೆದಿದೆ.
Bengaluru ಪೊಲೀಸರೇ ನನ್ನ ಹೆಲ್ಮೆಟ್ ಕಳೆದೋಗಿದೆ: ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು
ಕೊಯಿಕುಡೆಯ ಶ್ರೀಲತಾ ಎಂಬವರ ಮನೆಯಲ್ಲಿ ಮೂರು ಮಂದಿ ದೊಡ್ಡವರು ಸಹಿತ ಇಬ್ಬರು ಮಕ್ಕಳು ವಾಸ್ತವ್ಯವಿದ್ದು, ಶನಿವಾರ ನಾಗರಪಂಚಮಿ ಪ್ರಯುಕ್ತ ತವರು ಮನೆಗೆ ಹೋಗಿದ್ದರು. ಮನೆಯವರು ಮಂಗಳವಾರ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಅಡುಗೆ ಕೋಣೆಯ ಕಬ್ಬಿಣದ ಗ್ರಿಲ್ಸ್‌ನ್ನು ಮೆಷಿನ್‌ನಲ್ಲಿ ತುಂಡರಿಸಿ ಒಳಗಡೆ ಬಂದು ಕಪಾಟಿನ ಬೀಗ ಒಡೆದು ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸುಮಾರು ಐದು ಲಕ್ಷ ರು. ಮೊತ್ತದ ನಗ ಹಾಗೂ ನಗದನ್ನು ಕಳವು ಮಾಡಿ ಹಿಂಭಾಗದಿಂದಲೇ ಹೋಗಿದ್ದಾರೆ. ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ.