ಹಳದಿ ರೋಗಕ್ಕೆ ಊರು ಬಿಟ್ಟ ಮಲೆನಾಡ ರೈತರು; ಗ್ರಾಮಗಳಲ್ಲೀಗ ಸ್ಮಶಾನ ಮೌನ!

By Ravi Janekal  |  First Published Aug 24, 2023, 8:02 PM IST

ನಿತ್ಯ ನೂರಾರು ಜನರಿಗೆ ಅನ್ನ ಹಾಕುತ್ತಿದ್ದ ಮಲೆನಾಡ ಪುರಾತನ ಮನೆಗಳಿಂದು ಪಾಳುಬಿದ್ದಿವೆ. ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗವನ್ನ ನಿಯಂತ್ರಿಸಲಾಗದೆ ಮಲೆನಾಡ ನೂರಾರು ಜನ ಶತಮಾನಗಳಿಂದ ಬದುಕಿ-ಬಾಳಿದ್ದ ಮನೆಗಳನ್ನ ಬಿಟ್ಟು ಊರುಗಳನ್ನೇ ಬಿಡುತ್ತಿದ್ದಾರೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಹುಲಿಗರಡಿ ಗ್ರಾಮದಲ್ಲಿ ಸುಮಾರು 25 ಮನೆಗಳಿವೆ. 25 ಮನೆಗಳಲ್ಲಿ 7ಕ್ಕೂ ಹೆಚ್ಚು ಮನೆಗಳು ಪಾಳುಬಿದ್ದಿರುವ ಸ್ಥಿತಿಗೆ ಬಂದಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
 
ಚಿಕ್ಕಮಗಳೂರು (ಆ.24) : ಐದು ದಶಕದ ಹಿಂದೆ ಅಡಿಕೆಗೆ ತಗುಲಿದ ಹಳದಿ ಎಲೆ ರೋಗದಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ತೋಟಗಳು ಸರ್ವನಾಶವಾಗವೇ ಆಗಿವೆ. ವರ್ಷದಿಂದ ತೋಟಕ್ಕೆ ಸತ್ವ ಕಳೆದುಕೊಂಡ ತೋಟಗಳಲ್ಲಿ ಬದುಕಿನ ನಿರ್ವಹಣೆ ಅಸಾಧ್ಯ ಅಂತ ಮಕ್ಕಳು-ಮೊಮ್ಮಕ್ಕಳು ಪಟ್ಟಣ ಸೇರಿಕೊಂಡಿದ್ದರು. ಗ್ರಾಮಗಳು ವೃದ್ಧಾಶ್ರಮಗಳಾಗಿದ್ದವು. ಅದರೆ, ಇಂದು ಅಂದು ವೃದ್ಧಾಶ್ರಮಗಳಾಗಿದ್ದ ಗ್ರಾಮಗಳಲ್ಲಿ ಇಂದು ಸ್ಮಶಾನ ಮೌನ. ಎಲ್ಲದಕ್ಕೂ ಕಾರಣ ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗ. ಸದಾ ಲವಲವಿಕೆಯಿಂದಿರುತ್ತಿದ್ದ ಗ್ರಾಮಗಳಲ್ಲಿ ಇಂದು ಪಾಳುಬಿದ್ದ ಮನೆಗಳದ್ದೇ ಪಾರುಪತ್ಯವಾಗಿದೆ. 

ಮೂರು ತಲೆಮಾರುಗಳನ್ನೇ ಕಂಡ ಮನೆಗಳು ಇಂದು ಪಾಳು 

Tap to resize

Latest Videos

undefined

ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಯಥೇಚ್ಛವಾಗಿ ಅಡಿಕೆ ಬೆಳೆಯುತ್ತಾರೆ. ಅದರಲ್ಲಿ 3-5-10 ಎಕರೆ ತೋಟಗಳಲ್ಲಿ ಬದುಕು ಕಟ್ಟಿಕೊಂಡ ಸಣ್ಣ-ಸಣ್ಣ ಬೆಳೆಗಾರರೇ ಹೆಚ್ಚು. ಆದರೆ, ಇಂದು ಮಲೆನಾಡು ಮನೆಯ ಹೆಂಚಿನ ಕಿಂಡಿಯಲ್ಲಿ ಒಲೆಯ ಹೊಗೆ ಇಲ್ಲ. ಬದಲಾಗಿ ಜೇಡರ ಬಲೆ. ಅಡುಗೆ ಮನೆಯಲ್ಲಿ ಪಾತ್ರೆಗಳ ಸಪ್ಪಳವಿಲ್ಲ. ಕ್ರಿಮಿ-ಕೀಟಗಳ ಕೂಗಟ-ಚೀರಾಟ. ದನಕರುಗಳಿರಬೇಕಾದ ಕೊಟ್ಟಿಗೆಯಲ್ಲಿ ಹಾವು-ಚೇಳು-ಕಪ್ಪೆಗಳ ಆವಾಸ ಸ್ಥಾನ. ಅರಿಶಿನ-ಕುಂಕುಮ, ರಂಗೋಲಿಯಿಂದ ತುಂಬಿ-ತುಳುಕ್ತಿದ್ದ ಹೊಸ್ತಿಲಲ್ಲಿ ಮುತ್ತೈದೆತನವೇ ಇಲ್ಲ. ಹೇಳೋಕೆ ಒಂದೋ ಎರಡೋ ಇದು ಆಧುನಿಕ ಮಲೆನಾಡಿನ ಪರಿಸ್ಥಿತಿ. 

ಕೋವಿಡ್ H3N2 ಬಳಿಕ ಜನರಲ್ಲಿ ಶುರುವಾಯ್ತು ಯೆಲ್ಲೋ ಫೀವರ್ ಭೀತಿ!

ನಿತ್ಯ ನೂರಾರು ಜನರಿಗೆ ಅನ್ನ ಹಾಕುತ್ತಿದ್ದ ಮಲೆನಾಡ ಪುರಾತನ ಮನೆಗಳಿಂದು ಪಾಳುಬಿದ್ದಿವೆ. ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗವನ್ನ ನಿಯಂತ್ರಿಸಲಾಗದೆ ಮಲೆನಾಡ ನೂರಾರು ಜನ ಶತಮಾನಗಳಿಂದ ಬದುಕಿ-ಬಾಳಿದ್ದ ಮನೆಗಳನ್ನ ಬಿಟ್ಟು ಊರುಗಳನ್ನೇ ಬಿಡುತ್ತಿದ್ದಾರೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಹುಲಿಗರಡಿ ಗ್ರಾಮದಲ್ಲಿ ಸುಮಾರು 25 ಮನೆಗಳಿವೆ. 25 ಮನೆಗಳಲ್ಲಿ 7ಕ್ಕೂ ಹೆಚ್ಚು ಮನೆಗಳು ಪಾಳುಬಿದ್ದಿರುವ ಸ್ಥಿತಿಗೆ ಬಂದಿದೆ. 3-5 ಎಕರೆ ಅಡಿಕೆ ತೋಟದಲ್ಲಿ ಬದುಕಿದ್ದ ಸಣ್ಣ ಬೆಳೆಗಾರರು. ಆದರೆ, ಇಂದು 7ಕ್ಕೂ ಹೆಚ್ಚು ಕುಟುಂಬಗಳು ಊರನ್ನೇ ಖಾಲಿ ಮಾಡಿದ್ದಾರೆ. ಕಾರಣ ಹಳದಿ ಎಲೆ ರೋಗ. 

ಇಡೀ ಮಲೆನಾಡಿನಲ್ಲಿ  ನೂರಾರು ಜನ ಊರು ಬಿಟ್ಟಿದ್ದರೆ, ಮತ್ತಲವರು ತೋಟಗಳತ್ತ ಮುಖ ಮಾಡುವುದನ್ನೇ ನಿಲ್ಲಿಸಿದ್ದಾರೆ. ಅನಾದಿ ಕಾಲದಿಂದಲೂ ಬದುಕಿ ಬಾಳಿದ್ದ ಮನೆಗಳೀಗ ಖಾಲಿ-ಖಾಲಿ. ಸಾಲ-ತುತ್ತಿನ ಚೀಲಕ್ಕಾಗಿ ಗುಳೇ ಹೋಗಿದ್ದಾರೆ. ದೇವರ ಫೋಟೋಗಳು, ಮಕ್ಕಳು ಓದಿದ ಪುಸ್ತಕಗಳು, ಅಡಿಗೆ ಪಾತ್ರೆಗಳು, ಪಾಳು ಬಿದ್ದ ರೈತನ ಮನೆಯ ನೆನಪಾಗಿ ಉಳಿದಿವೆ. ಕೊಪ್ಪ-ಎನ್.ಆರ್.ಪುರ-ಶೃಂಗೇರಿಯ್ಲಿ ತೋಟಕ್ಕೆ ತಗುಲಿದ ರೋಗದಿಂದ ನಲುಗಿದ ನೂರಾರು ಬೆಳೆಗಾರ ಕುಟುಂಬಗಳು ಈಗಾಗಲೇ ಊರು ತ್ಯಜಿಸಿ ಬದುಕುವ ಅನಿವಾರ್ಯತೆ ಎಲ್ಲೆಲ್ಲೋ ಬದುಕು ಕಟ್ಟಿಕೊಂಡಿದ್ದಾರೆ. 


5 ದಶಕಗಳಿಂದ ಔಷಧಿ ಇಲ್ಲದೆ ರೋಗಕ್ಕೆ ಮಲೆನಾಡಿಗರು ಬಲಿ

ಐದು ದಶಕಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಹಳದಿ ಎಲೆ ರೋಗ ಬೆಳೆಗಾರರಿಗೆ ಕೃಷಿ ಬಗ್ಗೆಯೇ ಬೇಜಾರು ಮೂಡಿಸಿದೆ. ಕಿವಿಗೆ ಬಿದ್ದ ಔಷಧಿಯನ್ನೆಲ್ಲಾ ಸಿಂಪಡಿಸಿದರು ರೈತರ ಜೇಬು ಬರಿದಾಯ್ತೋ ವಿನಃ ರೋಗ ನಿಯಂತ್ರಣಕ್ಕೆ ಬಾರಲೇ ಇಲ್ಲ. ಶೃಂಗೇರಿ-ಕೊಪ್ಪ-ಎನ್.ಆರ್.ಪುರ ತಾಲೂಕಿನ ಹಲವು ಭಾಗದಲ್ಲಿ ಹಳದಿ ಎಲೆ ಹಾಗೂ ಎಲೆಚುಕ್ಕಿ ರೋಗ ಪಾರುಪತ್ಯ ಮರೆಯುತ್ತಿದೆ. 

Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಸಂಶೋಧನ ಕೇಂದ್ರಕ್ಕೆ ಔಷಧಿ ಸಂಶೋಧನೆಗೆಂದು ಬಂದ ಕೋಟಿಗಟ್ಟಲೇ ಹಣವನ್ನು ಹಳದಿ ಎಲೆ ರೋಗವೇ ತಿಂದು ಹಾಕಿದೆ. ಬ್ಯಾಂಕ್ ಸಾಲದ ಜೊತೆ ಅಡವಿಟ್ಟ ಹೆಂಡತಿ ಮಕ್ಕಳ ಓಡವೆಯನ್ನ ಬಿಡಿಸೋಕು ಆಗದ ಸಂದಿಗ್ಧ ಪರಿಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ. ಹಾಗಾಗಿ, ಸಾಲದ ಶೂಲಕ್ಕೆ ಸಿಕ್ಕ ಬೆಳೆಗಾರರು ಹೊರಬರಲಾಗದೆ ಬದುಕುವ ಅನಿವಾರ್ಯತೆಗೆ ಊರುಬಿಟ್ಟು ಸಿಕ್ಕ-ಸಿಕ್ಕ ಕೆಲಸ ಮಾಡುತ್ತಿದ್ದಾರೆ. ಅಡುಗೆ ಭಟ್ಟ ವೃತ್ತಿ, ಅರ್ಚಕರ ವೃತ್ತಿ ಸೇರಿದಂತೆ ನಾನಾ ವೃತ್ತಿ ಮಾಡುತ್ತಿದ್ದಾರೆ. ಅಳಿದುಳಿದಿರೋ ತೋಟವನ್ನ ತೋಟಗಳನ್ನ ಉಳಿಸಿಕೊಳ್ಳೋಕೆ ಬೆಳೆಗಾರರು ಇಂದಿಗೂ ಹೋರಾಡುತ್ತಿದ್ದಾರೆ.

click me!