ಓಲಾ, ಉಬರ್ ನಂತ್ರ ಸ್ವಿಗ್ಗಿ ಝೊಮ್ಯಾಟೋ ಕಂಪೆನಿಗಳು ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದು, ಇದರ ವಿರುದ್ಧ ಹೊಟೇಲ್ ಮಾಲೀಕರು ಯುದ್ಧ ಸಾರಿದ್ದಾರೆ. ಹೀಗಾಗಿ ಕೇಂದ್ರ ಸರಕಾರದ ONDC ಆ್ಯಪ್ ಜತೆ ಒಪ್ಪಂದಕ್ಕೆ ಮುಂದಾಗಿದ್ದಾರೆ.
ಬೆಂಗಳೂರು (ಏ.4): ಓಲಾ, ಉಬರ್ ನಂತ್ರ ಸ್ವಿಗ್ಗಿ ಝೊಮ್ಯಾಟೋ ಕಂಪನಿಗಳಿಗೂ ಸಂಕಷ್ಟ ಶುರುವಾಗಿದೆ. ಸ್ವಿಗ್ಗಿ, ಝೊಮ್ಯಾಟೊ ಸುಲಿಗೆ ವಿರುದ್ಧ ಹೊಟೇಲ್ ಮಾಲೀಕರು ಸಮರ ಶುರು ಮಾಡಿದ್ದಾರೆ. ಆನ್ಲೈನ್ನಲ್ಲಿ ಮನೆಗೆ ಫುಡ್ ಡೆಲಿವರಿ ಮಾಡ್ತಿದ್ದ ಸ್ವಿಗ್ಗಿ ಝೊಮ್ಯಾಟೊ ಕಂಪನಿಗಳು ಗ್ರಾಹಕರು ಹಾಗೂ ಮಾಲೀಕರ ಬಳಿ ಲೂಟಿಗಿಳಿದಿದ್ದಾರೆ. ಹೋಟೆಲ್ ಮೆನ್ಯು ಕಾರ್ಡ್ ಗಿಂತ ಶೇ.40 ರಷ್ಟು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಫುಡ್ ಡೆಲಿವರಿ ನೆಪದಲ್ಲಿ ಗ್ರಾಹಕರ ಬಳಿ ಆ್ಯಪ್ಗಳು ಹಗಲು ದರೋಡೆ ನಡೆಸುತ್ತಿದೆ. ಅತ್ತ ಮಾಲೀಕರಿಗೂ ಹಣ ಇಲ್ಲ. ಇತ್ತ ಗ್ರಾಹಕರ ಜೇಬಿಗೆ ಕೂಡ ಫುಡ್ ಡೆಲಿವರಿ ಆ್ಯಪ್ ಕತ್ತರಿ ಹಾಕುತ್ತಿದೆ.
ಗ್ರಾಹಕರಿಂದ ಹೆಚ್ಚಿನ ಹಣ ಪಡೆಯದಂತೆ ಹೋಟೆಲ್ ಮಾಲೀಕರು ಫುಡ್ ಡೆಲಿವರಿ ಆ್ಯಪ್ಗಳಿಗೆ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಹಲವು ಬಾರೀ ಮನವಿ ಮಾಡಿದ್ದ ಬೆಂಗಳೂರು ಹೋಟೆಲ್ ಅಸೋಸಿಯೇಷನ್. ಆದರೆ ನಾವು ನಷ್ಟದಲ್ಲಿ ಇದ್ದೇವೆ ಅಂತ ಸ್ವಿಗ್ಗಿ, ಝೊಮ್ಯಾಟೊ ಕಂಪೆನಿಗಳು ಕಾರಣ ಹೇಳುತ್ತಿದೆ . ಆದರೆ ಕಂಪೆನಿಗಳು ಹೇಳುತ್ತಿರುವುದು ಸುಳ್ಳು ಎಂದು ಹೋಟೆಲ್ ಅಸೋಸಿಯೇಷನ್ ವಾದವಾಗಿದೆ. ಕಂಪೆನಿಗಳು ನಷ್ಟದಲ್ಲಿ ಇಲ್ಲ ಆದರೂ ಗ್ರಾಹಕರ ಬಳಿ ಹೆಚ್ಚುವರಿ ಹಣ ಸುಲಿಗೆ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
undefined
ಸ್ವಿಗ್ಗಿಯಲ್ಲಿ 3.3 ಕೋಟಿ ಪ್ಲೇಟ್ ಇಡ್ಲಿ ಸೇಲ್, ಒಬ್ಬನೇ ವ್ಯಕ್ತಿಯಿಂದ 6 ಲಕ್ಷ ಇಡ್ಲಿ ಆರ್ಡರ್
ಬೆಂಗಳೂರಿನವರು ದೇಶದಲ್ಲೇ ಅತೀ ಹೆಚ್ಚು ಆನ್ ಲೈನ್ ಆರ್ಡರ್ ಮಾಡ್ತಾರೆ. ಹೀಗಾಗಿ ಸ್ವಿಗ್ಗಿ - ಝೊಮ್ಯಾಟೊ ಆ್ಯಪ್ ವಿರುದ್ಧ ಹೊಟೇಲ್ ಮಾಲೀಕರು ಸಮರ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಟೇಲ್ ಅಸೋಸಿಯೇಷನ್ ಕೇಂದ್ರ ಸರ್ಕಾರದ ಹೊಸ ಆ್ಯಪ್ ಮೊರೆ ಹೋಗಿದೆ. Open Network for Digital Commerce(ONDC) ಆ್ಯಪ್ ಮೊರೆ ಹೋಗಿದೆ. ONDC ಆ್ಯಪ್ ಜೊತೆ ಟೈಯಪ್ ಒಪ್ಪಂದ ಮಾಡಿಕೊಳ್ಳಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.
ಇ ಕಾಮರ್ಸ್ ದೈತ್ಯರ ಸ್ವಾಮ್ಯಕ್ಕೆ ಲಗ್ಗೆ ಇಡಲಿದೆ ಭಾರತದ ಒಎನ್‌ಡಿಸಿ
ಈ ಆ್ಯಪ್ ನಿಂದ ಗ್ರಾಹಕರು ಹಾಗೂ ಮಾಲೀಕರ ಹಣ ಉಳಿತಾಯ ನಿರೀಕ್ಷೆ ಇದೆ. ಸ್ವಿಗ್ಗಿ ಹಾಗೂ ಝೊಮ್ಯಾಟೋಗಿಂತ ಶೇಕಡಾ 20 ರಷ್ಟು ಉಳಿತಾಯ ಆಗುವ ನಿರೀಕ್ಷೆ ಇದೆ. ಇಂದು ONDC ಆ್ಯಪ್ ಪ್ರತಿನಿಧಿ ಹೊಟೇಲ್ ಮಾಲೀಕರ ಸಂಘದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ. ONDC ಆ್ಯಪ್ ಜೊತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಸಭೆ ನಡೆಯಲಿದೆ.