ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?

Published : Apr 26, 2020, 07:51 AM ISTUpdated : Apr 26, 2020, 10:25 AM IST
ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?

ಸಾರಾಂಶ

ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?| ಒಬ್ಬ ಕಾರ್ಮಿಕನಿಂದ ಹೊಂಗಸಂದ್ರದಲ್ಲಿ 28 ಮಂದಿಗೆ ಕೊರೋನಾ ಮಹಾಮಾರಿ| ಇಂದು, ನಾಳೆ ಮತ್ತಷ್ಟುಮಂದಿಗೆ ಹಬ್ಬುವ ಆತಂಕ| ಸೋಂಕಿತರೆಲ್ಲರೂ ಕೂಲಿ ಕೆಲಸಕ್ಕಾಗಿ ಹಲವೆಡೆ ಸುತ್ತಾಟ| ಇವರಿಂದ ಹೊಂಗಸಂದ್ರ ಮಾತ್ರವಲ್ಲದೇ ಇತರೆಡೆ ಸೋಂಕು ಹಬ್ಬಿರುವ ಭೀತಿ

ಬೆಂಗಳೂರು(ಏ.26); ಬಿಹಾರದ ಮೂಲದ ವ್ಯಕ್ತಿಯಿಂದ ಹೊಂಗಸಂದ್ರದಲ್ಲಿ ಸ್ಫೋಟಗೊಂಡ ಕೊರೋನಾ ಬಾಂಬ್‌ಗೆ ಈವರೆಗೆ ಬರೋಬ್ಬರಿ 28 ಮಂದಿಗೆ ಸೋಂಕು ಹಬ್ಬಿದ್ದು, ಈ ಎಲ್ಲ ಸೋಂಕಿತರು ಮತ್ತು ಶಂಕಿತರು ತರಕಾರಿ, ದಿನಸಿ, ಕೂಲಿ ಕೆಲಸಕ್ಕಾಗಿ ಹೊಂಗಸಂದ್ರ ಹಾಗೂ ಸುತ್ತಮುತ್ತಲ ಸಾಕಷ್ಟುಪ್ರದೇಶದಲ್ಲಿ ಸುತ್ತಾಟ ನಡೆಸಿರುವುದರಿಂದ ಸೋಂಕು ಸಮುದಾಯಕ್ಕೆ ಹರಡಿದ ಭೀತಿ ಉಂಟಾಗಿದೆ.

"

ಹೊಂಗಸಂದ್ರದಲ್ಲಿ ಒಬ್ಬ ಬಿಹಾರಿ ಮೂಲದ ವ್ಯಕ್ತಿಯಿಂದ ಆರಂಭಗೊಂಡು ಕೊರೋನಾ ಸೋಂಕು ಇದೀಗ 30ರ ಗಡಿಗೆ ಬಂದಿದ್ದು, ಭಾನುವಾರ ಮತ್ತು ಸೋಮವಾರ ಮತ್ತಷ್ಟುಸೋಂಕಿತರು ಪತ್ತೆಯಾಗುವ ಸಾಧ್ಯತೆಗಳಿವೆ. ಈ ನಡುವೆ ಬಿಹಾರಿ ಸೇರಿದಂತೆ 29 ಮಂದಿ ಸೋಂಕಿತರು ಲಾಕ್‌ಡೌನ್‌ ನಡುವೆಯೂ ಕೂಲಿ ಕೆಲಸಕ್ಕಾಗಿ ಮಂಗಮ್ಮಪಾಳ್ಯ ಸೇರಿದಂತೆ ಇತರೆಡೆ ಹೋಗಿದ್ದಾರೆ. ಹೀಗಾಗಿ, ಕೊರೋನಾ ಸೋಂಕು ಕೇವಲ ಹೊಂಗಸಂದ್ರದ ವಿದ್ಯಾಜ್ಯೋತಿ ನಗರಕ್ಕೆ ಸೀಮಿತವಾಗದೇ ಇತರೆ ಪ್ರದೇಶಗಳಿಗೆ ಹಬ್ಬಿರುವ ಆತಂಕ ಉಂಟಾಗಿದೆ. ಇನ್ನು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹೊಂಗಸಂದ್ರದಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಸೋಂಕಿನ ಮೂಲದ ಬಗ್ಗೆ ಬಾಯಿ ಬಿಡದ ಬಿಹಾರಿ!

ಇನ್ನು ಶನಿವಾರ ಹೊಂಗಸಂದ್ರದ ವಿದ್ಯಾಜ್ಯೋತಿ ನಗರದಲ್ಲಿ ಎರಡನೇ ಸುತ್ತಿನ ಸ್ವಚ್ಛತಾ ಕಾರ್ಯಾಚರಣೆ ಹಾಗೂ ಆರೋಗ್ಯ ತಪಾಸಣೆ ನಡೆಸಿದರು. ಕೊರೋನಾ ಸೋಂಕು ಕಾಣಿಸಿಕೊಂಡ ಭಾಗದ ಕಟ್ಟಡದ ಭಾಗದಲ್ಲಿ ಸಂಪೂರ್ಣ ಸ್ಯಾನಿಟೈಸರ್‌ ಮಾಡಲಾಗಿದೆ. ಅಲ್ಲದೆ, ಈ ಭಾಗಗಳಲ್ಲಿ ಖಾಲಿ ಇರುವ 50ಕ್ಕೂ ಹೆಚ್ಚು ಮನೆಗಳ ಕಿಟಕಿ ತೆಗೆದು ಕೊರೋನಾ ಸೋಂಕು ದ್ರಾವಣ ಸಿಂಪಡಣೆ ಮಾಡಲಾಗಿದೆ.

ವಿದ್ಯಾಜ್ಯೋತಿ ನಗರದ ಕಂಟೈನ್ಮೆಂಟ್‌ ಜೋನ್‌ ಹಾಗೂ ಕ್ಲಸ್ಟರ್‌ ಭಾಗದಲ್ಲಿನ ಜನರ ಆರೋಗ್ಯ ತಪಾಸಣೆ ಮುಂದುವರಿಸಲಾಗಿದೆ. ಇದಕ್ಕೆ ಆರೋಗ್ಯ ಸಿಬ್ಬಂದಿಯ 15 ತಂಡಗಳನ್ನು ರಚನೆ ಮಾಡಲಾಗಿದ್ದು, ತಲಾ ಒಂದು ತಂಡ 50 ರಿಂದ 60 ಮನೆಗಳಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮುಂದಿನ 11 ದಿನಗಳ ಕಾಲ ಈ ಭಾಗದಲ್ಲಿ ಆಶಾ ಕಾರ್ಯಕರ್ತರು ಪ್ರತಿದಿನ ಪ್ರತಿಮನೆ ಭೇಟಿ ಮಾಡಿ ವಿವರ ಸಂಗ್ರಹಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ಈ ಭಾಗದಲ್ಲಿ ಹೆಲ್ತ್‌ ಸೆಂಟರ್‌ ಸಹ ತೆರೆಯಲಾಗಿದೆ. ಇದರಲ್ಲಿ ಒಬ್ಬರು ವೈದ್ಯರು ಹಾಗೂ ಇಬ್ಬರು ನರ್ಸ್‌ಗಳು ಇರಲಿದ್ದಾರೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು ಈವರೆಗೆ 1,271 ಮನೆಗಳಲ್ಲಿನ 3,400 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಆದರೆ, ಇವರಲ್ಲಿ ಯಾರಿಗೂ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಹೊಸದಾಗಿ ಪತ್ತೆಯಾಗುತ್ತಿರುವ ಪ್ರಕರಣಗಳು ಈಗಾಗಲೇ ಕ್ವಾರೆಂಟೈನ್‌ ಮಾಡಲಾದ ಪ್ರಾಥಮಿಕ ಸಂಪರ್ಕಿರಲ್ಲಿ ಎಂದು ವಿಶೇಷ ಆಯುಕ್ತ ಲೋಕೇಶ್‌ ಸ್ಪಷ್ಟಪಡಿಸಿದ್ದಾರೆ.

ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಗಗನಕ್ಕೆ!

ದಿನಸಿ, ತರಕಾರಿ ಖರೀದಿಗೆ ಸಮಯ ನಿಗದಿ

ಹೊಂಗಸಂದ್ರದಲ್ಲಿ ಜನ ಆಹಾರ ದಿನಸಿ, ಹಣ್ಣು ಹಾಗೂ ಅಗತ್ಯ ವಸ್ತುಗಳನ್ನು ಖರೀದಿಗೆ ಸಮಯ ನಿಗದಿ ಪಡಿಸಲಾಗಿದ್ದು, ಬೆಳಗ್ಗೆ 8ರಿಂದ 10 ಹಾಗೂ ಸಂಜೆ 4ರಿಂದ 6ಕ್ಕೆ ಸಮಯ ಮಾತ್ರ ಜನರು ಮಾಸ್ಕ್‌ ಧರಿಸಿ ಹೊರ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡಬೇಕೆಂದು ಕಟ್ಟು ನಿಟ್ಟಾಗಿ ಜನರಿಗೆ ಸೂಚನೆ ನೀಡಲಾಗಿದೆ.

ಹಾಲನ್ನು ಮಾತ್ರ ಉಚಿತವಾಗಿ ನೀಡುತ್ತಿದ್ದು, ಅದನ್ನು ಸ್ವಯಂ ಸೇವಕರ ಸಹಕಾರದಿಂದ ಅವಶ್ಯಕವಿರುವ ಕುಟುಂಬಗಳಿಗೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ