
ಇಂಡಿ(ಜ.25): ಇಂಡಿ ಪೊಲೀಸರ ಕಾರ್ಯಾಚರಣೆ ಫಲವಾಗಿ ಬೆಳಗಾವಿ ಮೂಲದ ಹನಿಟ್ರ್ಯಾಪ್ ಸುಂದರಿ ಸೇರಿ ಮೂವರನ್ನು ಬಂಧಿಸಲಾಗಿದೆ. ವಿಜಯಪುರದ ಉದ್ಯಮಿ ಸುನೀಲ್ ಪಾಟೀಲ್ ಎಂಬಾತನಿಗೆ ವಂಚಿಸಿದ್ದ ಮಹಿಳೆ ಮತ್ತು ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 18 ರಂದು ಉದ್ಯಮಿಯ ಸುಲಿಗೆ ಮಾಡಿದ್ದ ಈ ತಂಡ, ಫೇಸಬುಕ್ ನಲ್ಲಿ ಸ್ನೇಹ ಬೆಳೆಸಿ ಉದ್ಯಮಿಯ ನಂಬರ್ ಪಡೆದು ಹನಿಟ್ರ್ಯಾಪ್ ಮಾಡಿತ್ತು ಎನ್ನಲಾಗಿದೆ.
ಇಂಡಿಯಲ್ಲಿದ್ದ ತನ್ನ ಸ್ನೇಹಿತೆಯ ಬ್ಯೂಟಿ ಪಾರ್ಲರ್ ಗೆ ಕರೆಯಿಸಿ ಖೆಡ್ಡಾಗೆ ಕೆಡವಿದ್ದ ತಂಡ, ಬಳಿಕ ನಾವು ಮಾಧ್ಯಮದವರು ನಿನ್ನ ವಿಡಿಯೋ ಪ್ರಸಾರ ಮಾಡ್ತೆವೆ ಎಂದು ಹೆದರಿಸಿ 24ಸಾವಿರ ನಗದು, ಚಿನ್ನದ ಚೈನ್, ಚಿನ್ನದ ಕಡಗ ಕಿತ್ತುಕೊಂಡು ಪರಾರಿಯಾಗಿದ್ದರು
ಬಂಧಿತರನ್ನು ಬೆಳಗಾವಿ ಮೂಲದ ಮಹಿಳೆ, ಇಂಡಿಯ ವಿಠ್ಠಲ ವಡ್ಡರ, ಮುರುಗೇಶ ಉಳ್ಳಾಗಡ್ಡಿ ಎಂದು ಗುರುತಿಸಲಾಗಿದ್ದು, ಇನ್ನೋರ್ವ ಆರೋಪಿ ಲಿಂಗರಾಜ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ