ಗುದ್ದಿದ್ರೆ ಕಿಲ್ಲರ್ ಬಿಎಂಟಿಸಿ ಅಂತಾರೆ: ಬ್ರೇಕ್ ಹಾಕಿದ್ರೆ ನೊಟೀಸ್ ಕೊಡ್ತಾರೆ!

Published : Jan 25, 2019, 02:03 PM ISTUpdated : Jan 25, 2019, 02:06 PM IST
ಗುದ್ದಿದ್ರೆ ಕಿಲ್ಲರ್ ಬಿಎಂಟಿಸಿ ಅಂತಾರೆ: ಬ್ರೇಕ್ ಹಾಕಿದ್ರೆ ನೊಟೀಸ್ ಕೊಡ್ತಾರೆ!

ಸಾರಾಂಶ

ಬಿಎಂಟಿಸಿ ಚಾಲಕರೇ ಬ್ರೇಕ್ ಮೇಲೆ ಕಾಲಿಡೊ ಮುನ್ನ ಎಚ್ಚರ| ಆ್ಯಕ್ಸಿಡೆಂಟ್ ಆಗುತ್ತೆ ಅಂತ ಬ್ರೇಕ್ ತುಳಿದ್ರೆ ಕೆಲಸಕ್ಕೇ ಬರಬಹುದು ಆಪತ್ತು| ಬ್ರೇಕ್ ತುಳಿದರೆ ಸಂಸ್ಥೆಗೆ ಆಗುತ್ತಂತೆ ಭಾರೀ ನಷ್ಟ| 77 ಬಾರಿ ಬ್ರೇಕ್ ತುಳಿದು ನೋಟಿಸ್ ಪಡೆದ ಡ್ರೈವರ್.

ಬೆಂಗಳೂರು(ಜ.25): ಬಿಎಂಟಿಸಿ ಚಾಲಕರ ಅವಸ್ಥೆ ನೋಡಿ. ಅತ್ತ ಹುಲಿ ಇತ್ತ ಪುಲಿಯಂತಾಗಿದೆ ಅವರ ಪಾಡು. ನಗರದ ಜನನಿಬೀಡ ರಸ್ತೆಯಲ್ಲಿ ಕಣ್ತಪ್ಪಿನಿಂದ ಅಪಘಾತವಾದರೆ ಕಿಲ್ಲರ್ ಬಿಎಂಟಿಸಿ ಅಂತಾ ಮುಗಿಬೀಳ್ತಾರೆ. ಅದೇ ನಿಧಾನಗತಿಯ ಚಾಲನೆ ಮಾಡಿ, ನಗರದ ಹಂಪ್ ಗಳನ್ನೆಲ್ಲಾ ದಾಟಿ, ಅಕ್ಕಪಕ್ಕ ವಾಹನಗಳಿಗೆಲ್ಲಾ ದಾರಿ ಮಾಡಿಕೊಟ್ಟರೆ ಜಾಸ್ತಿ ಬ್ರೇಕ್ ಹಾಕಿದ್ದಕ್ಕಾಗಿ ನೊಟೀಸ್ ಕೊಡ್ತಾರೆ.

ಹೌದು, ಚಾಲನೆ ವೇಳೆ ಅತಿಯಾಗಿ ಬ್ರೇಕ್ ಹಾಕಿದ ಅಂತಾ ಬಿಎಂಟಿಸಿ 33ನೇ ಘಟಕದ ವ್ಯವಸ್ಥಾಪಕರೊಬ್ಬರು ಚಾಲಕನಿಗೆ ನೊಟೀಸ್ ನೀಡಿರುವ ಘಟನೆ ನಡೆದಿದೆ.

ಚಾಲಕ ಒಟ್ಟು 77ಬಾರಿ ಬ್ರೇಕ್ ತುಳಿದಿರುವುದು ಐಟಿಎಸ್ ನಿಂದ ಬೆಳಕಿಗೆ ಬಂದಿದ್ದು, ಇದಕ್ಕೆ ಉತ್ತರ ಕೋರಿ ಘಟಕ ವ್ಯವಸ್ಥಾಪಕರು ನೋಟಿಸ್ ನೀಡಿದ್ದಾರೆ.

ಬಸ್ ಚಾಲನೆ ಸಂದರ್ಭದಲ್ಲಿ ಅತಿಯಾಗಿ ಬ್ರೇಕ್ ತುಳಿದರೆ ಕೆಎಂಪಿಎಲ್ ಕಡಿಮೆಯಾಗಿ ಇಂಧನ ಬಳಕೆ ಜಾಸ್ತಿಯಾಗುತ್ತದೆ. ಇದರಿಂದ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂಬುದು ಘಟಕ ವ್ಯವಸ್ಥಾಪಕರ ವಾದ.

ಆದರೆ ಟ್ರಾಫಿಕ್ ನ್ನೇ ಹೊದ್ದು ಮಲಗಿರುವ ಬೆಂಗಳೂರಿನಂತ ಮಹಾನಗರದಲ್ಲಿ ಬ್ರೇಕ್ ಹಾಕದೇ ಬಸ್ ಹೇಗೆ ಓಡಿಸೋದು ಎಂಬುದು ಚಾಲಕರ ಪ್ರಶ್ನೆಯಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!
ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!