ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್‌ಗೆ ಹಿಂದೂಗಳೇ ಬೆಂಬಲ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯ ಮದುವೆಗೆ ಬೆಂಬಲ ನೀಡಿದ ಗೋಬಿ ಸ್ಟಾಲ್ ಮಾಲೀಕನ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರವೆಂದು ಗೋಬಿ ಮಹೇಶ್ ದೂರು ದಾಖಲಿಸಿದ್ದಾರೆ.
ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಗೆ ಹಿಂದೂಗಳಿಂದಲೇ ಬೆಂಬಲ ನೀಡಿರುವ ಆರೋಪವೊಂದು ಕೇಳಿ ಬಂದಿದೆ. ಅದು ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸಲು ಹಿಂದೂ ಯುವಕನೇ ಬೆಂಬಲ ನೀಡಿರುವ ಆರೋಪ. ಮದುವೆ ಮಾಡಿಸಿರುವ ಗೋಬಿ ಸ್ಟಾಲ್ ಮಾಲೀಕನ ವಿರುದ್ಧ ಹಿಂದೂ ಸಂಘಟನೆಗಳು ಧರ್ಮ ದ್ರೋಹಿ ಎಂದು ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಎಂದು ಗೋಬಿ ಮಹೇಶ್ ದೂರನ್ವಯ ಬಜರಂಗದಳದ ಸಂಚಾಲಕ ಸೇರಿದಂತೆ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಹಿಂದೂ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲು
ಚಿಕ್ಕಮಗಳೂರಿನ ಹೆಣ್ಣು ಮಕ್ಕಳ ಪೋಷಕರೇ ಎಚ್ಚರಿಕೆ.!! ಗೋಬಿ ಮಂಚೂರಿ ತಿನ್ನಕ್ಕೆ ಹೋಗುವ ಹೆಣ್ಣು ಮಕ್ಕಳನ್ನು ಪಾರಿಜಾತ ಗೋಬಿ ಸ್ಟಾಲ್ ಮಹೇಶ ಮುಸಲ್ಮಾನರ ಜೊತೆ ಹಿಂದೂ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸುತ್ತಿದ್ದಾನೆ ಎಚ್ಚರವಹಿಸಿ…ಎಚ್ಚರವಹಿಸಿ…..!!!!! ಎಂದು ಫೇಸ್ಬುಕ್ ನಲ್ಲಿ ಹಿಂದೂ ಪರ ಸಂಘಟನೆಯವರು ಪೋಸ್ಟ್ಮಾಡಿದ್ದಾರೆ.ಕಳೆದ ಎರಡು ದಿನಗಳಿಂದ ಈ ಪೋಸ್ಟ್ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ಸದ್ದು ಮಾಡಿತ್ತು. ಹೌದು ಚಿಕ್ಕಮಗಳೂರು ನಗರದ ತಾಲ್ಲೂಕ್ ಕಛೇರಿ ಪಕ್ಕದ ರಸ್ತೆಯಲ್ಲಿ ಗೋಬಿಮಂಚೂರಿ ವ್ಯಾಪಾರಿ ಮಹೇಶ್ ಎಂಬಾತನ ವಿರುದ್ದ ಪೋಸ್ಟ್ ಹಾಕಲಾಗಿತ್ತು. ಇದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹ್ಮದ್ ಎನ್ನುವ ಯುವಕನೊಂದಿಗೆ ಹಿಂದೂ ಹುಡುಗಿ ಯುವರಾಣಿಯನ್ನು ಅಂಗಡಿ ಮಾಲೀಕ ಮಹೇಶ್ ಮದುವೆ ಮಾಡಿಸಿದ್ದಾರೆ. ಮುಸ್ಲಿಂ ಯುವಕನ್ನು ಹಿಂದೂ ಯುವತಿಯೊಂದಿಗೆ ಮದುವೆ ಮಾಡಿಸಿದ್ದಾರೆಂದು ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ನನ್ನ ವಿರುದ್ದ ಅಪಪ್ರಚಾರ ಮಾಡುಲಾಗುತ್ತಿದೆ ಎಂದು ಗೋಬಿಮಂಚೂರಿ ವ್ಯಾಪಾರಿ ಮಹೇಶ್ ನಗರದ ಸೆನ್ ಠಾಣೆಗೆ ಶ್ಯಾಮ್ ಗೌಡ ಹಾಗೂ ಸಾಗರ್, ಚಿಕ್ಕಮಗಳೂರು ವಿಶ್ವ ಹಿಂದೂ ಪರಿಷದ್ ಬಜರಂಗದಳ ಫೇಸ್ಬುಕ್ ಪೇಜ್ ವಿರುದ್ಧ ದೂರು ನೀಡಿದ್ದರು.
ಇದನ್ನೂ ಓದಿ: ದ್ವೇಷ ಭಾಷಣ ಆರೋಪ, ಸೂಲಿಬೆಲೆ ವಿರುದ್ಧ ಎಫ್‌ಐಆರ್ | 'ಅವರು ಮಾಡಿದ್ರೆ ಪ್ರೀತಿ, ನಾವು ಮಾಡಿದ್ರೆ ಸಂಘರ್ಷ ಹೇಗೆ ಆಗುತ್ತೆ?'
ಹಿಂದೂ ಹೆಣ್ಣು ಮಕ್ಕಳಿಗೆ ಜಾಗೃತಿ :
ಇದೀಗ ಸೆನ್ ಪೊಲೀಸರು ಬಿಎನ್ಎಸ್ 353(1) (ಸಿ).353(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ದಿನದ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಲವ್ ಜಿಹಾದ್ ಹೆಸರಲ್ಲಿ ಅಪಹರಿಸಿದ್ದ ಇದರ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಗೆ ಹಿಂದೂಗಳಿಂದಲೇ ಬೆಂಬಲ ನೀಡಿರುವ ಆರೋಪಕ್ಕೆ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಬಗ್ಗೆ ಹಿಂದೂ ಪರ ಸಂಘಟನೆಗಳ ಅಸಮಾಧಾನ ಹೊರಹಾಕಿದ್ದು ಹಿಂದೂ ಹೆಣ್ಣು ಮಕ್ಕಳಿಗೆ ಜಾಗೃತಿ ಅಭಿಯಾನಕ್ಕೆ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಮುಂದಾಗಿದೆ.ಅಲ್ಲದೆ ಇಬ್ಬರ ಮದುವೆಗೂ ಎರಡು ಕಡೆ ಮನೆಯವರಿಂದ ಯಾವುದೇ ವಿರೋಧವೂ ವ್ಯಕ್ತವಾಗುತ್ತಿಲ್ಲ, ಹಿಂದೂ ಸಂಘಟನೆಗಳಿಂದ ಲವ್ ಜಿಹಾದ್ ಆರೋಪ ಮಾಡಿದ್ದು, ಚಿಕ್ಕಮಗಳೂರು ನಗರದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.