
ಬಾಗಲಕೋಟೆ(ಜೂ.09): ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ಪ್ರತಿಯೊಂದು ಕಡೆಗಳಲ್ಲಿ ಸ್ಕ್ಯಾನಿಂಗ್, ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಅಪ್ಪ ತಪ್ಪಿ ಕೆಮ್ಮಿದರೆ, ಕಣ್ಣು ಬಿಡುವುದರೊಳಗೆ ಯಾವುದಾದರೂ ಕ್ವಾರಂಟೈನ್ ಕೇಂದ್ರಲ್ಲಿರುತ್ತೀರಿ. ಇತ್ತ ರಾಜ್ಯ ಸಭಾ ಚುನಾವಣೆಗೆ ನಾಮ ಪತ್ರಸಲ್ಲಿಸಲು ಸ್ವತಂತ್ರ ಅಭ್ಯರ್ಥಿ ಸಂಗಮೇಶ ಚಿಕ್ಕನರಗುಂದ, ಹರಸಾಹಸ ಪಟ್ಟ ಘಟನೆ ನಡೆದಿದೆ.
ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸಿದ್ಯಾರು..? ರಾಜ್ಯಸಭಾ ಅಭ್ಯರ್ಥಿಯ ಸೂತ್ರಧಾರಿ ಇವರೇ
ಅವರಸ ಅವರಸದಲ್ಲಿ ಎಲ್ಲಾ ತಯಾರಿ ಮಾಡಿಕೊಂಡ ಸಂಗಮೇಶ ಚಿಕ್ಕನರಗುಂದ ನಾಮಪತ್ರ ಸಲ್ಲಿಸಲು ಚುನವಣಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿ, ಸಂಗಮೇಶ್‌ಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿದ್ದಾರೆ. ಈ ವೇಳೆ ದೇಹದ ತಾಪಮಾನ 98.5 ಎಂದು ತೋರಿಸಿದೆ. ನಿಗದಿತ ಮಿತಿಗಿಂತ ಹೆಚ್ಚಿದ್ದ ಕಾರಣ ಸಿಬ್ಬಂದಿ ಸಂಗಮೇಶ್ ಚಿಕ್ಕನರಗುಂದ ಅವರನ್ನು ಒಳ ಪ್ರವೇಶಿಸಲು ಬಿಡಲಿಲ್ಲ.
5 ನಿಮಿಷದಲ್ಲಿ ಸಲ್ಲಿಕೆ ಮಾಡಿ ಹಿಂತಿರುಗುತ್ತೇನೆ ಎಂದೆಲ್ಲಾ ಹೇಳಿದರೂ ಸಿಬ್ಬಂದಿ ಬಿಡಲೇ ಇಲ್ಲ. ಅಫಿಡವಿತ್ ಮರೆತಿದ್ದ ಕಾರಣ ತರಾತರಿಯಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಲು ಬಂದ ಕಾರಣ ದೇಹದ ತಾಪಮಾನ ಹೆಚ್ಚಾಗಿದೆ. ಬಳಿಕ ಕೆಲ ಕಾಲ ವಿಶ್ರಾಂತಿ ಪಡೆದು. 2ನೇ ಬಾರಿಗೆ ನಾಮ ಪತ್ರ ಸಲ್ಲಿಸಲು ಸಂಗಮೇಶ್ ಆಗಮಿಸಿದ್ದಾರೆ.
2ನೇ ಬಾರಿ ನಾಮಪತ್ರ ಸಲ್ಲಿಸಲು ಬಂದಾಗ ಚುನಾವಣಾ ಸಿಬ್ಬಂದಿ ಸ್ಕ್ಯಾನಿಂಗ್ ಮಾಡಿದ್ದಾರೆ. ಈ ವೇಳೆ ದೇಹ ತಾಪಮಾನ 97.7 ಇದ್ದ ಕಾರಣ ಸಂದೇ. ಎರಡನೇ ಬಾರಿಗೆ ಬಂದಾಗ ದೇಹದ ತಾಪಮಾನ ಕಡಿಮೆ ಇದ್ದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ ಕಚೇರಿ ಒಳಪ್ರವೇಶಿಸಲು ಅವಕಾಶ ನೀಡಿದ್ದಾರೆ. ಇಷ್ಟೇ ಅಲ್ಲ ಸಂಗಮೇಶ್ ನಿಟ್ಟುಸಿರು ಬಿಟ್ಟಿದ್ದಾರೆ.
ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸಂಗಮೇಶ್ ಚಿಕ್ಕನರಗುಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ