
ಆರ್‌ಸಿಬಿ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದಿದೆ. 18 ವರ್ಷಗಳ ಕಾಯುವಿಕೆ ಎಷ್ಟು ಕಷ್ಟ ಅಂತ ಈಗ ಗೊತ್ತಾಗಿದೆ. ಈಗ ಎಲ್ಲೆಲ್ಲೂ ಸಂಭ್ರಮ ಮನೆಮಾಡಿದೆ ಆರ್‌ಸಿಬಿ ಅಭಿಮಾನಿಗಳು ಹಬ್ಬದಂತೆ ಸೆಲೆಬ್ರೇಷನ್ ಮಾಡುತ್ತಿದ್ದಾರೆ.
18 ವರ್ಷಗಳ ತಪಸ್ಸು - ಐಪಿಎಲ್ 2025
ಆರ್‌ಸಿಬಿ ಆ ನೋವನ್ನು ಮೆಟ್ಟಿ ನಿಂತು ಕೊನೆಗೂ ಟ್ರೋಫಿಯನ್ನು ಗೆದ್ದುಕೊಂಡಿತು, 'ಇದು ಈ ಸಲ ಕಪ್ ನಮ್ದೇ, ನಾವೇ ಆ ಕಪ್, ಆರ್‌ಸಿಬಿ ತಂಡದಲ್ಲಿ ಹಲವು ನಾಯಕ ಬದಲಾವಣೆಗಳ ಹೊರತಾಗಿಯೂ, ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ಅಂತಿಮವಾಗಿ ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು, ಬೆಂಗಳೂರು ಅಭಿಮಾನಿಗಳಿಗೆ ಸಂತೋಷ ತಂದಿತು.
ಕೊಹ್ಲಿ ಜೆರ್ಸಿ ನಂಬರ್ 18
ಈ ಐಪಿಎಲ್ 2025 ಟ್ರೋಫಿಗೂ ವಿರಾಟ್ ಕೊಹ್ಲಿಗೂ ಸಂಬಂಧವಿದೆ. ವಿರಾಟ್ ಕೊಹ್ಲಿಯ ಜೆರ್ಸಿ ಸಂಖ್ಯೆ 18. ಈ ಸೀಸನ್ 18ನೇ ಐಪಿಎಲ್ 2025 ಸರಣಿಯಾಗಿದೆ. ಈ 18ನೇ ಐಪಿಎಲ್ ಸರಣಿಯಲ್ಲಿ ಆರ್‌ಸಿಬಿ ತಮ್ಮ ಮೊದಲ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಬದಲಿ ಆಟಗಾರನಾಗಿ ಬಂದು ಟ್ರೋಪಿ ಗೆಲ್ಲಿಸಿಕೊಟ್ಟ ರಜತ್
2022ರಲ್ಲಿ ಆರ್‌ಸಿಬಿ ತಂಡಕ್ಕೆ ಬದಲಿ ಆಟಗಾರನಾಗಿ ಸೇರ್ಪಡೆಗೊಂಡಿದ್ದ ರಜತ್ ಪಾಟೀದಾರ್, ಈ ಬಾರಿ ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. 2022ರ ಹರಾಜಿನಲ್ಲಿ ರಜತ್ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ. ಬಳಿಕ ಲುವ್‌ನಿತ್ ಸಿಸೋಡಿಯಾ ಗಾಯಗೊಂಡ ಕಾರಣ ಆರ್‌ಸಿಬಿ ಬದಲಿ ಆಟಗಾರನಾಗಿ ರಜತ್‌ರನ್ನು ಸೇರಿಸಿತ್ತು. ಕಳೆದ ವರ್ಷ ಅವರನ್ನು ತಂಡಕ್ಕೆ ರಿಟೈನ್ ಮಾಡಿಕೊಂಡಿದ್ದ ತಂಡ, ಈ ಸಲ ಐಪಿಎಲ್‌ಗೂ ಮುನ್ನ ನಾಯಕತ್ವ ವಹಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ