Corona Update ಕರ್ನಾಟಕದಲ್ಲಿ ಕೊರೋನಾ ಬ್ಲಾಸ್ಟ್, ಬೆಂಗಳೂರು ಕೋವಿಡ್ ಹಾಟ್‌ಸ್ಪಾಟ್

By Suvarna News  |  First Published Jan 6, 2022, 9:32 PM IST

* ರಾಜ್ಯದಲ್ಲಿ ಕೊರೋನಾ ಬಿಗ್ ಬ್ಲಾಸ್ಟ್
* ಕರ್ನಾಟಕದಲ್ಲಿ ಒಂದೇ ದಿನ 5 ಸಾವಿರ ಗಡಿದಾಟಿದ ಕೊರೋನಾ ಕೇಸ್
* ಸಿಲಿಕಾನ್ ಸಿಟಿ ಬೆಂಗಳೂರು ಕೊರೋನಾ ಹಾಟ್‌ಸ್ಪಾಟ್


ಬೆಂಗಳೂರು, (ಜ.06): ರಾಜ್ಯದಲ್ಲಿ ಇಂದು(ಗುರುವಾರ) ಕೊರೋನಾ (Coronavirus) ಮಹಾಸ್ಪೋಟವಾಗಿದೆ. ಒಂದೇ ದಿನ ಬರೋಬ್ಬರಿ 5031 ಪಾಸಿಟಿವ್ ಕೇಸ್ ಪತ್ತೆಯಾಗಿವೆ. 

 ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,22,603 ಕ್ಕೆ ಏರಿಕೆಯಾಗಿದೆ. ಇದುವರೆಗೆ 29,62,043 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 38,358 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ  22,173 ಏರಿಕೆಯಾಗಿದೆ. ಪಾಸಿಟಿವಿಟಿ ದರ ಶೇಕಡ 3.95 ರಷ್ಟು ಇದೆ.

Tap to resize

Latest Videos

undefined

Weekend Curfew ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಇರುತ್ತಾ? ಡಿಸಿ ವಿವೇಚನೆಗೆ ಬಿಟ್ಟ ಅಬಕಾರಿ ಇಲಾಖೆ

ರಾಜಧಾನಿ ಬೆಂಗಳೂರಿನಲ್ಲಿ(Bengaluru) ಇಂದು ಹೊಸದಾಗಿ 4324 ಜನರಿಗೆ ಸೋಂಕು ತಗುಲಿದ್ದು, 172 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. 18,913 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ, ರಾಯಚೂರು, ಯಾದಗಿರಿ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ಕೊರೋನಾ ಕೇಸ್ ಪತ್ತೆಯಾಗಿಲ್ಲ. ಇನ್ನು ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೊರೋನಾ ಸಾವಿನ ಬಗ್ಗೆ ವರದಿಯಾಗಿಲ್ಲ.

ಬಳ್ಳಾರಿ 21, ಬೆಳಗಾವಿ 64, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 4324, ಚಿಕ್ಕಬಳ್ಳಾಪುರ 20, ದಕ್ಷಿಣಕನ್ನಡ 106, ಧಾರವಾಡ 48, ಗದಗ 11, ಹಾಸನ 47, ಕಲಬುರ್ಗಿ 25, ಕೊಡಗು 19, ಕೋಲಾರ 14, ಮಂಡ್ಯ 66, ಮೈಸೂರು 65, ಶಿವಮೊಗ್ಗ 16, ತುಮಕೂರು 20, ಉಡುಪಿ 92, ಉತ್ತರಕನ್ನಡ 13, ವಿಜಯಪುರ 11 ಹೊಸ ಪ್ರಕರಣ ವರದಿಯಾಗಿವೆ. 

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 3.95 ರಷ್ಟು ಇದೆ. ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಶೇಕಡ 7.5 ರಷ್ಟು ಇದೆ. ಬೆಂಗಳೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇಂದು 1,27,194 ಕೋವಿಡ್ ಪರೀಕ್ಷೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
 

Today's Media Bulletin 06/01/2022
Please click on the link below to view bulletin.https://t.co/sHn4cTkDzO pic.twitter.com/5AcleRuDdP

— K'taka Health Dept (@DHFWKA)

 

ರಾಜ್ಯದಲ್ಲಿ 2 ವಾರ ವೀಕೆಂಡ್ ಕರ್ಫ್ಯೂ 
ರಾಜ್ಯದಲ್ಲಿ ಕೊರೋನಾ ವೈರಸ್(Coronavrius) ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಬೆಂಗಳೂರಲ್ಲಿ ಮಾತ್ರ ಶಾಲೆಗಳನ್ನ ಎರಡು ವಾರ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಇಂದು(ಮಂಗಳವಾರ) ತಜ್ಞರ ಜೊತೆಗಿನ ಸಭೆ ಬಳಿಕ ಸಚಿವರಾದ ಅಶೋಕ್, ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,  ಇದೇ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ (weekend Curfew)  ಇರಲಿದೆ ಎಂದು  ಸ್ಪಷ್ಟಪಡಿಸಿದರು. 

ಕರ್ನಾಟಕದಾದ್ಯಂತ ಎರಡು ವಾರ ವೀಕೆಂಡ್ ಜಾರಿಯಲ್ಲಿರಲಿದೆ. ಇನ್ನು ಬೆಂಗಳೂರಲ್ಲಿ ಮಾತ್ರ ಎರಡು ವಾರ ಶಾಲೆ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು. 

ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳು (ಜನವರಿ 6ರಿಂದ) 10 ಮತ್ತು 12ನೇ ತರಗತಿ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳನ್ನೂ ಬಂದ್ ಮಾಡಿ ಆನ್‌ಲೈನ್‌ ಮೂಲಕ ನಡೆಸಲು ನಿರ್ಧರಿಸಲಾಗಿದೆ.

 

click me!