ರೈಲು ನಿಲ್ಲಿಸಿ ಕೇರಳ ವ್ಯಕ್ತಿಯ ಜೀವ ಉಳಿಸಿದ ಹೆಬ್ಬಗೋಡಿ ಪೊಲೀಸರು; 5 ನಿಮಿಷ ತಡವಾಗಿದ್ರೂ ಅನಾಹುತ ಆಗ್ತಿತ್ತು! ನಡೆದಿದ್ದೇನು?

Kannadaprabha News   | Kannada Prabha
Published : Jun 12, 2026, 05:55 AM IST
Hebbagodi police stopped a train and saved the life of a Kerala man; what happened?

ಸಾರಾಂಶ

ಬೆಂಗಳೂರಿನಲ್ಲಿ ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹೆಬ್ಬಗೋಡಿ ಪೊಲೀಸರು ರಕ್ಷಿಸಿದ್ದಾರೆ. ಸಮಯಪ್ರಜ್ಞೆ ಮೆರೆದ ಪೊಲೀಸರು, ಕುರ್ಲಾ ಎಕ್ಸ್‌ಪ್ರೆಸ್ ರೈಲನ್ನು ತುರ್ತು ನಿಲುಗಡೆ ಮಾಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.

ಬೆಂಗಳೂರು (ಜೂ.12): ಚಲಿಸುವ ರೈಲಿಗೆ ಸಿಲುಕಿ ಆತ್ಮ೧ಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಎಕ್ಸ್‌ಪ್ರೆಸ್ ರೈಲನ್ನು ತುರ್ತು ನಿಲುಗಡೆ ಮಾಡಿಸಿ ಬುಧವಾರ ರಾತ್ರಿ ಹೆಬ್ಬಗೋಡಿ ಠಾಣೆ ಹೊಯ್ಸಳ ಪೊಲೀಸರು ರಕ್ಷಿಸಿದ್ದಾರೆ. ಕೇರಳ ಮೂಲದ ಅರ್ಜುನ್ (30) ಜೀವ ಉಳಿದಿದ್ದು, ಚಿಂತಲ ಮಡಿವಾಳ ಸಮೀಪ ರೈಲಿಗೆ ಸಿಲುಕಿ ಆತ್ಮ೧ಹತ್ಯೆಗೆ ರಾತ್ರಿ ಆತ ಮುಂದಾಗಿದ್ದ. ಈ ವೇಳೆ ತನ್ನನ್ನು ಕಾಪಾಡಲು ಬಂದ ಪೊಲೀಸರಿಂದ ತಪ್ಪಿಸಿಕೊಂಡು ರೈಲಿಗೆ ಸಿಲುಕಲು ಅರ್ಜುನ್‌ ಮುಂದಾಗಿದ್ದಾನೆ. ಕೊನೆಗೆ ರೈಲನ್ನೇ ನಿಲುಗಡೆ ಮಾಡಿಸಿ ಆತನನ್ನು ಪೊಲೀಸರು ರಕ್ಷಿಸಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ

ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ ರಾತ್ರಿ ಚಲಿಸುವ ರೈಲಿಗೆ ತಲೆಕೊಟ್ಟು ಪ್ರಾಣ ತ್ಯಾಗಕ್ಕೆ ಅರ್ಜುನ್ ನಿರ್ಧರಿಸಿದ್ದ. ಅಂತೆಯೇ ಚಿಂತಲ ಮಡಿವಾಳ ಬಳಿ ರೈಲ್ವೆ ಹಳಿಗಳ ಮೇಲೆ ಮಲಗಿದ್ದ ಆತನನ್ನು ಸಾರ್ವಜನಿಕರೊಬ್ಬರು ನೋಡಿದ್ದಾರೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಬುಧವಾರ ರಾತ್ರಿ 11.17ಕ್ಕೆ ಆತ ಕರೆ ಮಾಡಿ ತಿಳಿಸಿದ್ದಾನೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸರಿಗೆ ನಿಯಂತ್ರಣ ಕೊಠಡಿಯಿಂದ ತುರ್ತು ಸಂದೇಶ ರವಾನೆಯಾಗಿದೆ.

ಕರೆ ಬಂದ 5 ನಿಮಿಷಕ್ಕೆ ಸ್ಥಳಕ್ಕೆ ಬಂದ ಹೆಬ್ಬಗೋಡಿ ಪೊಲೀಸರು!

5 ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಠಾಣೆ ಹೊಯ್ಸಳ ವಾಹನದಲ್ಲಿ ಸಹಾಯಕ ಎಸ್‌ಐ ರವಿ ನಾಯಕ್(SI Ravi nayak) ಹಾಗೂ ಹೆಡ್ ಕಾನ್‌ಸ್ಟೇಬಲ್ ದೇವಂದ್ರಪ್ಪ(HC Devendrappa) ತೆರಳಿದ್ದಾರೆ. ಆದರೆ ಅಷ್ಟರಲ್ಲಿ ಅದೇ ಕುರ್ಲಾ ಎಕ್ಸ್‌ಪ್ರೆಸ್ ರೈಲು(Kurla express train) ಸನಿಹಕ್ಕೆ ಆಗಮಿಸುತ್ತಿತ್ತು. ಇತ್ತ ಪೊಲೀಸರನ್ನು ನೋಡಿದ ಕೂಡಲೇ ಅರ್ಜುನ್‌ ರೈಲು ಬರುವ ದಿಕ್ಕಿನ ಕಡೆಗೆ ಓಡಲು ಶುರು ಮಾಡಿದ್ದಾನೆ. ಈ ಅಪಾಯ ಅರಿತು ಸಮಯ ಪ್ರಜ್ಞೆ ಮೆರೆದ ಎಎಸ್‌ಐ ನಾಯಕ್, ತಕ್ಷಣವೇ ರೈಲ್ವೆ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕುರ್ಲಾ ಎಕ್ಸ್‌ಪ್ರೆಸ್ ತುರ್ತು ನಿಲುಗಡೆಗೆ ಮನವಿ ಮಾಡಿದ್ದಾರೆ. ಆಗ ರೈಲ್ವೆ ಮಾಸ್ಟರ್ ಅವರಿಂದ ಸಂದೇಶ ತಲುಪಿ ಹುಸ್ಕೂರು ರೈಲ್ವೆ ನಿಲ್ದಾಣದಲ್ಲಿ 45 ನಿಮಿಷ ರೈಲು ನಿಂತಿದೆ. ಈ ಮೂಲಕ ಅಮೂಲ್ಯ ಜೀವ ಉಳಿದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ರಕ್ಷಣಾ ಸಿಬ್ಬಂದಿಗೆ ಅಭಿನಂದನೆ: 

ಆತ್ಮ೧ಹತ್ಯೆ ಯತ್ನಿಸಿದವನ ಜೀವ ಉಳಿಸಿದ ಎಎಸ್ಐ ರವಿನಾಯಕ್ ಹಾಗೂ ದೇವೇಂದ್ರಪ್ಪ ಅವರನ್ನು ಎಲೆಕ್ಟ್ರಾನಿಕ್ಸ್ ಸಿಟಿ ವಿಭಾಗದ ಡಿಸಿಪಿ ಎ.ನಾರಾಯಣ್ ಅಭಿನಂದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Rice price hike: ಬೆಂಗಳೂರಿನಲ್ಲಿ ಅಕ್ಕಿ ದರ ದಿಢೀರ್ ಏರಿಕೆ! 26 ಕೆಜಿ ಚೀಲಕ್ಕೆ ₹150, ಪ್ರತಿ ಕೆಜಿಗೆ ಎಷ್ಟು? ಹೆಚ್ಚಳಕ್ಕೆ ಕಾರಣವೇನು?
DK Shivakumar: ಸಿಎಂ ಆದ ಬಳಿಕ ಮೋದಿ ಜತೆ ಡಿಕೆಶಿ ಮೊದಲ ಭೇಟಿ; ಪ್ರಧಾನಿ ಮುಂದೆ ಇಟ್ಟ 18 ಬೇಡಿಕೆಗಳಲ್ಲಿ ಏನಿದೆ?