
ಬೆಂಗಳೂರು (ಮೇ.8): ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ವಿಪರೀತ ಮಳೆಯಾಗಿದೆ. ಬಳ್ಳಾರಿ, ಕೊಡಗು, ಉತ್ತರ ಕನ್ನಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸುರಿದಿರುವ ಭಾರೀ ಮಳೆಗೆ ಹಲವು ಕಡೆ ಹಾನಿಯಾಗಿದೆ.
ಬೆಂಗಳೂರಿನಲ್ಲಿಂದು ಸುರಿದ ಭಾರೀ ಮಳೆಗೆ ಮೂರು ಮನೆಗಳು ಕುಸಿದು ಬಿದ್ದಿದೆ. ಬೆಂಗಳೂರಿನ ಪಿಇಎಸ್ ಕಾಲೇಜ್ ಬಳಿಯ ವೀರಭದ್ರ ನಗರದ ಸ್ಲಂನಲ್ಲಿ ಘಟನೆ ನಡೆದಿದ್ದು, ಮನೆ ಜೊತೆಗೆ ಅಪಾರ್ಟ್ ಮೆಂಟ್ ನ ತಡೆಗೋಡೆ ಸಮೇತ ಸಂಪೂರ್ಣ ನೆಲ ಸಮವಾಗಿದೆ. ಇಂದು ಸಂಜೆ ಸುಮಾರು 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಯಾರೂ ಅದೃಷ್ಟವಶಾತ್ ಯಾರಿಗೆ ಏನೂ ಆಗಿಲ್ಲ. ಆದ್ರೆ ವಸುಂಧರ ಕೃತಿಕಾ ಅಪಾರ್ಟ್ ಮೆಂಟ್ ನ ತಡೆ ಗೋಡೆ ಸಮೇತ ಕುಸಿದು ಬಿದ್ದ ಕಾರಣ ತಡೆಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು ಸಂಪೂರ್ಣ ಜಖಂ ಆಗಿದ್ದು ಮತ್ತೆರಡು ಕಾರುಗಳಿಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ.
ಇನ್ನು ಗೋಪಾಲ್ ಹಾಗೂ ಗೋವಿಂದಯ್ಯ ಎಂಬುವರ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನೆಲಸಮವಾಗಿದ್ದು, ಅಪಾರ್ಟ್ ಮೆಂಟ್ ತಡೆಗೋಡೆ ಸರಿಯಾಗಿ ಕಟ್ಟಿಲ್ಲದಿದ್ದೇ ಘಟನೆ ಕಾರಣ ಅಂತ ಸ್ಲಂ ನಿವಾಸಿಗಳು ಆರೋಪ ಮಾಡಿದ್ದಾರೆ.
ಆದ್ರೆ ಸ್ಲಂನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ, ಪ್ರತಿನಿತ್ತ ಬರುವ ಕೊಳಚೆ ನೀರಿನಿಂದ ಕಾಂಪೌಂಡ್ ವಾಲ್ ಕುಸಿದಿದಿ ಎಂದು ಅಪಾರ್ಟ್ ಅಸೋಸಿಯೇಷನ್ ನವರು ಹೇಳುತ್ತಿದ್ದಾರೆ. ಇನ್ನೂ ಹಲವು ಮನೆಗಳು ಬೀಳುವ ಸ್ಥಿತಿಯಲ್ಲಿದ್ದು, ಘಟನೆಯಾಗಿ ಹಲವು ಗಂಟೆಗಳೇ ಕಳೆದ್ರು ಯಾವುದೇ ಅಧಿಕಾರಿಗಳ ಸ್ಥಳಕ್ಕೆ ಬಾರಲಿಲ್ಲ ಎಂದು ಮನೆ ಕಳೆದುಕೊಂಡ ಸ್ಲಂ ನಿವಾಸಿಗಳಿಂದ ಅಳಲು ತೋಡಿಕೊಂಡಿದ್ದಾರೆ.
ಇನ್ನು ಸಿಲಿಕಾನ್ ಸಿಟಿಯಲ್ಲಿ ಚುನಾವಣಾ ಪ್ರಚಾರದ ಕೊನೆ ಕಸರತ್ತಿಗೆ ಮಳೆ ಅಡ್ಡಿಯಾಗಿತ್ತು. ನಗರದ ಹಲವೆಡೆ ಗಾಳಿ ಸಹಿತ ವರುಣನ ಅಬ್ಬರ ಜೋರಾಗಿತ್ತು. ಮಲ್ಲೇಶ್ವರಂ, ಶಿವಾನಂದ ಸರ್ಕಲ್, ವಿಜಯನಗರ, ಆರ್ಟಿ ನಗರ, ಕೆಅರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.
ಕೊಡಗಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಮದ್ಯಾಹ್ನ ಬಳಿಕ ಮಳೆಯಾಗುತ್ತಿದೆ. ಇಂದು ಬೆಳಗ್ಗಿನಿಂದಲೇ ಕೂರ್ಗ್‌ನಲ್ಲಿ ಮೋಡ ಕವಿದ ವಾತಾವರಣ ಇತ್ತು.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಧಾರಾಕಾರ ಮಳೆಯಾಗಿದೆ. ಸಿಡಿಲು, ಗುಡುಗು ಸಹಿತ ಭಾರಿ ಮಳೆಯಾಗಿದೆ. ಒಂದು ಗಂಟೆಗಳ ಕಾಲ ಮಳೆರಾಯ ಆರ್ಭಟಿಸಿದ್ದಾನೆ. ಬಿರುಗಾಳಿ ಮಳೆಗೆ ಯಲ್ಲಾಪುರದ ಜನರು ತತ್ತರಿಸಿದರು. ಯಲ್ಲಾಪುರ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾಗಗಳಲ್ಲೂ ಭಾರೀ ಮಳೆಯಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್-2ರಲ್ಲಿ ಮಳೆ ನೀರು ಸೋರಿಕೆ!
ಯಾದಗಿರಿಯಲ್ಲಿ ಧಾರಾಕಾರ ಮಳೆಯಾಗಿದೆ. ಕಳೆದ ಒಂದು ಗಂಟೆಯಿಂದಲೂ ಹೆಚ್ಚು ಕಾಲ ಮಳೆ ಸುರಿದಿದೆ. ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಿಂದ ವಾಹನ ಸವಾರರು ಪರದಾಡಿದ್ದಾರೆ. ಅಧಿಕ ಮಳೆಯಿಂದ ಭತ್ತದ ಬೆಳೆದ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಕೆಲ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ವಾರವೂ ಇಲ್ಲಿ ಭಾರೀ ಮಳೆ ಸುರಿದಿತ್ತು. ಬಳ್ಳಾರಿಯಲ್ಲೂ ಭರ್ಜರಿ ಮಳೆ ಸುರಿದಿದೆ. ಸುಡುಬಿಸಿಲಿನಲ್ಲಿ ಬಳಲಿದ ಜನರು ಮಳೆಯಿಂದ ಸಂತಸಗೊಂಡರು.
ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ
ಕುಂದಾನಗರಿ ಬೆಳಗಾವಿಯಲ್ಲಿ ವರುಣನ ಸಿಂಚನವಾಗಿದೆ. ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ನಗರವಾಸಿಗಳಿಗೆ ಮಳೆರಾಯ ತಂಪೆರೆದಿದ್ದಾನೆ. ಕಳೆದೊಂದು ತಿಂಗಳಿಂದ ಸುಡು ಬಿಸಿಲಿಗೆ ಬೆಳಗಾವಿ ಜಿಲ್ಲೆಯ ಜನ ಕಂಗೆಟ್ಟಿದ್ದರು. ಕಳೆದ ಎರಡು ದಿನಗಳಿಂದ ಬೆಳಗಾವಿ ನಗರ ಸೇರಿ ಜಿಲ್ಲೆಯ ಹಲವೆಡೆಗಳಲ್ಲಿ ಮಳೆಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ