Yellow Alert: ಬೆಂಗ್ಳೂರಲ್ಲಿ 3 ದಿನ ಗುಡುಗು ಸಹಿತ ಭಾರೀ ಮಳೆ

By Kannadaprabha NewsFirst Published Nov 4, 2021, 6:50 AM IST
Highlights

*   ‘ಯೆಲ್ಲೋ ಅಲರ್ಟ್‌' ಘೋಷಣೆ
*   ಶೃಂಗೇರಿಯಲ್ಲಿ ಗುಡುಗು, ಸಿಡಿಲು ಮಳೆ ಆರ್ಭಟ
*   ಸಂಭ್ರಮದ ದೀಪಾವಳಿ ಆಚರಣೆಗೆ ಮಳೆರಾಯನ ಅಡ್ಡಿ ತಪ್ಪಿಲ್ಲ 
 

ಬೆಂಗಳೂರು(ನ.04):  ಹವಾಮಾನದಲ್ಲಿ(Weather) ಉಂಟಾದ ವೈಪರೀತ್ಯದ ಪರಿಣಾಮ ರಾಜಧಾನಿ ಸೇರಿದಂತೆ ಬೆಂಗಳೂರಿನಲ್ಲಿ(Bengaluru) ನ.6ರ ವರೆಗೆ ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆ ಇದ್ದು, ‘ಯೆಲ್ಲೋ ಅಲರ್ಟ್‌’(Yellow Alert) ಘೋಷಿಸಲಾಗಿದೆ.

ತಮಿಳುನಾಡಿನ(Tamil Nadu) ಕರಾವಳಿಯಲ್ಲಿ(Coastal) ಸಮುದ್ರ(Sea) ಮೇಲ್ಮೈ ಸುಳಿಗಾಳಿಯು ತೀವ್ರಗೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ ಮಳೆ(Rain) ಸುರಿಯುವ ಸಾಧ್ಯತೆ ಇದೆ.

ನಗರದಲ್ಲಿ ನ.4ರಂದು ಹಿಂಗಾರು ಮಳೆಯ ಪ್ರಭಾವ ಅಧಿಕವಾಗಿರಲಿದ್ದು, ಈ ವೇಳೆ ಅನೇಕ ಪ್ರದೇಶಗಳಲ್ಲಿ ಗುಡುಗು ಮತ್ತು ಗಾಳಿ ಸಹಿತ ಭಾರಿ ಮಳೆ ಬೀಳಲಿದೆ. ಉಳಿದ ಎರಡು ದಿನ ಮಳೆ ಪ್ರಭಾವ ಇದ್ದರೂ ಸಹಿತ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮತ್ತು ತುಂತುರು ಮಳೆ ಬೀಳುವ ಸಂಭವವಿದೆ. ಕೆಲವು ದಿನಗಳಿಂದ ಕಂಡು ಬರುತ್ತಿರುವ ಮೋಡ ಮುಸುಕಿದ ವಾತಾವರಣವೇ ನ.6ರ ವರೆಗೆ ಮುಂದುವರಿಯಲಿದೆ.

ಚಿಕ್ಕಬಳ್ಳಾಪುರದಲ್ಲಿ ಪುಟಿದೇಳುತ್ತಿದೆ ಅಂರ್ತಜಲ ಮಟ್ಟ

ಕಳೆದ ಎರಡು ದಿನದಿಂದ ರಾತ್ರಿ ಮತ್ತು ಬೆಳಗಿನ ಜಾವ ಕಂಡು ಬರುತ್ತಿರುವ ಅಧಿಕ ಚಳಿ(Cold) ವಾತಾವರಣ ಮುಂದುವರಿಯಲಿದೆ. ತಾಪಮಾನದಲ್ಲಿ(Temperature) ಸಹ ಇಳಿಕೆಯಾಗಿದ್ದು, ಗರಿಷ್ಠ 27 ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ(Department of Meteorology) ಮುನ್ಸೂಚನೆ ನೀಡಿದೆ.

ಜಿಲ್ಲಾದ್ಯಂತ ಗುಡುಗು, ಭಾರಿ ಮಳೆ

ಚಿಕ್ಕಮಗಳೂರು: ಕಾಫಿ, ಅಡಕೆ ಸೇರಿದಂತೆ ಇತರೇ ಬೆಳೆಗಳಿಗೆ(Crop) ಅಪಾರ ನಷ್ಟವುಂಟು ಮಾಡಿರುವ ಮಳೆ, ಎರಡು ದಿನಗಳಿಂದ ಬಿಡುವು ಕೊಟ್ಟು, ಬುಧವಾರ ಮತ್ತೆ ರೀ ಎಂಟ್ರಿ ಕೊಟ್ಟಿರುವುದು ರೈತರಲ್ಲಿ(Farmers) ಆತಂಕ ಉಂಟು ಮಾಡಿದೆ.

ಚಿಕ್ಕಮಗಳೂರು, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ದಟ್ಟವಾಗಿ ಮೋಡ ಕವಿದ ವಾತಾವರಣ ಇದ್ದು, ರಾತ್ರಿ ವೇಳೆಗೆ ಕೆಲವೆಡೆ ಮಳೆಯಾಗುತ್ತಿತ್ತು. ಆದರೆ, ಬುಧವಾರ ಮಧ್ಯಾಹ್ನ 4 ಗಂಟೆಗೆ ಗುಡುಗು, ಮಿಂಚುಸಹಿತ ಆರಂಭವಾದ ಮಳೆ 10 ನಿಮಿಷಗಳ ಕಾಲ ಬಂದು ನಂತರದಲ್ಲಿ ಅರ್ಭಟ ಕಡಿಮೆಯಾಗಿತ್ತಾದರೂ ತುಂತುರು ಹನಿ ಮುಂದುವರಿದಿತ್ತು.

ಸಂಜೆ 6 ಗಂಟೆ ವೇಳೆಗೆ ಒಂದೇ ಸಮನೆ ಧಾರಾಕಾರವಾಗಿ ಬಂದ ಮಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲದ ನಂತರವೂ ಮುಂದುವರುದಿತ್ತು. ಕಡೂರು ತಾಲೂಕಿನಲ್ಲಿ ಮಧ್ಯಾಹ್ನದಿಂದ ಸೋನೆ ಮಳೆ ಬಂದಿತು. ಮೂಡಿಗೆರೆ ತಾಲೂಕಿನ ಕೆಲವೆಡೆ ಮಧ್ಯಾಹ್ನ ಸಾಧಾರಣ ಮಳೆ ಬಂದಿದೆ.

ಚಿಕ್ಕಬಳ್ಳಾಪುರ : ಜಿಲ್ಲಾ ಕೇಂದ್ರದಲ್ಲಿ ಪ್ರವಾಹ ಸೃಷ್ಟಿಸಿದ ಮಳೆ

ಶೃಂಗೇರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಜೆ 5 ಗಂಟೆಯಿಂದ 6.30 ರವರೆಗೆ ಧಾರಾಕಾರವಾಗಿ ಮಳೆ ಬಂದಿದೆ. ನಂತರವೂ ಕೂಡ ಸಾಧಾರಣವಾಗಿ ಮುಂದುವರಿದಿತ್ತು. ಕೊಪ್ಪ ಪಟ್ಟಣದಲ್ಲಿ ಮಳೆ ಇರಲಿಲ್ಲ. ಆದರೆ, ತಾಲೂಕಿನ ಜಯಪುರ, ಕೊಗ್ರೆ, ಬೆಳವಾಡಿ, ಕಲ್ಕೆರೆ, ತೆಂಗಿನಮನೆ ಗ್ರಾಮದಲ್ಲಿ ಗುಡುಗು ಸಹಿತ ಮಳೆಯಾಗಿದೆ. ತರೀಕೆರೆ, ಎನ್‌.ಆರ್‌.ಪುರ ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ಬಿಸಿಲಿದ್ದು, ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇತ್ತು.

ಶೃಂಗೇರಿಯಲ್ಲಿ ಗುಡುಗು, ಸಿಡಿಲು ಮಳೆ ಆರ್ಭಟ

ಶೃಂಗೇರಿ ತಾಲೂಕಿನಾದ್ಯಂತ ಬುಧವಾರ ಸಂಜೆ ಗುಡಿಗು, ಸಿಡಿಲುಸಹಿತ ಭಾರಿ ಮಳೆ ಆರ್ಭಟಿಸಿತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆ ಗುಡುಗು, ಸಿಡಿಲಿನ ಆರ್ಭಟ ಆರಂಭಗೊಂಡಿತು. ಪಟ್ಟಣ ಸೇರಿದಂತೆ ಗಾಮೀಣ ಪ್ರದೇಶ ವಿವಿಧೆಡೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುಮಾರು ಎರಡು ಗಂಟೆಗಳಿಗೂ ಅಧಿಕ ಹೊತ್ತು ಭಾರೀ ಮಳೆ ಸುರಿಯಿತು.

ಒಂದೆಡೆ ದೀಪಾವಳಿಯ(Deepavali) ಸಂಭ್ರಮವಿದ್ದರೆ ಇನ್ನೊಂದೆಡೆ ಗುಡುಗು, ಸಿಡಿಲು ಮಳೆಯ ಆರ್ಭಟ ಜನರಲ್ಲಿ ನಿರಾಸೆ ಮೂಡಿಸಿದೆ. ಬಣ್ಣದ ಹಬ್ಬ, ಬೆಳಕಿನ ಹಬ್ಬ, ಪಟಾಕಿ ಹಬ್ಬ ದೀಪಾವಳಿಗೆ ಗುಡುಗು ಮಿಂಚಿನ ಬೆಳಗು, ಗುಡುಗಿನ ಆರ್ಭಟವೇ ಹೆಚ್ಚಾಗುತ್ತಿದೆ. ಕೋವೀಡ್‌(Covid19) ಲಾಕ್‌ಡೌನ್‌ನಿಂದ(Lockdown) ಮುಕ್ತಿ ಸಿಕ್ಕಿದ್ದರೂ, ಸಂಭ್ರಮದ ದೀಪಾವಳಿ ಆಚರಣೆಗೆ ಮಳೆರಾಯನ ಅಡ್ಡಿ ತಪ್ಪಿಲ್ಲ. ಸಂಜೆಯವರೆಗೂ ಸಾಧಾರಣ ಮಳೆ ಮುಂದುವರಿದಿತ್ತು.
 

click me!