ಬೆಳಗ್ಗೆ ಬಿಸಿಲು ಹೆಚ್ಚು, ಸಂಜೆ ಧಾರಾಕಾರ ಮಳೆ!

By Kannadaprabha NewsFirst Published May 7, 2020, 8:05 AM IST
Highlights

ಬೆಳಗ್ಗೆ ಬಿಸಿಲು ಹೆಚ್ಚು, ಸಂಜೆ ಧಾರಾಕಾರ ಮಳೆ| ಗಾಳಿ ಸಹಿತ ಮಳೆಗೆ 5 ಮರ ಧರೆಗೆ

 ಬೆಂಗಳೂರು(ಮೇ.07): ನಗರದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಗುಡುಗು, ಗಾಳಿ ಸಹಿತ ಮಳೆಗೆ ಐದಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿವೆ.

ಬುಧವಾರ ಬಿಸಿಲ ಪ್ರಮಾಣ ಹೆಚ್ಚಾಗಿತ್ತು. ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್‌ ನಷ್ಟುದಾಖಲಾಗಿತ್ತು. ತಪಾಮಾನ ಏರಿಕೆ ಪರಿಣಾಮ ನಗರದಲ್ಲಿ ಬುಧವಾರ ಸಂಜೆ ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಧಾರಾಕಾರವಾಗಿ ಮಳೆ ಸುರಿಯಿತು.

ಹೂಳೆತ್ತದೆ ಸಮಸ್ಯೆ: ಕಾವೇರಿ ತಟದಲ್ಲಿ ಪ್ರವಾಹ ಭೀತಿ

ಗಾಳಿ ಮಳೆಗೆ ಜಯನಗರ ನಾಲ್ಕನೇ ಹಂತ, ಕುಮಾರ ಪಾರ್ಕ್ನ ಬಿಡಿಎ ಕಚೇರಿ ಬಳಿ ತಲಾ ಒಂದು ಮರ ಸೇರಿದಂತೆ ವಿವಿಧ ಕಡೆ ಐದಕ್ಕೂ ಹೆಚ್ಚು ಮರ ಹಾಗೂ ಮರ ಕೊಂಬೆ ಧರೆಗುರುಳಿವೆ ಎಂದು ಬಿಬಿಎಂಪಿ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸರಾಸರಿ 3.27 ರಷ್ಟುಮಳೆಯಾಗಿದ್ದು, ಅತಿ ಹೆಚ್ಚು 33.50 ಮಿ.ಮೀ ಮಳೆಯಾದ ವರದಿಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.

click me!