ಸೂರಜ್ ಬಂಧಿಸಿದ್ರೆ ಯಾರೇನು ಮಾಡೋಕಾಗುತ್ತೆ; ನಾವು ಹುಟ್ಟುಹಾಕಿದ್ವ?: ದಿನೇಶ್ ಗುಂಡೂರಾವ್ ಪ್ರಶ್ನೆ

By Ravi Janekal  |  First Published Jun 24, 2024, 1:58 PM IST

ಸೂರಜ್ ರೇವಣ್ಣ ವಿಚಾರದಲ್ಲಿ ಯಾರೇನೂ ಮಾಡೋದಕ್ಕೆ ಆಗುತ್ತೆ? ಪ್ರಜ್ವಲ್ ರೇವಣ್ಣ ಪ್ರಕರಣ ನಾವು ಹುಟ್ಟುಹಾಕಿದ್ದೆವ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.


ಕೊಡಗು ಜೂ.24): ಸೂರಜ್ ರೇವಣ್ಣ ವಿಚಾರದಲ್ಲಿ ಯಾರೇನೂ ಮಾಡೋದಕ್ಕೆ ಆಗುತ್ತೆ? ಪ್ರಜ್ವಲ್ ರೇವಣ್ಣ ಪ್ರಕರಣ ನಾವು ಹುಟ್ಟುಹಾಕಿದ್ದೆವ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಎಂಎಲ್ ಸಿ ಸೂರಜ್ ರೇವಣ್ಣ ಬಂಧನ ವಿಚಾರ ಸಂಬಂಧ ಇಂದು ಕೊಡಗಿನ ಕುಶಾಲನಗರದಲ್ಲಿ ಮಾತನಾಡಿದ ಸಚಿವರು, ಸೂರಜ್ ರೇವಣ್ಣ ತಪ್ಪು ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ. ಸೆಕ್ಷನ್ 377 ಪ್ರಕಾರ ಸಲಿಂಗ ಕಾಮ ಈಗ ತಪ್ಪಲ್ಲ. ಆದರೆ ಒತ್ತಡ ಮಾಡಿ ಕಿರುಕುಳ ಕೊಟ್ಟು ಲೈಂಗಿಕ ಸಂಪರ್ಕ ಆಗಿದ್ದರೆ ಅದು ತಪ್ಪು. ಈಗ ದೂರು ಇರುವುದು ಕಿರುಕುಳ ಕೊಟ್ಟು ಲೈಂಗಿಕ ಸಂಪರ್ಕ ಮಾಡಿದ್ದಾರೆಂದು. ಕಾನೂನು ಪ್ರಕಾರ ಎಲ್ಲರೂ ಒಂದೇ ಅಲ್ವ? ಇದರಲ್ಲಿ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಬ್ಯಾಕ್ ಟು ಬ್ಯಾಕ್ ಅಂದರೆ ನಾವು ಸೃಷ್ಟಿ ಮಾಡಿದ್ದಲ್ಲ. ಬ್ಯಾಕ್ ಟು ಬ್ಯಾಕೋ ಇಲ್ಲ, ಪ್ರಂಟ್ ಟು ಫ್ರಂಟೋ ನಮಗೇನು ಗೊತ್ತು ಎಂದು ವ್ಯಂಗ್ಯ ಮಾಡಿದರು.

Tap to resize

Latest Videos

undefined

ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದ ಪವಿತ್ರಾ ಗೌಡ ಈಗ ಗಪ್‌ಚುಪ್, ಬೆಳಗ್ಗೆ ಪುಳಿಯೊಗರೆ ತಿಂದು ಸೈಲೆಂಟ್!

 

ಇನ್ನು ದೇವೇಗೌಡರ ಕುಟುಂಬ ನಾಶ ಮಾಡಲು ಹೀಗೆಲ್ಲ ಮಾಡಲಾಗುತ್ತಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಗೆಲ್ಲಬೇಕು ಎಂದು ಅವರು, ನಾವು ಗೆಲ್ಲಬೇಕು ಎಂದು ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಆದರೆ ಇದನ್ನೆಲ್ಲ ವೈಯಕ್ತಿಕವಾಗಿ ಬೆಳೆಸಿಕೊಂಡರೆ ನಾವೇನು ಮಾಡೋಕಾಗಲ್ಲ. ರಾಜಕೀಯದಲ್ಲಿ ನಮ್ಮ ಎದುರಾಳಿಯನ್ನು ನಾವು ಎದುರಿಸಬೇಕು. ಯಾರೂ ನಮ್ಮ ಎದುರಾಳಿ ಗೆದ್ದುಕೊಂಡು ಹೋಗಲಿ ಎಂದು ಬಿಡುವುದಿಲ್ಲ. ಆದರೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವಂತಹದ್ದು ಏನೂ ಇಲ್ಲ. ಇದನ್ನೇ ವೈಯಕ್ತಿಕ ಪ್ರತಿಷ್ಠೆ ಮಾಡಿಕೊಂಡು ಜನರ ಅನುಕಂಪ ಪಡೆದುಕೊಳ್ಳುವ ಪ್ರಯತ್ನ ಅಷ್ಟೇ ಇದು ಎಂದರು.

ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ:

ಇನ್ನು ಗ್ಯಾರಂಟಿ ಯೋಜನೆಗಳು ನಿಲ್ಲಿಸಲಾಗುತ್ತದೆಂಬ ಬಗ್ಗೆ ಚರ್ಚೆ ಹುಟ್ಟುಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾವು ರಾಜಕೀಯಕ್ಕಾಗಿ ಈ ಯೋಜನೆ ಜಾರಿಗೆ ತಂದಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗ್ಯಾರಂಟಿ ಯೋಜನೆಗಳನ್ನ ಬಡಜನರ ಹಿತಕ್ಕಾಗಿ ಜಾರಿ ಮಾಡಿದ್ದೇವೆ. ಚುನಾವಣೆಯಲ್ಲಿ ಮುನ್ನಡೆಯಾಗಲಿ, ಹಿನ್ನೆಡೆಯಾಗಲಿ ಎಂಬ ಕಾರಣಕ್ಕೆ ತಂದಿಲ್ಲ. ಜನರಿಗಾಗಿ ಕಾರ್ಯಕ್ರಮ ಮಾಡಿದ್ದೇವೆ. ಅದರಲ್ಲಿ ಇನ್ನೂ ವೈಜ್ಞಾನಿಕವಾಗಿ ಸುಧಾರಣೆ ತರಲು ಸಾಧ್ಯವಿದೆಯೇ ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ. ಈಗತಾನೇ ಚುನಾವಣೆ ಮುಗಿದು ನೀತಿ ಸಂಹಿತೆಯಿಂದ ಹೊರಬಂದಿದ್ದೇವೆ. ರಾಜ್ಯದ ಹಿತ ಕಾಪಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.

ಭವಾನಿ ಜೊತೆ ದರ್ಶನ್, ಸೂರಜ್, ಪ್ರಜ್ವಲ್ ಫೋಟೋ ವೈರಲ್! ಎಲ್ಲರೂ ಈಗ ಕಂಬಿ ಹಿಂದೆ!

ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಇವರೆಲ್ಲ ಮಂತ್ರಿಗಳಾಗಿ ದೆಹಲಿಗೆ ಹೋಗಿದ್ದಾರೆ. ಈಗಾಲಾದರೂ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಲಿ. ರಾಜ್ಯಕ್ಕೆ ಕೇಂದ್ರದಿಂದ ಸಾಕಷ್ಟು ಅನ್ಯಾಯವಾಗಿದೆ. ಅದರಲ್ಲಿ ಇವರು ವಕಾಲತ್ತು ವಹಿಸಲಿ. ಪ್ರತಿ ಸಲ ಜಿದ್ದಾಜಿದ್ದಿನ ರಾಜಕಾರಣ ಅಂತಾ ಮಾತನಾಡುವುದು ಬೇಡ. ಕುಮಾರಸ್ವಾಮಿಯವರು ಈಗ ಕೇಂದ್ರ ಸಚಿವರಾಗಿದ್ದಾರೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ರಾಜ್ಯದ ಪರವಾಗಿ ಕೆಲಸ ಮಾಡಲಿ ಎಂದರು.

click me!