Latest Videos

ಭವಾನಿ ಜೊತೆ ದರ್ಶನ್, ಸೂರಜ್, ಪ್ರಜ್ವಲ್ ಫೋಟೋ ವೈರಲ್! ಎಲ್ಲರೂ ಈಗ ಕಂಬಿ ಹಿಂದೆ!

By Ravi JanekalFirst Published Jun 24, 2024, 12:52 PM IST
Highlights

ಪ್ರತ್ಯೇಕ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಜ್ವಲ್, ಸೂರಜ್ ರೇವಣ್ಣ ದರ್ಶನ್ ಈ ಮೂವರು ಭವಾನಿ ರೇವಣ್ಣರ ಜೊತೆಗೆ ಕಳೆದ ಮೂರು ವರ್ಷಗಳ ಹಿಂದೆ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ತೆಗೆಸಿಕೊಂಡಿದ್ದ ಫೋಟೊ ಇದೀಗ ವೈರಲ್ ಆಗುತ್ತಿದೆ. 

ಬೆಂಗಳೂರು (ಜೂ.24) ಕಳೆದೆರಡು ದಿನಗಳಿಂದ ಫೊಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಆಗ್ತಿದೆ. ಪ್ರಜ್ವಲ್ ರೇವಣ್ಣ, ದರ್ಶನ್, ಸೂರಜ್ ರೇವಣ್ಣ, ಭವಾನಿ ರೇವಣ್ಣ ಈ ನಾಲ್ವರು ಒಟ್ಟಿಗೆ ಒಂದೇ ಫ್ರೇಮ್‌ನಲ್ಲಿರುವ ಅಪರೂಪದ ಚಿತ್ರವಿದು.  ಈ ಹಳೆಯ ಫೋಟೊ ಸುಮಾರು ಮೂರು ವರ್ಷಗಳ ಹಿಂದೆಯೇ ತೆಗೆದಿದ್ದು, ಅಂದು ಫೋಟೊ ಸುದ್ದಿಯೇ ಇರಲಿಲ್ಲ. ಪತ್ರಿಕೆಗಳಲ್ಲಿ ಸಣ್ಣ ಪುಟದಲ್ಲಿ ಪ್ರಕಟಿಸಲಾಗಿತ್ತು. ಆದರೆ ಇಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಪ್ರತಿಯೊಬ್ಬರು ಈ ಫೋಟೊ ಹಂಚಿಕೊಳ್ಳುತ್ತಿದ್ದಾರೆ. ವಿಚಿತ್ರವೆಂದರೂ ಫೋಟೊದಲ್ಲಿ ಮೂವರೂ ಪ್ರತ್ಯೇಕ ಪ್ರಕರಣಗಳಲ್ಲಿ ಇತ್ತೀಚೆಗೆ ಒಬ್ಬರಿಂದೊಬ್ಬರಂತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. 

ಹಾಸನ ಪೆನ್‌ಡ್ರೈವ್ ಪ್ರಕರಣ(Hassan pendrive case)ದಲ್ಲಿ ಪ್ರಜ್ವಲ್ ರೇವಣ್ಣ(Prajwal revanna), ಅಸಹಜ ಲೈಂಗಿಕ ಕಿರುಕುಳ ಪ್ರಕರಣ(homosexuality case)ದಲ್ಲಿ ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ(Suraj revanna), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್(Renuka swamy murder case actor darshan) ಈ ಮೂವರು ಪರಪ್ಪನ ಅಗ್ರಹಾರದ ಜೈಲು(Parappana agrahara jail) ಸೇರಿರುವುದು ವಿಚಿತ್ರಗಳಲ್ಲೊಂದು ಅನಿಸಲ್ವ? ಇನ್ನು ಭವಾನಿ(Bhavani revanna) ರೇವಣ್ಣ ಕೂಡ ಅಪಹರಣ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಾಗಿ ಭವಾನಿ ರೇವಣ್ಣ ಜೊತೆಗೆ ಈ ಮೂವರು ಪರಪ್ಪನ ಅಗ್ರಹಾರವಾಸಿಗಳು ಒಂದೇ ಫ್ರೇಮಿನಲ್ಲಿ ಕಾಣಿಸಿರುವುದರಿಂದ ಟ್ರೋಲಿಗರು ಚಿತ್ರವಿಚಿತ್ರ ಕಾಮೆಂಟ್ ಮಾಡುತ್ತಿದ್ದಾರೆ. one frame Many Cases ಇಬ್ರು ಕಾರ್ ಬಗ್ಗೆ ಮಾತಾಡ್ದೋರು, ಒಬ್ರು ಇಂಜಿನ್ ಬಿಟ್ಟೋರು, ಒಬ್ರು ಡಿಕ್ಕಿ ಅಂತಾ ಬರೆದುಕೊಂಡಿದ್ದಾರೆ. ಇನ್ನೊಬ್ಬರು ಬರೆದುಕೊಂಡಿದ್ದಾರೆ. ಮೂವರು ಲೇಜೆಂಡ್ಸ್ ಒಂದೇ ಫ್ರೇಮಿನಲ್ಲಿ ಎಂದಿದ್ದಾರೆ. ಮತ್ತೊಬ್ಬಾತ, 'ದಯವಿಟ್ಟು ಪರಪ್ಪನ ಅಗ್ರಹಾರದದಲ್ಲಿ ಪ್ರಜ್ವಲ್ ರೇವಣ್ಣರಿಂದ ಪವಿತ್ರಾ ಗೌಡರನ್ನ, ಸೂರಜ್ ರೇವಣ್ಣರಿಂದ ದರ್ಶನ್‌ರನ್ನ ಕಾಪಾಡಿ' ಅಂತಾ ಬರೆದುಕೊಂಡಿದ್ದಾರೆ.

ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದ ಪವಿತ್ರಾ ಗೌಡ ಈಗ ಗಪ್‌ಚುಪ್, ಬೆಳಗ್ಗೆ ಪುಳಿಯೊಗರೆ ತಿಂದು ಸೈಲೆಂಟ್!

ಹೆಣ್ಣಿನ ಕಾರಣಕ್ಕೆ ಜೈಲು ಪಾಲಾಗಿರುವ ಮೂವರೂ ಒಟ್ಟಿಗೆ ಸೇರಿದ್ದು ಕೂಡ ವಿಶ್ವಮಹಿಳಾ ದಿನಾಚರಣೆಯಂದೇ ಎನ್ನುವುದು ಇನ್ನೂ ವಿಚಿತ್ರವೆನಿಸುತ್ತೆ ಅಲ್ವೆ? ಹೌದು ಅದು 2021 ಇರಬೇಕು. ಹಾಸನದಲ್ಲಿ ನಡೆದ ವಿಶ್ವಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ದರ್ಶನ್ ಮತ್ತು ಪ್ರಜ್ವಲ್ ರೇವಣ್ಣ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಹಾಜರಾಗುವ ಮುಂಚೆ ಒಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲಿಂದ ನೇರವಾಗಿ ಕಾರಿನಲ್ಲಿ ಬಂದು ವಿಶ್ವಮಹಿಳಾ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಬಳಿಕ ಪ್ರಜ್ವಲ್ ರೇವಣ್ಣರ ಮನೆಗೆ ಹೋಗಿದ್ದ ದರ್ಶನ್ ಈ ವೇಳೆ ಸೂರಜ್ ರೇವಣ್ಣ, ಭವಾನಿರೇವಣ್ಣರೂ ಸೇರಿಕೊಂಡು ಒಟ್ಟಿಗೆ ನಾಲ್ವರು ಫೋಟೊ ತೆಗೆದುಕೊಂಡಿದ್ದರು. 

ನಿಖಿಲ್ ವಿರುದ್ಧ ಪ್ರಚಾರ; ಪ್ರಜ್ವಲ್ ಜೊತೆ ಗೆಳೆತನ!

ಹೌದು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ದರ್ಶನ್ ಪ್ರಚಾರ ಮಾಡಿದ್ದರು. ನಿಖಿಲ್ ಸೋಲಿಗೆ ದರ್ಶನ್ ಕಾರಣರಾಗಿದ್ದರು. ಇತ್ತ ಪ್ರಜ್ವಲ್ ರೇವಣ್ಣಪರ ಸ್ನೇಹದಿಂದ ಇರುವುದು ತೀವ್ರ ಚರ್ಚೆ ಹುಟ್ಟುಹಾಕಿದ್ದಲ್ಲದೇ ಪ್ರಜ್ವಲ್ ರೇವಣ್ನರ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ಅಸಮಾಧಾನ ಹುಟ್ಟುಹಾಕಿದ್ದಂತೆ ದಿಟ. ಅದೇ ಕಾರಣಕ್ಕೇ ಏನೋ ಇಂದು ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಜೈಲು ಪಾಲಾದರೂ ಅದರ ಬಗ್ಗೆ ಎಲ್ಲಿಯೂ ಮಾತನಾಡದ ನಿಖಿಲ್ ಕುಮಾರಸ್ವಾಮಿ.

click me!