ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ತಮ್ಮ ಇಬ್ಬರು ಮಕ್ಕಳನ್ನು ಭೇಟಿಯಾಗಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ದಂಪತಿ ಬುಧವಾರ ಮಾತುಕತೆ ನಡೆಸಿದರು ಹಾಗೂ ಧೈರ್ಯ ತುಂಬಿದರು.
ಬೆಂಗಳೂರು (ಜು.11): ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ತಮ್ಮ ಇಬ್ಬರು ಮಕ್ಕಳನ್ನು ಭೇಟಿಯಾಗಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ದಂಪತಿ ಬುಧವಾರ ಮಾತುಕತೆ ನಡೆಸಿದರು ಹಾಗೂ ಧೈರ್ಯ ತುಂಬಿದರು.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ(Sexual harassment case)ದಲ್ಲಿ ರೇವಣ್ಣ ಅವರ ಕಿರಿಯ ಪುತ್ರ, ಮಾಜಿ ಸಂಸದ ಪ್ರಜ್ವಲ್(Prajwal revanna) ಹಾಗೂ ಪುರುಷರ ಮೇಲೆ ಸಲಿಂಗ ಕಾಮ ಪ್ರಕರಣ(homosexuality assault case)ದಲ್ಲಿ ಹಿರಿಯ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ (suraj revanna)ಬಂಧಿತರಾಗಿದ್ದಾರೆ. ಈ ಇಬ್ಬರು ಮಕ್ಕಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೆರೆಮನೆ(Parappa Agrahara Central Jai)ಯಲ್ಲಿದ್ದಾರೆ.
undefined
ಒಂದೇ ಕೊಠಡಿಯಲ್ಲಿದ್ದ ಸಹೋದರರು ; ಮುಖ್ಯ ಜೈಲಿಗೆ ಶಿಫ್ಟಾದ ಪ್ರಜ್ವಲ್ ರೇವಣ್ಣ!
ತಮ್ಮ ಮಕ್ಕಳನ್ನು ಮಂಗಳವಾರ ಮಧ್ಯಾಹ್ನ ರೇವಣ್ಣ(HD Revanna) ಹಾಗೂ ಅವರ ಪತ್ನಿ ಭವಾನಿ(Bhavani revanna) ಭೇಟಿಯಾಗಿದ್ದರು. ಈ ವೇಳೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಾನೂನು ಹೋರಾಟದ ಕುರಿತು ಮಕ್ಕಳ ಜತೆ ತಂದೆ-ತಾಯಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೆಳಹಂತದ ನ್ಯಾಯಾಲಯದಲ್ಲಿ ಈ ಇಬ್ಬರ ಜಾಮೀನು ಅರ್ಜಿಗಳು ವಜಾಗೊಂಡಿವೆ. ಹೀಗಾಗಿ ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ಅವರು ಮೊರೆ ಹೋಗಿದ್ದಾರೆ. ಈ ಹಂತದಲ್ಲಿ ಮಕ್ಕಳನ್ನು ಕಂಡು ತಂದೆ-ತಾಯಿ ಧೈರ್ಯ ತುಂಬಿ ಬಂದಿದ್ದಾರೆ ಎನ್ನಲಾಗಿದೆ. ಕಳೆದ ವಾರವಷ್ಟೇ ಜೈಲಿನಲ್ಲಿರುವ ಮಕ್ಕಳನ್ನು ರೇವಣ್ಣ ದಂಪತಿ ಪ್ರತ್ಯೇಕವಾಗಿ ಭೇಟಿಯಾಗಿದ್ದರು.