ಹಮಾರೇ ಪಾಸ್‌ ಪೂರಾ ಪಿಚ್ಚರ್‌ ಹೈ: ತಾರಕಕ್ಕೇರಿದ ಪ್ರಿಯಾಂಕ್-ಹೆಚ್‌ಡಿಕೆ ವಾರ್, ಖರ್ಗೆ ಹೇಳಿಕೆಗೆ ಕುಮಾರಸ್ವಾಮಿ ಕೆಂಡ!

Kannadaprabha News   | Kannada Prabha
Published : Nov 03, 2026, 07:14 AM IST
hd kumaraswamy and priyank kharge

ಸಾರಾಂಶ

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖಾ ತಂಡಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದ್ದು, ಇನ್ನೆರಡು ತಿಂಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕಲಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅಲ್ಲದೆ, ಕೆಪಿಎಸ್‌ಸಿ ಪ್ರಕರಣದಲ್ಲಿ ಇ.ಡಿ ಬಳಸಿ ತಮ್ಮನ್ನು ಸಿಲುಕಿಸಲುಯತ್ನ ಖರ್ಗೆ ಆರೋಪ.

ಬೆಂಗಳೂರು (ನ.3): ‘ಪ್ರಜ್ವಲ್‌ ರೇವಣ್ಣ ಲೈ*ಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ತನಿಖಾ ತಂಡಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಶಸ್ತಿ ನೀಡಿದ್ದಾರೆ. ಅದೇ ರೀತಿ ಸ್ಟಿಂಗ್‌ ತನಿಖೆ ನಡೆಸುತ್ತಿರುವ ಪೊಲೀಸರಿಗೂ ಬಹುಮಾನ ಸಿಗಲಿದೆ. ಎರಡು ತಿಂಗಳ ಬಳಿಕ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಕಣ್ಣೀರು ಹಾಕಬಹುದು ಕಾದು ನೋಡಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದೇ ವೇಳೆ ಕೆಪಿಎಸ್‌ಸಿ ಪ್ರಕರಣ(KPSC Scam)ದಲ್ಲಿ ನನ್ನ ಮತ್ತು ನನ್ನ ಸಚಿವ ಸಂಪುಟದ ಸದಸ್ಯರನ್ನು ಇ.ಡಿ. ತೆರಿಗೆ ಅಧಿಕಾರಿಗಳ ಬಳಸಿ ಸಿಕ್ಕಿಹಾಕಿಸಲು ಕೇಂದ್ರ ಸಚಿವರೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ರಾಜಕೀಯ ವಲಯದಲ್ಲಿ ಸುದ್ದಿಯಾಗಿದೆ ಎಂದು ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡಿದ್ದಾರೆ.

ಕುಮಾರಸ್ವಾಮಿ ಇನ್ನೆರಡು ತಿಂಗಳಲ್ಲಿ ಮತ್ತೆ ಕಣ್ಣೀರು ಹಾಕಲಿದ್ದಾರೆ

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನಮ್ಮ ಕುಟುಂಬಕ್ಕೆ ಮಸಿ ಬಳಿಯಲು ಪೊಲೀಸರು ಸಂಚು ರೂಪಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದೀಗ ಅದೇ ತನಿಖಾ ತಂಡಕ್ಕೆ ಎನ್‌ಡಿಎ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಕುಮಾರಸ್ವಾಮಿ ಬೇಕಾದಾಗ ಕಣ್ಣೀರು ಹಾಕುತ್ತಾರೆ. ಅವರಿಗೆ ಎರಡು ತಿಂಗಳಲ್ಲಿ ಮತ್ತೆ ಕಣ್ಣೀರು ಹಾಕುವ ಅವಕಾಶ ಬರಬಹುದು ಎಂದು ಸೂಚ್ಯವಾಗಿ ಹೇಳಿದರು.

ನಾನು ಅಸ್ಪೃಶ್ಯ ಎಂಬ ಕಾರಣಕ್ಕೆ ಅವರು ನನ್ನ ಮುಟ್ಟುವುದಿಲ್ಲ

ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಅಸ್ಪೃಷ್ಯ ಎಂಬ ಕಾರಣಕ್ಕೆ ಅವರು ನಮ್ಮನ್ನು ಮುಟ್ಟುವುದಿಲ್ಲ. ಆದರೆ ಕಾನೂನಿನ ಪ್ರಕಾರ ಅಗತ್ಯವಾದರೆ ನಾವು ಅವರನ್ನು ಮುಟ್ಟುತ್ತೇವೆ. ಕುಮಾರಸ್ವಾಮಿ ಅವರು ಅನುಕಂಪದ ನಾಟಕ ಆಡುತ್ತಿದ್ದಾರೆ. ಅವರು ನಿತ್ಯ ಮನೆಯಲ್ಲಿ ಅಳುವುದು ಪ್ರ್ಯಾಕ್ಟೀಸ್‌ ಮಾಡುತ್ತಿರುತ್ತಾರೆ. ಮುಂದೆ ಇನ್ನೆರಡು ತಿಂಗಳಲ್ಲಿ ಮತ್ತೆ ಕಣ್ಣೀರು ಹಾಕುತ್ತಾರೆ ನೋಡುತ್ತಿರಿ ಎಂದರು.

ಇ-ಮೇಲ್‌ ಬಗ್ಗೆ ಸಾಕ್ಷ್ಯವಿದ್ದರೆ ಕೊಡಲಿ:

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬಂದ ಇ-ಮೇಲ್ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ‌ ಇದ್ದರೆ ಕೊಡಲಿ. ವಿಡಿಯೋದಲ್ಲಿರುವವರ ಎಲ್ಲ ವಿಚಾರಣೆ ಆಗಿದೆ. ಒಂದಲ್ಲಾ 2 ಬಾರಿ ವಿಚಾರಣೆ ಆಗಿದೆ. ಕೃಪಾ ಆಳ್ವಾ ವಿಚಾರಣೆ ವೇಳೆ ಇ-ಮೇಲ್ ವಿಚಾರ ಪ್ರಸ್ತಾಪ ಆಗಿಲ್ಲ. ಒಂದು ವೇಳೆ ಅವರಿಗೆ ಗೊತ್ತಿದ್ದರೆ ಮಾಧ್ಯಮಗಳ ಮುಂದೆ ಹೇಳುವುದಲ್ಲ ನಮಗೆ ಕೊಡಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಿಯಾಂಕ್ ಹೇಳಿದರು.

ಕುಮಾರಸ್ವಾಮಿ ಅವರೇ, ನಿಮ್ಮ ಕಳಂಕ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸೂರ್ಯ, ಚಂದ್ರ, ಸತ್ಯ ತುಂಬಾ ಹೊತ್ತು ಮುಚ್ಚಿಡಲಾಗಲ್ಲ. ಆಯುಕ್ತರ ಪತ್ರಿಕಾ ಹೇಳಿಕೆ ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಬಹಳಷ್ಟು ವದಂತಿ ಬರುತ್ತಿದೆ, ಇದೊಂದು ಸುಳ್ಳು ಷಡ್ಯಂತ್ರ ಎಂದು ಹೇಳಿದ್ದಾರೆ.

ಹಮಾರೇ ಪಾಸ್‌ ಪೂರಾ ಪಿಚ್ಚರ್‌ ಹೈ: ಪ್ರಿಯಾಂಕ್ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು

ಸ್ಟಿಂಗ್‌ ಆಪರೇಷನ್‌ ಪ್ರಕರಣ ಸಂಬಂಧ ಇದು ಕೇವಲ ಟ್ರೈಲರ್‌, ಪಿಚ್ಚರ್‌ ಅಭಿ ಬಾಕಿ ಹೈ ಎಂಬ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಹಮಾರೇ ಪಾಸ್‌ ಪೂರಾ ಪಿಚ್ಚರ್‌ ಹೈ (ನಮ್ಮ ಬಳಿ ಪೂರ್ಣ ಸಿನಿಮಾ ಇದೆ) ಎನ್ನುವ ಮುಖಾಂತರ ತಿರುಗೇಟು ನೀಡಿದ್ದಾರೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್‌ ಕಟ್ಟು ಕಥೆ ಎಂದ ಮೇಲೆ ಇದು ಕೇವಲ ಟ್ರೈಲರ್‌, ಪಿಕ್ಚರ್‌ ಅಭಿ ಬಾಕಿ ಹೈ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನನ್ನ ಜೀವನದಲ್ಲಿ ಇಂತಹ ಟ್ರೈಲರ್‌ ಎಷ್ಟು ನೋಡಿಲ್ಲ ಎಂದು ವ್ಯಂಗ್ಯವಾಡಿದರು.

ನನ್ನ ಬಳಿ ತಾಂತ್ರಿಕ ಸಾಕ್ಷಿಗಳಿವೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಒಂದು ವೇಳೆ ಅವರ ಬಳಿ ಅಂತಹ ಸಾಕ್ಷಿಗಳಿದ್ದರೆ ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡಲಿ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿಖಿಲ್‌ ಗೌಡ ಹಿಟ್‌ ಅಂಡ್‌ ರನ್‌ ಕೇಸ್‌ ಗೂ ನನಗೂ ಸಂಬಂಧ ಇಲ್ಲ, ಮೊದಲ ಬಾರಿ ಯೂಟ್ಯೂಬರ್‌ ಮಧು ಗೌಡ ರಿಯಾಕ್ಷನ್‌
ನಂದಿನಿ ಹಾಲು, ಮೊಸರಿನ ದರ ಏರಿಕೆಗೆ ಜನಾಕ್ರೋಶ: ಸಿಎಂ ಸೂಚನೆ ಬೆನ್ನಲ್ಲೇ ಮೊಸರಿಗೆ ₹2 ಬೆಲೆ ಇಳಿಸಿದ ಕೆಎಂಎಫ್!