ಪ್ರಜ್ವಲ್‌ ರೇವಣ್ಣ ನೋಡಿ ಎಚ್‌ಡಿಕೆ ಸಂಸ್ಕಾರ ಕಲಿಯಲಿ: ಸುಮಲತಾ!

By Suvarna NewsFirst Published Jul 7, 2021, 7:25 AM IST
Highlights

* ಪ್ರಜ್ವಲ್‌ ರೇವಣ್ಣ ನೋಡಿ ಎಚ್‌ಡಿಕೆ ಸಂಸ್ಕಾರ ಕಲಿಯಲಿ: ಸುಮಲತಾ

* ಕನ್ನಡಂಬಾಡಿ ಕದನ ಮಾಜಿ ಸಿಎಂಗೆ ಮಂಡ್ಯ ಸಂಸದೆ ತಿರುಗೇಟು

* ಜೆಡಿಎಸ್‌ಗೆ ಪ್ರಜ್ವಲ್‌ ಮಾತ್ರ ಆಶಾಕಿರಣ

* ಚಿಕ್ಕ ಹುಡುಗನಾದರೂ ಪ್ರಬುದ್ಧ

 ಬೆಂಗಳೂರು(ಜು.07): ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಷ್ಟಪಟ್ಟು ಕಟ್ಟಿರುವ ಪಕ್ಷವನ್ನು ಉಳಿಸಲು ಇರುವ ಒಂದೇ ಒಂದು ಆಶಾಕಿರಣವೆಂದರೆ ಸಂಸದ ಪ್ರಜ್ವಲ್‌ ರೇವಣ್ಣ. ಅವರನ್ನು ನೋಡಿ ಸಂಸ್ಕಾರ ಎಂದರೇನು ಎಂಬುದನ್ನು ಕಲಿಯಿರಿ’ ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್‌ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಈ ಮೂಲಕ ಕೆಆರ್‌ಎಸ್‌ ಜಲಾಶಯ ವಿಚಾರವಾಗಿ ಕುಮಾರಸ್ವಾಮಿ ಮತ್ತು ಸುಮಲತಾ ನಡುವಿನ ವಾಕ್ಸಮರ ಮತ್ತಷ್ಟುತೀವ್ರತೆ ಪಡೆದುಕೊಂಡಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಯುವಕರನ್ನು ನೋಡಿ ಕಲಿಯಿರಿ. ಬೇರೆ ಯಾರೂ ಬೇಡ. ಅವರದೇ ಪಕ್ಷದಲ್ಲಿಯೇ ಇರುವ ಪ್ರಜ್ವಲ್‌ ರೇವಣ್ಣ ಅವರನ್ನು ನೋಡಿ ಕಲಿಯಬೇಕು. ಎಷ್ಟುವಿನಯದಿಂದ ನಡೆದುಕೊಳ್ಳುತ್ತಾರೆ. ಎಷ್ಟುಮಾತನಾಡಬೇಕು ಅದನ್ನು ಚೊಕ್ಕವಾಗಿ ಹೇಳುತ್ತಾರೆ. ಅಷ್ಟೇ ಅಲ್ಲ, ಅವರ ಮಾತು ಅಷ್ಟೇ ತೂಕವಾಗಿರುತ್ತದೆ. ಚಿಕ್ಕ ಹುಡುಗನಾದರೂ ಪ್ರಬುದ್ಧವಾಗಿ ಮಾತನಾಡುತ್ತಾರೆ. ಪ್ರಜ್ವಲ್‌ ಅವರ ಮಗನೇ ಆಗಿದ್ದು, ಅವರನ್ನು ನೋಡಿ ಕಲಿಯಬೇಕು ಎಂದು ಟೀಕಾಪ್ರಹಾರ ನಡೆಸಿದರು.

ಪ್ರಜ್ವಲ್‌ ರೇವಣ್ಣ ಅವರನ್ನು ಸಂಸತ್‌ನಲ್ಲಿ ಗಮನಿಸಿದ್ದೇನೆ. ಅಲ್ಲಿ ಮಾತನಾಡುವಾಗ ಅವರು ನಡೆದುಕೊಳ್ಳುವ ರೀತಿ, ಮಾತನಾಡುವುದು, ಗೌರವ ನೀಡುವುದನ್ನು ಗಮನಿಸಿದರೆ ಜೆಡಿಎಸ್‌ನಲ್ಲಿ ಒಂದು ಆಶಾಕಿರಣ ಇದೆ ಎನ್ನಿಸುತ್ತದೆ. ಕುಮಾರಸ್ವಾಮಿ ವಯಸ್ಸಿನಲ್ಲಿ ಆತನಿಗಿಂತ ದೊಡ್ಡವರಾಗಿದ್ದರೂ ಮಾತನಾಡುವುದನ್ನು ಕಲಿಯಬೇಕು. ತಪ್ಪುಗಳನ್ನು ತಿದ್ದಿಕೊಳ್ಳಲು ಚಿಕ್ಕವರಾದೇನು, ದೊಡ್ಡವರಾದೇನು? ಚಿಕ್ಕವರು ಹೇಳುವುದು ಸರಿ ಎನಿಸಿದರೆ ಅದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಸುಮಲತಾ ತೀಕ್ಷ$್ಣವಾಗಿ ಹೇಳಿದರು.

ದೇವೇಗೌಡ ಅವರು ಕಷ್ಟಪಟ್ಟು ಕಟ್ಟಿರುವ ಪಕ್ಷಕ್ಕೆ ಒಂದೇ ಒಂದು ಆಶಾಕಿರಣವೆಂದರೆ ಪ್ರಜ್ವಲ್‌ ರೇವಣ್ಣ. ಪ್ರಜ್ವಲ್‌ ಪಕ್ಷದ ಕಾರ್ಯಕರ್ತರಲ್ಲಿ ಒಂದಷ್ಟುವಿಶ್ವಾಸ ಮೂಡಿಸಬಹುದು ಎನಿಸುತ್ತದೆ. ರಾಜಕಾರಣದಲ್ಲಿದ್ದರೆ ಯೋಚನೆ ಮಾಡಿ ಮಾತನಾಡುವುದು ಹೇಗೆ ಎಂಬುದು ಆತನಿಗೆ ಗೊತ್ತಿದೆ. ಜೆಡಿಎಸ್‌ ಪಕ್ಷವನ್ನು ಉಳಿಸಿಕೊಳ್ಳಲು ಸಾಧ್ಯನಾ ಎಂದು ನೋಡೋಣ ಎಂದು ಅವರು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ದೇವೇಗೌಡರು ಕಷ್ಟಪಟ್ಟು ಕಟ್ಟಿರುವ ಪಕ್ಷಕ್ಕೆ ಒಂದೇ ಒಂದು ಆಶಾಕಿರಣವೆಂದರೆ ಪ್ರಜ್ವಲ್‌. ಕುಮಾರಸ್ವಾಮಿ ವಯಸ್ಸಿನಲ್ಲಿ ಆತನಿಗಿಂತ ದೊಡ್ಡವರಾಗಿದ್ದರೂ ಮಾತನಾಡುವುದನ್ನು ಕಲಿಯಬೇಕು. ತಪ್ಪುಗಳನ್ನು ತಿದ್ದಿಕೊಳ್ಳಲು ಚಿಕ್ಕವರಾದೇನು, ದೊಡ್ಡವರಾದೇನು?

- ಸುಮಲತಾ ಅಂಬರೀಶ್‌ ಮಂಡ್ಯ ಸಂಸದೆ

click me!