ಕಾಂಬೋಡಿಯಾ ಪ್ರವಾಸ ಮುಗಿಸಿ ಎಚ್‌ಡಿಕೆ ವಾಪಸ್: 'ಅಲ್ಲೇ ಇರಿ ವ್ಯವಸ್ಥೆ ಮಾಡ್ತೇವೆ' ಅಂದಿದ್ದ ಸಚಿವರ ವಿರುದ್ಧ ಕಿಡಿ

By Ravi Janekal  |  First Published Aug 14, 2023, 11:04 AM IST

ಕಾಂಬೋಡಿಯಾ ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿನ್ನೆ ತಡರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕಾಂಬೋಡಿಯಾ ಪ್ರವಾಸ ಮುಗಿಸಿ ಕೆಐಎಎಲ್ ಏರ್‌ಪೋರ್ಟ್‌ಗೆ ತಡರಾತ್ರಿ ಆಗಮಿಸುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು ಎದುರಾಗುತ್ತಲೇ. ವಿದೇಶ ಪ್ರವಾಸದ ವೇಳೆ ಕುಹಕವಾಡಿದ್ದ ರಾಜ್ಯದ ಸಚಿವರ ವಿರುದ್ಧ  ವಾಗ್ದಾಳಿ ನಡೆಸಿದರು.


ಬೆಂಗಳೂರು (ಆ.14):  ಕಾಂಬೋಡಿಯಾ ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಿನ್ನೆ ತಡರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕಾಂಬೋಡಿಯಾ ಪ್ರವಾಸ ಮುಗಿಸಿ ಕೆಐಎಎಲ್ ಏರ್‌ಪೋರ್ಟ್‌ಗೆ ತಡರಾತ್ರಿ ಆಗಮಿಸುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು ಎದುರಾಗುತ್ತಲೇ. ವಿದೇಶ ಪ್ರವಾಸದ ವೇಳೆ ಕುಹಕವಾಡಿದ್ದ ರಾಜ್ಯದ ಸಚಿವರ ವಿರುದ್ಧ  ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ಸಿನ ಕೆಲವು ಸಚಿವರು, ನೀವು ವಿದೇಶದಲ್ಲೇ ಇದ್ಬಿಡಿ, ಎಲ್ಲ ವ್ಯವಸ್ಥೆ ಮಾಡುತ್ತೇವೆ ಕುಹಕವಾಡಿದ ಈ ವಿಚಾರ ಪ್ರಸ್ತಾಪಿಸಿದ ಎಚ್‌ಡಿ ಕುಮಾರಸ್ವಾಮಿಯವರು, ವಿದೇಶದಲ್ಲೇ ಇದ್ಬಿಡಿ ಎಂದಿದ್ರಲ್ಲ, ನಾನು ವಿದೇಶದಲ್ಲಿದ್ರೆ ಅವರಿಗೆ ಇಲ್ಲಿ ಲೂಟಿ ಹೊಡೆಯೋಕೆ ಅನುಕೂಲ ಆಗುತ್ತೆ ನಮ್ಮನ್ನು ಬಿಟ್ಬಿಡಿ ಅಂತ ಸಲಹೆ ಕೊಟ್ಟಿದ್ರಲ್ಲ. ನಾವು ಅದನ್ನು ಪಾಲಿಸಬೇಕಲ್ಲ ಯಾಕೆಂದರೆ ಇಲ್ಲಿ ದರೋಡೆ ಮಾಡಿಕೊಂಡು ಕೂತವ್ರಲ್ಲಾ. ಮಾನ ಮಾರ್ಯಾದೆ ಇಲ್ಲದೆ. ಇಂಥ ಲೂಟಿಕೋರರ ಪಾಪದ ಹಣದಿಂದ ನಾನು ವಿದೇಶ ಪ್ರವಾಸಕ್ಕೆ ಹೋಗಬೇಕಾ? ಎಂದು ಕಾಂಗ್ರೆಸ್ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Tap to resize

Latest Videos

ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ; ಎಚ್‌ ವಿಶ್ವನಾಥ್ ಭವಿಷ್ಯ

ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಮೀಸಲಿಟ್ಟಿದ್ದೇನೆ. ನಾನು ಎಲ್ಲೂ ಹೋಗಿಲ್ಲ. ಆದರೆ ಇದ್ದಲ್ಲೇ ಇದ್ದರೆ ಹೊರಜಗತ್ತಿನ ಜ್ಞಾನ ತಿಳಿಯುತ್ತಾ? ದೇಶ ಸುತ್ತು ಕೋಶ ಓದು ಅನ್ನೋ ಗಾದೆ ಮಾತು ಇದೆಯಲ್ಲ. ಅದರಂತೆ ಯಾವ ದೇಶದಲ್ಲಿ ಏನೇನು ಬೆಳವಣಿಗೆ ಆಗ್ತಿದೆ, ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕಲ್ಲವಾ? ಅದಕ್ಕಾಗಿ ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನದ ಮೇರೆಗೆ ಹೋಗಿದ್ದೆ 

ಅಲ್ಲಿ 18-20 ಎಕರೆಯಲ್ಲಿ ಕಟ್ಟಿರುವ ಅದ್ಭುತವಾದ ದೇವಸ್ಥಾನ ಇದೆ. ಅಂತಹ ದೇವಸ್ಥಾನ ನಮ್ಮ ದೇಶದಲ್ಲೂ ಇಲ್ಲ,  ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನ ಅದ್ಭುತವಾಗಿ ಕಟ್ಟಿದ್ದಾರೆ. ಆ ದೇಶದಲ್ಲಿ  ಒಂದು ಕಾಲದಲ್ಲಿ ಹಲವಾರು ಸಮಸ್ಯೆಗಳಿದ್ದವು. ಆದರೆ ಇತ್ತೀಚಿಗೆ ಆರ್ಥಿಕವಾಗಿ ಬೆಳೆಯುತ್ತಿದೆ. ಕಾಂಬೋಡಿಯಾದಲ್ಲಿ ಜಿಡಿಪಿ 7.7 ಅಂತ ಮೊನ್ನೆ ಮಂತ್ರಿಯೊಬ್ಬರು ಹೇಳ್ತಾ ಇದ್ರು. ನಮ್ಮಲ್ಲಿ ಹಣದ ಕೊರತೆ ಇಲ್ಲ, ಈಗ ಲೂಟಿ ಮಾಡ್ತಾವ್ರಲ್ಲ. ಈಗ ಒಳಗಡೆ ಟಿವಿಯಲ್ಲಿ ಮಧ್ಯಪ್ರದೇಶ 40% ಸರ್ಕಾರ ಅಂತಾ ಹೇಳಿ ಪೋಸ್ಟರ್ ಹಾಕ್ಕೊಂಡಿದ್ದಾರೆ.ದೇಶ ಎಲ್ಲಿಗೆ ತಗೊಂಡು ಹೋಗಿ ಮುಟ್ಟಿಸ್ತಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಏನ್‌ ‘ಸತ್ಯ ಹರಿಶ್ಚಂದ್ರನೇ’: ಸಚಿವ ದರ್ಶನಾಪುರ ವಾಗ್ದಾ​ಳಿ

 ಒಂದು ಕಡೆ ಬಡತನದ ಬೆಂದ ದೇಶಗಳು ಅಭಿವೃದ್ಧಿ ಆಗ್ತಿದ್ದರೆ ನಮ್ಮಲ್ಲಿ ಲೂಟಿ ಹೊಡೆಯುವ ಕೆಲಸ ನಡೆತೀದೆ. ಈಗ ಸಮಯ ಸಿಕ್ಕಿದ್ರಿಂದ ಸ್ವಲ್ಪ ಬೇರೆ ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಅಭಿವೃದ್ಧಿ ಬಗ್ಗೆ ತಿಳ್ಕೊಳ್ಳುತ್ತಿದ್ದೇನೆ ಎಂದರು. ಇದೇ ವೇಳೆ ಅಧಿಕಾರಿಗಳು ಸಹಿ ಮಾಡಿದ್ದಾರೆ ಎನ್ನುವ ಚಲುವರಾಯಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಕಥೆ ಬಿಡಿ, ಹೌದಪ್ಪ ಸಹಿ ನಾನೇ ಮಾಡಿದ್ದೇನೆ. ಹಾಗಾದ್ರೆ ಗವರ್ನರ್ ಹತ್ರ ಯಾಕ್ ಹೋದ್ರು. ನಾನು ಆ ಪ್ರಕರಣದ ಬಗ್ಗೆ ಚರ್ಚೆನೇ ಮಾಡಿಲ್ಲ. ಆದರೂ ನನ್ನ ಹೆಸರು ಯಾಕ್ ತಳುಕು ಹಾಕಿದರು? ಅಲ್ಲೂ ನನ್ನ ಹೆಸರೇ ಬೇಕು, ಯಾಕೆಂದರೆ ಅವರಿಗೆ ನನ್ನದೇ ಭಯ ಇರೋದು. ಮೊದ್ಲು ಪ್ರಾಮಾಣಿಕವಾಗಿ ನಡೆದುಕೊಳ್ಳೋದು ಕಲಿರಿ. ಪ್ರಾಮಾಣಿಕವಾಗಿ ನಡೆದುಕೊಂಡ್ರೆ ಇಂತಹ ಪರಿಸ್ಥಿತಿ ಏನಕ್ಕೆ ಬರುತ್ತೆ. ಮಂತ್ರಿಗಿರಿ ಸಿಕ್ಕಿದೆ ಅಂತಾ ಹಗಲು ದರೋಡೆ ಮಾಡೋದಲ್ಲ. ಒಳ್ಳೆ ಕೆಲಸ ಮಾಡಬೇಕು ಎಂದು ಚಲುವರಾಯಸ್ವಾಮಿಗೆ ತಿವಿದವರು.

click me!