ಸರ್ಕಾರ ಗೃಹಲಕ್ಷ್ಮೀ ಯೋಜನೆ ಪ್ರಾರಂಭಕ್ಕೆ ಮೊದಲು ಚಾಮುಂಡಿಗೆ ಎರಡು ಸಾವಿರ ಸಾವಿರ ರೂಪಾಯಿ ನೀಡಿದ್ದಾರೆ. ಅವರು ಹುಂಡಿಗೆ ಹಣ ಹಾಕಲಿಲ್ಲ ಎಂದು ಎಚ್‌ಡಿ ದೇವೇಗೌಡ ಹೇಳಿದರು.
ಹಾಸನ (ಸೆ.3): ಸರ್ಕಾರ ಗೃಹಲಕ್ಷ್ಮೀ ಯೋಜನೆ ಪ್ರಾರಂಭಕ್ಕೆ ಮೊದಲು ಚಾಮುಂಡಿಗೆ ಎರಡು ಸಾವಿರ ಸಾವಿರ ರೂಪಾಯಿ ನೀಡಿದ್ದಾರೆ. ಅವರು ಹುಂಡಿಗೆ ಹಣ ಹಾಕಲಿಲ್ಲ ಎಂದು ಎಚ್‌ಡಿ ದೇವೇಗೌಡ ಹೇಳಿದರು.
ಸಿಎಂ ಸಿದ್ದರಾಮಯ್ಯ ಗೃಹಲಕ್ಷ್ಮಿ ಯೋಜನೆ ಚಾಲನೆ ವೇಳೆ ಚಾಮುಂಡೇಶ್ವರಿಗೂ 2 ಸಾವಿರ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಚಾಮುಂಡೇಶ್ವರಿಯೂ ಹೆಣ್ಣು ದೇವತೆ, ಆ ತಾಯಿಗೂ ಎರಡು ಸಾವಿರ ಕೊಟ್ಟಿದ್ದಾರೆ. ಆ ತಾಯಿಗೆ ಹಣ ಕೊಟ್ಟು ಯೋಜನೆಗೆ ಶಕ್ತಿ ತುಂಬಲು ಬೇಡಿದ್ದಾರೆ. ಈ ಯೋಜನೆಗಳು ಎಷ್ಟು ವರ್ಷ ಇರುತ್ತವೆ ನೋಡೋಣ. ಮೂರು ನಾಲ್ಕು ತಿಂಗಳಲ್ಲೇ ಅದರ ಬಗ್ಗೆ ವ್ಯಾಖ್ಯಾನಿಸುವ ಪರಿಸ್ಥಿತಿ ಬರಬಹುದು ಎಂದರು.
ಎಚ್‌ಡಿಕೆ ಡಿಸ್ಚಾರ್ಜ್; ಆಪತ್ತಿಗಾದ ಆಪ್ತ ಸಹಾಯಕನಿಗೆ ಧನ್ಯವಾದ ತಿಳಿಸಿದ ಕುಮಾರಣ್ಣ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೂರು ತಿಂಗಳಿಂದ ಬಿಜೆಪಿ ಸರ್ಕಾರದಲ್ಲಾದ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಕೇವಲ ತಮಟೆ ಹೊಡೆಯುತ್ತಾ ಬಂದಿದ್ದಾರೆ. ತನಿಖೆ ಮಾಡಬೇಡಿ ಎಂದು ಅವರನ್ನು ಹಿಡಿದುಕೊಂಡವರು ಯಾರು? ಬಿಟ್ ಕಾಯಿನ್ ಬಗ್ಗೆ ತನಿಖೆ ಮಾಡುತ್ತೇವೆ ಅಂದಿದ್ರು ಬೇಡ ಅಂದವರು ಯಾರು? ಎಂದು ಪ್ರಶ್ನಿಸಿದರು ಮುಂದುವರಿದು, ಬಿಬಿಎಂಪಿಗೆ ಎರಡು ಬಾರಿ ಕಾಂಗ್ರೆಸ್ ಗೆ ಬೆಂಬಲ ಕೊಟ್ಟು ಬಿಬಿಎಂಪಿಯಲ್ಲಿ ಎಷ್ಟು ಅಕ್ರಮ ನಡೆದಿದೆ? ಈಗ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ ಯಾಕೆ ಮಾಡ್ತಿಲ್ಲ? ಬಸವರಾಜ ಬೊಮ್ಮಾಯಿ ಕೂಡ ತನಿಖೆ ಮಾಡಿ ಎಂದಿದ್ದಾರಲ್ಲ ಮಾಡಿ ಯಾಕೆ ಕೇವಲ ತಮಟೆ ಹೊಡೆತ್ತೀರಿ ಎಂದು ವಾಗ್ದಾಳಿ ನಡೆಸಿದರು.
ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ಕನ್ನಡಿಗ ಮಾಜಿ ಪ್ರಧಾನಿ ದೇವೇಗೌಡರು
ನೀರಾವರಿ ಮಂತ್ರಿಗಳು ಯಾವುದೇ ಮಾಹಿತಿಯನ್ನ ಹೊರ ಹಾಕದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ನಾನು ಇಷ್ಟು ವರ್ಷ ಹೋರಾಟ ಮಾಡಿದ್ದೇನೆ. ಎಲ್ಲಾ ಜಲಾಶಯ, ನೀರಾವರಿ ವಿವರವನ್ನ ಅಧಿಕಾರಿಗಳು ಸರಿಯಾಗಿ ಮಾಹಿತಿ ಕೊಡ್ತಿಲ್ಲ. ಯಾಕೆ ಎಂದು ಕೇಳಿದರೆ ನಮ್ಮ ಸಚಿವರು ಕಟ್ಟುನಿಟ್ಟಾಗಿ ಮಾಹಿತಿ ನೀಡದಂತೆ ಹೇಳಿದ್ದಾರೆ ಎನ್ನುತ್ತಾರೆ ಎಂದು ನೀರಾವರಿ ಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.