ಎಸ್ಸಿ,ಎಸ್ಟಿ ದೌರ್ಜನ್ಯ ಕೇಸ್‌ ಡಿಸಿಆರ್‌ಇ ಕಾರ್ಯನಿರ್ವಹಣೆ ಬಗ್ಗೆ ಮಾರ್ಗಸೂಚಿ

Kannadaprabha News   | Kannada Prabha
Published : Jul 15, 2025, 07:28 AM IST
Dr Ma Saleem

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ತನಿಖೆಗೆ ಸ್ಥಾಪಿಸಲಾಗಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಗಳ ಕಾರ್ಯ ನಿರ್ವಹಣೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಮಾರ್ಗಸೂಚಿ ಹೊರಡಿಸಿದ್ದಾರೆ.

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ತನಿಖೆಗೆ ಸ್ಥಾಪಿಸಲಾಗಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಗಳ ಕಾರ್ಯ ನಿರ್ವಹಣೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಮಾರ್ಗಸೂಚಿ ಹೊರಡಿಸಿದ್ದಾರೆ.

ಭಾರತ ಸಂವಿಧಾನದ ಅನುಚ್ಛೇದ 17ರಲ್ಲಿ ಅಸ್ಪೃಶ್ಯತೆಯನ್ನು ರದ್ದುಪಡಿಸಲಾಗಿದೆ. ಯಾವುದೇ ರೂಪದಲ್ಲಿ ಅಸ್ಪೃಶ್ಯತೆಯ ಆಚರಣೆ ಈಗ ಅಪರಾಧವಾಗಿದ್ದು, ಕಾನೂನು ಅಡಿ ಶಿಕ್ಷಾರ್ಹವಾಗಿದೆ ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

ಮಾರ್ಗಸೂಚಿ:

1.ಎಸ್‌ಡಿಪಿಒ ನಡೆಸುತ್ತಿದ್ದ ಪ. ಜಾತಿ ಮತ್ತು ಪಂಗಡದವರ ವಿರುದ್ಧದ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಇನ್ನು ಮುಂದೆ ಡಿಸಿಆ‌ರ್‌ಇ ಠಾಣೆಗಳಿಗೆ ಹಸ್ತಾಂತರಿಸಲಾಗುತ್ತದೆ. ಸರಹದ್ದಿನ ಪೊಲೀಸ್ ಠಾಣೆ ಮತ್ತು ಡಿಸಿಆ‌ರ್‌ಇ ಠಾಣೆಗಳ ನಡುವೆ ಉತ್ತಮ ಸಮನ್ವಯತೆಯ ಅವಶ್ಯಕತೆ ಇರಬೇಕು.

2.ಪ. ಜಾತಿ ಮತ್ತು ಪಂಗಡದವರ ಸೇರಿದ ಯಾವುದೇ ವ್ಯಕ್ತಿಯಿಂದ ಅಕ್ರಮದ ಬಗ್ಗೆ ದೂರು ಸ್ವೀಕರಿಸಿದಾಗ, ಸರಹದ್ದಿನ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಅಧಿಕಾರಿ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು. ಬಳಿಕ ಪ್ರಕರಣದ ಕುರಿತು ಮೇಲಾಧಿಕಾರಿ ಮತ್ತು ಐಜಿಪಿ ಹಾಗೂ ಪ್ರಧಾನ ಕಚೇರಿಗೆ ವರದಿ ಮಾಡಬೇಕು.

3.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ನಿಯಮಗಳು,1995 ರ ನಿಯಮ 7 ರಂತೆ ತನಿಖಾಧಿಕಾರಿಯನ್ನು ಎಸ್ಪಿ ಅಥವಾ ಘಟಕದ ಮುುಖ್ಯಸ್ಥರು ನೇಮಿಸಬೇಕು. ಡಿಸಿಆ‌ರ್‌ಇಗೆ ಪ್ರಕರಣ ವರ್ಗಾವಣೆ ಆಗುವವರೆಗೆ ತನಿಖೆ ನಡೆಯಬೇಕು. ಬಳಿಕ ಮೇಲಾಧಿಕಾರಿಗಳಿಂದ ಮಾಹಿತಿ ಪಡೆದು ಡಿಸಿಆರ್‌ಇ ತನಿಖಾಧಿಕಾರಿ ಪ್ರಕರಣ ಪಡೆಯಬೇಕು. ನಂತರ ಡಿಸಿಆರ್‌ಇಗೆ ವಿವರಗಳನ್ನು ಲಿಖಿತ ರೂಪದಲ್ಲಿ ಸ್ಥಳೀಯ ಪೊಲೀಸರು ನೀಡಬೇಕು.

7.ಸಂವಿಧಾನಾತ್ಮಕವಾಗಿ ಪ. ಜಾತಿ ಮತ್ತು ಪಂಗಡಗಳ ಸುರಕ್ಷತೆಗೆ ಸಂಬಂಧಿತ ಮಾಹಿತಿ ಮತ್ತು ಗುಪ್ತವಾರ್ತೆಗಳು ಡಿಸಿಆರ್‌ಇ ಠಾಣೆಗಳಿಗೆ ಲಭ್ಯವಿರಬೇಕು.

8.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸೇರಿದ ಯಾವುದೇ ವ್ಯಕ್ತಿ ತಮ್ಮ ಅಹವಾಲುಗಳನ್ನು ಸಾಮಾನ್ಯ ಪೊಲೀಸ್ ಠಾಣೆಗೆ ನೀಡಿದಾಗ ಅಂತಹ ಅರ್ಜಿಯನ್ನು ವೈಯಕ್ತಿಕವಾಗಿ ಪರಿಶೀಲಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಡಿಸಿಆರ್‌ಇ ಪೊಲೀಸ್ ಠಾಣೆಗೆ ಕಳುಹಿಸಬೇಕು.

9.ಡಿಸಿಆರ್‌ಇ ಪೊಲೀಸ್ ಠಾಣೆಗಳ ಸ್ಥಾಪನೆಯು ಪ. ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯದಿಂದ ಸಂಭವಿಸಬಹುದಾದ ಕಾನೂನು ಮತ್ತು ಸುವ್ಯವಸ್ಥೆ ಸಂಬಂಧಿತ ಹೊಣೆಗಾರಿಕೆಯಿಂದ ಸ್ಥಳೀಯ ಪೊಲೀಸರು ಮುಕ್ತರಾಗಿಲ್ಲ.

10.ಪ. ಜಾತಿ ಮತ್ತು ಪಂಗಡದವರ ರಕ್ಷಣೆಗೆ ಸಂಬಂಧಿಸಿದ ಸಂವಿಧಾನಾತ್ಮಕ ಉಪಬಂಧಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ನಿರ್ವಹಿಸಲು ಡಿಸಿಆರ್‌ಇ ಕೆಲಸ ಮಾಡಬೇಕು. ಈ ಸಂಬಂಧ ಕಾಲಕಾಲಕ್ಕೆ ಸೂಕ್ತ ನಿರ್ದೇಶನಗಳನ್ನು ಡಿಸಿಆರ್‌ಇ ಘಟಕದ ಮುಖ್ಯಸ್ಥರು ಹೊರಡಿಸಬಹುದು.

11.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಘಟಕಾಧಿಕಾರಿಗಳು ಪೊಲೀಸ್ ಪ್ರಧಾನ ಕಛೇರಿ ಮತ್ತು ಡಿಸಿಆರ್‌ಇ ಮುಖ್ಯ ಕಚೇರಿಗೆ ನಿರಂತರವಾಗಿ ಮಾಹಿತಿ ಹಂಚಿಕೊಳ್ಳಬೇಕು.

12. ಈ ಎಲ್ಲ ನಿರ್ದೇಶನಗಳನ್ನು ಪಾಲನೆಯಾಗುವಂತೆ ಎಲ್ಲ ಘಟಕಾಧಿಕಾರಿಗಳು ಕ್ರಮವಹಿಸುವುದು ಹಾಗೂ ತಮ್ಮ ಅಧೀನದಲ್ಲಿರುವ ಎಲ್ಲ ಅಧಿಕಾರಿಗಳಿಗೆ ಈ ನಿರ್ದೇಶನಗಳನ್ನು ಪಾಲಿಸುವಂತೆ ಸೂಕ್ತ ತಿಳಿವಳಿಕೆ ನೀಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌