BDA ಅಕ್ರಮ ಸೈಟ್‌ಗಳಿಗೆ ಸಕ್ರಮ ಭಾಗ್ಯ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

Kannadaprabha News   | Asianet News
Published : May 29, 2020, 08:59 AM IST
BDA ಅಕ್ರಮ ಸೈಟ್‌ಗಳಿಗೆ ಸಕ್ರಮ ಭಾಗ್ಯ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಸಾರಾಂಶ

ಅಕ್ರಮ ನಿವೇಶನದಾರರಿಗೆ ಸಕ್ರಮ ಭಾಗ್ಯ| ಬಿಡಿಎ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದವರಿಗೆ ಅವಕಾಶ| ದಂಡ ಕಟ್ಟಿದರೆ ಸಕ್ರಮ| ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 1976ರ ಕಾಯ್ದೆಗೆ ತಿದ್ದುಪಡಿ ತಂದು ಸಕ್ರಮ| 

ಬೆಂಗಳೂರು(ಮೇ.29): ನಗರದಲ್ಲಿನ ಅಕ್ರಮ ನಿವೇಶನದಾರರಿಗೆ ಸಕ್ರಮ ಭಾಗ್ಯ ಲಭಿಸಿದ್ದು, ದಶಕಕ್ಕೂ ಹೆಚ್ಚು ಕಾಲ ಸಕ್ರಮಕ್ಕೆ ಕಾದು ಕುಳಿತ ನಿವೇಶನದಾರರು ನಿಟ್ಟುಸಿರು ಬಿಡುವಂತಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ಪ್ರಾಧಿಕಾರದ ನಿವೇಶನಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಸಕ್ರಮ ಮಾಡಿಕೊಡುವ ಸಂಬಂಧ ಜಾರಿಗೊಳಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ದಂಡ ಕಟ್ಟಿ ನಿವೇಶನ ಸಕ್ರಮ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರದ ತೀರ್ಮಾನಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡಿಎ ವ್ಯಾಪ್ತಿಯಲ್ಲಿನ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವ ಬಗ್ಗೆ ತೀರ್ಮಾನ ಕೈಗೊಂಡು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು.

BDA: 45000 ಅಕ್ರಮ ಮನೆ ಸಕ್ರಮ, 10 ಸಾವಿರ ಕೊಟಿ ಆದಾಯ ನಿರೀಕ್ಷೆ!

ಬೆಂಗಳೂರಿನಲ್ಲಿ ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವ ವಿಚಾರದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ವಸತಿ ಸಚಿವ ವಿ.ಸೋಮಣ್ಣ ನಡುವೆ ವಾಕ್ಸಮರ ನಡೆದಿತ್ತು. ಆದರೂ ಅಂತಿಮವಾಗಿ ತಮ್ಮ ಹೋರಾಟದಲ್ಲಿ ಸೋಮಣ್ಣ ಜಯ ಗಳಿಸಿದ್ದಾರೆ. ವಿವಿಧ ಹಂತದ ನಿವೇಶನಗಳಿಗೆ ದಂಡ ನಿಗದಿಗೊಳಿಸಲಾಗಿದೆ. ಬಿಡಿಎ ನಿವೇಶನಗಳಲ್ಲಿ 12 ವರ್ಷಕ್ಕಿಂತ ಹಿಂದೆ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ಸಹಕಾರಿಯಾಗಲಿದೆ.

20/30 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.10ರಷ್ಟುದಂಡ ಕಟ್ಟಿಸಿಕೊಂಡು ಸಕ್ರಮ ಮಾಡಲು ಅವಕಾಶ ನೀಡಲಾಗಿದೆ. 30/40 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.20ರಷ್ಟು, 40/60 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.40ರಷ್ಟುಮತ್ತು 50/80 ಅಳತೆಯ ನಿವೇಶನಕ್ಕೆ ಈಗಿನ ಮಾರ್ಗಸೂಚಿ ದರದ ಶೇ.50ರಷ್ಟುದಂಡ ಕಟ್ಟಿಸಕ್ರಮ ಮಾಡಲು ಅವಕಾಶ ನೀಡಲಾಗಿದೆ. ಸುಮಾರು 45 ಸಾವಿರದಷ್ಟುಇರಬಹುದಾದ ಮನೆಗಳನ್ನು ಸಕ್ರಮಗೊಳಿಸಲು ಮಾರ್ಗಸೂಚಿ ಆಧಾರದ ಮೇಲೆ ಕನಿಷ್ಠ ಶುಲ್ಕ ವಿಧಿಸಲಾಗುವುದು. ಇದರಿಂದ ಸರ್ಕಾರಕ್ಕೆ ಸುಮಾರು .10 ಸಾವಿರ ಕೋಟಿ ಆದಾಯ ಬರುವ ನಿರೀಕ್ಷಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 1976ರ ಕಾಯ್ದೆಗೆ ತಿದ್ದುಪಡಿ ತಂದು ಸಕ್ರಮಗೊಳಿಸಲಾಗುತ್ತಿದೆ. ಬಿಡಿಎ ಭೂ ಸ್ವಾಧೀನ ಮಾಡಿಕೊಂಡು ಅಭಿವೃದ್ಧಿಪಡಿಸಿರುವ ಅಂದಾಜು 75 ಸಾವಿರ ನಿವೇಶನಗಳಲ್ಲಿ ಬಹುತೇಕ ಭೂಮಿಯ ಮೂಲ ಮಾಲಿಕರು ಅಕ್ರಮವಾಗಿ ನೆಲೆಸಿದ್ದಾರೆ. ಈ ಪೈಕಿ ಕೆಲ ಭೂಮಿಗೆ ಬಿಡಿಎ ಪರಿಹಾರ ನೀಡಿದ್ದು, ಕೆಲವುಗಳಿಗೆ ನೀಡಿಲ್ಲ. ಈ ಸಂಬಂಧ ಸಾವಿರಾರು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಇವುಗಳಿಗೆ ಮುಕ್ತಿ ಹೇಳಲು ಹಾಗೂ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಮನೆಗಳನ್ನು ಸಕ್ರಮ ಮಾಡಿಕೊಡಲು ಈ ತೀರ್ಮಾನ ಕೈಗೊಳ್ಳಲಾಗಿದೆ.

ನಿವೇಶನಗಳ ಅಳತೆ (ಚದರಡಿಗಳಲ್ಲಿ) ಮಾರ್ಗಸೂಚಿ ದರದ ದಂಡ

20/30 ಶೇ.10
30/40 ಶೇ.20
40/60 ಶೇ.40
50/80 ಶೇ.50

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ