
ಬೆಂಗಳೂರು (ಮೇ.8): ವಿಶೇಷ ಚೇತನರಿಗೆ ಉದ್ಯೋಗಾವಕಾಶಗಳು ಮತ್ತು ಕೌಶಲ್ಯಾಭಿವೃದ್ಧಿಗೆ ವೇದಿಕೆ ಒದಗಿಸುವ ‘ಆದಿದ್ವಾರ’ ಅಪ್ಲಿಕೇಶನ್ ಅನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.
ಅಸಿಸ್ಟೆಕ್ ಫೌಂಡೇಶನ್ (ಎಟಿಎಫ್) ಸಹಯೋಗದೊಂದಿಗೆ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಈ ಆ್ಯಪ್ ಬಿಡುಗಡೆ ಮಾಡಿದರು. ಇದೇ ವೇಳೆ, ಬರುವ ಆಗಸ್ಟ್‌ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿಶೇಷಚೇತನರಿಗಾಗಿ (ಪಿಡಬ್ಲ್ಯುಡಿಗಳು) ವಿಶೇಷ ಉದ್ಯೋಗ ಮೇಳ ನಡೆಸುವುದಾಗಿ ಘೋಷಿಸಿ, ಉದ್ಯೋಗ ಮೇಳದ ಅಧಿಕೃತ ಲೋಗೋ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಆದಿದ್ವಾರ ವೇದಿಕೆಯು ಉದ್ಯೋಗಾವಕಾಶಗಳು, ಇಂಟರ್ನ್‌ಶಿಪ್‌ಗಳು, ಕೌಶಲ್ಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುತ್ತದೆ. ಉದ್ಯೋಗದಾತರು ಸಮಗ್ರ ಉದ್ಯೋಗ ಪಾತ್ರಗಳನ್ನು ಪೋಸ್ಟ್ ಮಾಡಲು ನೆರವಾಗಲಿದೆ. ದಿವ್ಯಾಂಗರು ಯಾರಿಗೂ ಕಡಿಮೆ ಇಲ್ಲ. ಅವರಿಗೆ ವಿಶೇಷ ಪ್ರತಿಭೆ ಇರುತ್ತದೆ. ಕಾರ್ಪೊರೇಟ್ ಸಂಸ್ಥೆಗಳು ನೇಮಕಾತಿ ಸಮಯದಲ್ಲಿ ಅವರಿಗೆ ಸಮಾನ ಅವಕಾಶ ನೀಡಬೇಕು ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ 3,000ಕ್ಕೂ ಹೆಚ್ಚು ಅಂಗವಿಕಲ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದೆ. ತರಬೇತಿ ಪಾಲುದಾರರು ಮತ್ತು ಸಹಾಯಕ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳೊಂದಿಗೆ ಸಂಪರ್ಕಿಸಲು ದೊಡ್ಡ ವೇದಿಕೆ ಸಿಗಲಿದೆ. ವೃತ್ತಿ ಮಾರ್ಗದರ್ಶನ ಅವಧಿಗಳು, ಕೌಶಲ್ಯ ಮಾರ್ಗ ಜಾಗೃತಿ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್, ಎಟಿಎಫ್ ಸಿಇಒ ಪ್ರತೀಕ್ ಮಾಧವ್ ಸೇರಿ ಇತರೆ ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
- ಆಗಸ್ಟ್‌ನಲ್ಲಿ ದಿವ್ಯಾಂಗರಿಗೆ ವಿಶೇಷ ಉದ್ಯೋಗ ಮೇಳ
- ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಆಯೋಜನೆ
- ಲೋಗೋ ಬಿಡುಗಡೆ ಮಾಡಿದ ಸಚಿವ ಡಾ.ಶರಣ ಪ್ರಕಾಶ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ