ಲೋಡ್‌ ಶೆಡ್ಡಿಂಗ್‌: ವಿದ್ಯುತ್‌ ಖರೀದಿಗೆ ಹೊರ ರಾಜ್ಯಗಳಿಗೆ ಕರ್ನಾಟಕ ಸರ್ಕಾರ ಮೊರೆ?

By Kannadaprabha News  |  First Published Sep 1, 2023, 9:46 AM IST

ವಿದ್ಯುತ್‌ ಉತ್ಪಾದನೆ ಕುಸಿತ ಹಿನ್ನೆಲೆಯಲ್ಲಿ ಈಗಾಗಲೇ ಅಘೋಷಿತ ಲೋಡ್‌ ಶೆಡ್ಡಿಂಗ್‌ ಪ್ರಾರಂಭವಾಗಿದೆ. ಇದು ಸಾರ್ವಜನಿಕರು, ರೈತರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್‌ ಉತ್ಪಾದನೆ ಕೊರತೆಯನ್ನು ನಿಭಾಯಿಸುವುದು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದ್ದು, ಕೇಂದ್ರ ಮತ್ತು ಹೊರ ರಾಜ್ಯಗಳ ಮೇಲಿನ ಅವಲಂಬನೆ ಅನಿವಾರ್ಯವಾಗಿದೆ. 


ಬೆಂಗಳೂರು(ಸೆ.01):  ರಾಜ್ಯದಲ್ಲಿ ಮಳೆ ಕೊರತೆಯಾಗಿರುವುದು ವಿದ್ಯುತ್‌ ಉತ್ಪಾದನೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ವಿದ್ಯುತ್‌ ಕೊರತೆ ನೀಗಿಸಲು ಅನ್ಯ ರಾಜ್ಯಗಳ ಮೊರೆ ಹೋಗಲು ರಾಜ್ಯ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸಿದೆ.

ವಿದ್ಯುತ್‌ ಉತ್ಪಾದನೆ ಕುಸಿತ ಹಿನ್ನೆಲೆಯಲ್ಲಿ ಈಗಾಗಲೇ ಅಘೋಷಿತ ಲೋಡ್‌ ಶೆಡ್ಡಿಂಗ್‌ ಪ್ರಾರಂಭವಾಗಿದೆ. ಇದು ಸಾರ್ವಜನಿಕರು, ರೈತರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್‌ ಉತ್ಪಾದನೆ ಕೊರತೆಯನ್ನು ನಿಭಾಯಿಸುವುದು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದ್ದು, ಕೇಂದ್ರ ಮತ್ತು ಹೊರ ರಾಜ್ಯಗಳ ಮೇಲಿನ ಅವಲಂಬನೆ ಅನಿವಾರ್ಯವಾಗಿದೆ ಎಂದು ಇಂಧನ ಇಲಾಖೆಯ ಉನ್ನತ ಮೂಲಗಳು ಹೇಳಿವೆ.

Tap to resize

Latest Videos

ಕರ್ನಾಟಕದ ಲೋಡ್‌ ಶೆಡ್ಡಿಂಗ್‌: ಗಾಳಿ- ಮಳೆ ಎರಡೂ ಇಲ್ಲವೆಂದ ಇಂಧನ ಸಚಿವ ಕೆಜೆ ಜಾರ್ಜ್‌

ಕಳೆದ ತಿಂಗಳು ಜುಲೈನಲ್ಲಿ ಎಂಟು ಸಾವಿರ ಮೆಗಾವಾಟ್‌ ವಿದ್ಯುತ್‌ಗೆ ಬೇಡಿಕೆ ಇದ್ದು, ಆಗಸ್ಟ್‌ ವೇಳೆಗೆ ಇದರ ಪ್ರಮಾಣವು 16 ಸಾವಿರ ಮೆಗಾವಾಟ್‌ಗಿಂತ ಹೆಚ್ಚಾಗಿದೆ. ವಿದ್ಯುತ್‌ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ವಿದ್ಯುತ್‌ ಕಡಿಮೆ ಕಡಿತ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಮುಂಗಾರು ಮಳೆ ಕೊರೆತೆಯಾದ ಪರಿಣಾಮ ಇಂಧನ ಇಲಾಖೆಯು ವಿದ್ಯುತ್‌ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೊರ ರಾಜ್ಯಗಳಿಂದ ವಿದ್ಯುತ್‌ ಖರೀದಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಕೇಂದ್ರದ ಮೇಲೂ ಅವಲಂಬನೆಯಾಗುವಂತಹ ಪರಿಸ್ಥಿತಿ ಇದೆ. ವಿದ್ಯುತ್‌ ಉತ್ಪಾದನೆ ಮಾಡುವಂತಹ ಎಲ್ಲ ಮೂಲಗಳಿಂದ ಎಷ್ಟುಸಾಧ್ಯವೇ ಅಷ್ಟುಹೆಚ್ಚಿಸಲು ಇಂಧನ ಇಲಾಖೆಯು ಶ್ರಮವಹಿಸುತ್ತಿದೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

ಸೌರಶಕ್ತಿಯಿಂದ 5,900 ಮೆಗಾವಾಟ್‌, ಜಲಶಕ್ತಿಯಿಂದ 2,380 ಮೆಗಾವಾಟ್‌ ಮತ್ತು ಪವನಶಕ್ತಿಯಿಂದ 850 ಮೆಗಾವಾಟ್‌ ಉತ್ಪಾದನೆಗೆ ಅವಕಾಶ ಇದೆ. ಆದರೆ, ಮಳೆ ಇಲ್ಲದಿರುವುದರಿಂದ ನೀರಿನ ಕೊರತೆ ಎದುರಾಗಿಗದೆ. ಇದರ ಜತೆಗೆ ತಾಂತ್ರಿಕ ಸಮಸ್ಯೆಗಳು ಸಹ ಎದುರಾಗಿವೆ. ಈ ಎಲ್ಲಾ ಕಾರಣಗಳಿಂದ ವಿದ್ಯುತ್‌ ಉತ್ಪಾದನೆಯಲ್ಲಿ ನಿರೀಕ್ಷಿತಮಟ್ಟತಲುಪಲು ಸಾಧ್ಯವಾಗುತ್ತಿಲ್ಲ. ವಿದ್ಯುತ್‌ ಉತ್ಪಾದನೆ ಕುಂಟಿತವಾದರೆ ವಿದ್ಯುತ್‌ ಅಭಾವ ಪರಿಸ್ಥಿತಿ ತಲೆದೋರುವ ನಿರೀಕ್ಷೆ ಇದೆ ಎನ್ನಲಾಗಿದೆ.

click me!