ಮಠ ಸೇರಿ 182 ಸಂಸ್ಥೆಗಳಿಗೆ ಸರ್ಕಾರದ ದೀಪಾವಳಿ ಕೊಡುಗೆ

By Kannadaprabha NewsFirst Published Nov 14, 2020, 10:51 AM IST
Highlights

2019-20 ಮತ್ತು 2020-21ನೇ ಸಾಲಿನಲ್ಲಿ ಆಯವ್ಯಯದಲ್ಲಿ ಈ ಮಠ, ದೇವಸ್ಥಾನಗಳಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಹಾಯನುದಾನ ಘೋಷಿಸಿದ್ದ ಸರ್ಕಾರ| 39 ಮಠಗಳು ಹಾಗೂ 143 ವಿವಿಧ ದೇವಸ್ಥಾನ ಹಾಗೂ ಟ್ರಸ್ಟ್‌, ಸಂಘಗಳಿಗೆ ಕನಿಷ್ಠ 10 ಲಕ್ಷದಿಂದ ಎರಡು ಕೋಟಿ ರು.ಗಳವರೆಗೆ ಅನುದಾನ ಬಿಡುಗಡೆ|

ಬೆಂಗಳೂರು(ನ.14): ಹಿರಿಯೂರಿನ ಕುಂಚಟಿಗ ಮಠ, ಹೊಸದುರ್ಗದ ಕನಕಗುರು ಪೀಠ, ಹಾವೇರಿ ಜಿಲ್ಲೆಯ ಅಂಬಿಗರ ಚೌಡಯ್ಯ ಗುರುಪೀಠ, ಶಿರಾ ತಾಲ್ಲೂಕಿನ ಜಗದ್ಗುರು ಛಲವಾದಿ ಪೀಠ, ಹೊಸದುರ್ಗ ತಾಲ್ಲೂಕಿನ ಮಧುರೆಯ ಭಗೀರಥ ಗುರುಪೀಠ, ಹಿರಿಯೂರಿನ ಮಹಾಶಿವ ಶರಣ ಹರಳಯ್ಯ ಗುರುಪೀಠ ಸೇರಿದಂತೆ 39 ಮಠಗಳು ಹಾಗೂ 143 ವಿವಿಧ ದೇವಸ್ಥಾನ ಹಾಗೂ ಟ್ರಸ್ಟ್‌, ಸಂಘಗಳಿಗೆ ಕನಿಷ್ಠ 10 ಲಕ್ಷದಿಂದ ಎರಡು ಕೋಟಿ ರು.ಗಳವರೆಗೆ ಅನುದಾನ ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ದೀಪಾವಳಿ ಕೊಡುಗೆ ನೀಡಿದೆ.

ಕಳೆದ 2019-20 ಮತ್ತು 2020-21ನೇ ಸಾಲಿನಲ್ಲಿ ಆಯವ್ಯಯದಲ್ಲಿ ಈ ಮಠ, ದೇವಸ್ಥಾನಗಳಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಹಾಯನುದಾನ ಘೋಷಿಸಿತ್ತು. ಅದರನ್ವಯ ಹಣ ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.

'ಈ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಬೇಕು, ಆದೇಶ ಉಲ್ಲಂಘಿಸಿದ್ರೆ ಕ್ರಮ ಫಿಕ್ಸ್‌'

ಬುದ್ಧ, ಬಸವ, ಅಂಬೇಡ್ಕರ್‌ ಪ್ರತಿಷ್ಠಾನ ಚಿತ್ರದುರ್ಗ ಜಿಲ್ಲೆ, ಶ್ರೀ ಜಗದ್ಗುರು ಅಖಿಲ ಕುಂಚಟಿಗ ಮಹಾಸಂಸ್ಥಾನ ಮಠ. ಅರಳಿಕಟ್ಟೆ ಶಾಖೆ, ಹಿರಿಯೂರು ತಾಲ್ಲೂಕು, ಕನಕಗುರುಪೀಠ, ಕಾಗಿನೆಲೆ ಶಾಖೆ, ಹೊಸದುರ್ಗ, ಶ್ರೀ ಬಸವಬೃಂಗೇಶ್ವರ ಮಹಾಸಂಸ್ಥಾನ ಮಠ. ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ. ಶ್ರೀ ಮಹಾಲಕ್ಷ್ಮೀ ತಿಗಳರ ಮಹಾಸಂಸ್ಥಾನ ಟ್ರಸ್ಟ್‌, ಶಿವಗಂಗೆ, ತುಮಕೂರು ಜಿಲ್ಲೆ. ಶ್ರೀ ವಿರಕ್ತ ಮಠ, ಬಿ. ತಿಮ್ಮೇನಹಳ್ಳಿ ಶಾಖೆ, ಚಿತ್ರದುರ್ಗ ಸೇರಿದಂತೆ 39 ಮಠ ಹಾಗೂ 143 ದೇವಸ್ಥಾನ ಹಾಗೂ ಟ್ರಸ್ಟ್‌ಗಳಿಗೆ ಅನುದಾನ ನೀಡಲಾಗಿದೆ.
 

click me!