ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ

Published : Apr 25, 2026, 09:11 PM IST
DK Shivakumar

ಸಾರಾಂಶ

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್, ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿಎಂ ಒಡಂಬಡಿಕೆ ಕುರಿತು ಮಾತನಾಡಿದ ರಂಗನಾಥ್ ಇದೀಗ ಡಿಕೆಶಿ ಅಭಿಮಾನಿಗಳಲ್ಲಿ ಮತ್ತೆ ಹೊಸ ಕನಸು ಚಿಗುರಿಸಿದ್ದಾರೆ.

ತುಮಕೂರು (ಏ.25) ಕರ್ನಾಟಕ ಕಾಂಗ್ರೆಸ್‌ನಲ್ಲಿ ಪದೇ ಪದೇ ಕೇಳಿಬರುತ್ತಿರುವ ಅಧಿಕಾರ ಹಸ್ತಾಂತರ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರವನ್ನು ಡಿಕೆ ಶಿವಕುಮಾರ್‌ಗೆ ಬಿಟ್ಟುಕೊಡುವ ಕುರಿತು ಮಾಡಿಕೊಂಡಿರುವ ಒಡಂಬಡಿಕೆ ಹಲವು ಭಾರಿ ಭಾರಿ ಚರ್ಚೆಯಾಗಿದೆ. ಹೈಕಮಾಂಡ್ ಮಧ್ಯಪ್ರವೇಶ ಮಾಡಿ ಬೆಂಬಲಿಗ ಸಚಿವರಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಇದೀಗ ಎಲ್ಲವೂ ತಣ್ಣಗಾಗಿದೆ ಅನ್ನೋವಷ್ಟರಲ್ಲೇ ಡಿಕೆ ಶಿವಕುಮಾರ್‌ಗೆ ಅಧಿಕಾರ ಸಿಗಲಿದೆ ಅನ್ನೋ ಭವಿಷ್ಯ ಹೊರಬಿದ್ದಿದೆ. ಕುಣಿಗಲ್ ಶಾಸಕ ರಂಗನಾಥ್ ಸ್ಫೋಟಕ ಹೇಳಿಕೆ ನೀಡಿದ್ದು, ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಗುಡ್ ನ್ಯೂಸ್ ಸಿಗುವ ಸಾಧ್ಯತೆಗಳ ಕುರಿತು ಮಾತನಾಡಿದ್ದಾರೆ.

ಒಡಂಬಡಿಗೆ ಪೂರ್ಣಗೊಳ್ಳಲಿ

ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಸ್ತಾಂತರ ಕುರಿತು ಒಡಂಬಡಿಗೆ ಆಗಿತ್ತು. ಈ ಒಡಂಬಡಿಕೆ ಪರಿಪೂರ್ಣತೆ ಆಗಲಿ ಎಂದು ಇಡೀ ಕರ್ನಾಟಕ ಜನತೆ ಮಾತನಾಡುತ್ತಿದ್ದಾರೆ ಎಂದು ಶಾಸಕ ರಂಗನಾಥ್ ಹೇಳಿದ್ದಾರೆ. ಜನರು ಈ ಕುರಿತು ಎದುರುನೋಡುತ್ತಿದ್ದಾರೆ. ಆದರೆ ಇಲ್ಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಕಾರಣ ನನಗೆ ಮುಖ್ಯಮಂತ್ರಿಗಳ ವಿಚಾರವಾಗಿ ಮಾತನಾಡಬಾರದು ಎಂದು ನೋಟಿಸ್ ಕೊಟ್ಟಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ನೋಟಿಸ್ ಬಳಿಕ ಶಾಸಕರು, ನಾಯಕರು ಸೈಲೆಂಟ್ ಆಗಿದ್ದರು. ಇದೀಗ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಅನ್ನೋವಷ್ಟರಲ್ಲೇ ರಂಗನಾಥ್ ಹೇಳಿಕೆ ಇದೀಗ ಕಾಂಗ್ರೆಸ್‌ನಲ್ಲಿ ಮತ್ತೆ ನಾಯಕತ್ವ ವಿಚಾರವನ್ನು ಮುನ್ನಲೆಗೆ ತಂದಿದೆ. ಇದೀಗ ಸಿದ್ದರಾಮಯ್ಯ ಬಣದ ನಾಯಕರು ಇದಕ್ಕೆ ಕೌಂಟರ್ ನೀಡುವ ಸಾಧ್ಯತೆ ಇದ್ದು. ಮತ್ತೆ ಕೋಲಾಹಲ ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ.

ರಾಜಣ್ಣ ನಡೆ ಕುರಿತು ಪ್ರತಿಕ್ರಿಯೆ

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೇ ಕೆಎನ್ ರಾಜಣ್ಣ ಪಕ್ಷ ಬೇರೆ ಪಕ್ಷದ ಕಡೆ ಮುಖ ಮಾಡುತ್ತಾರೆಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ರಂಗನಾಥ್, ಈ ಪ್ರಶ್ನೆಗೆ ತುಮಕೂರು ಜಿಲ್ಲೆಯವನಾಗಿ ನನ್ನ ಬಳಿ ಉತ್ತರವಿಲ್ಲ.ಈ ಪ್ರಶ್ನೆಯನ್ನು ಅವರನ್ನೇ ಕೇಳಬೇಕು ಎಂದಿದ್ದಾರೆ.

ಇದೇ ವೇಳೆ ರಂಗನಾಥ್ ಡಿಕೆ ಶಿವಕುಮಾರ್ ಸಿಎಂ ಆಗಲಿಲ್ಲ ಎಂದರೇ ಬೇರೆ ಪಕ್ಷಗಳ ಕಡೆ ಮುಖ ಮಾಡುತ್ತಾರೆಂಬ ಬಾಲಕೃಷ್ಣ ಹೇಳಿಕೆ ವಿಚಾರದ ಕುರಿತು ತಿರುಗೇಟು ನೀಡಿದ್ದಾರೆ. ಜಮೀರ್ ಅಹಮ್ಮದ್ ಹೊುತ್ತಿಲ್ಲ ಅನ್ನೊದನ್ನು ಹೇಳೊಕೊಸ್ಕರ ಆ ಮಾತು ಹೇಳಿದ್ದಾರೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಾ.ರಾಜ್ ಸಮಾಧಿ ಕುರಿತು ನಾಲಗೆ ಹರಿಬಿಟ್ಟ ಚೇತನ್ ಮನೆಗೆ ಮುತ್ತಿಗೆ, ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಟ
ಭಾರತದಲ್ಲಿ ಸರ್ಕಾರಿ ಅಧಿಕಾರಿಗಳ ಕುರ್ಚಿ ಮೇಲೆ ಬಿಳಿ ಟವೆಲ್ ಯಾಕಿರುತ್ತೆ? ಬ್ರಿಟಿಷರ ಪದ್ಧತಿ ಹಿಂದಿದೆ ಬಲವಾದ ಕಾರಣ