ಕಾಂಗ್ರೆಸ್ ಕಾರ್ಯಕರ್ತರಿಗೆ ಗುಡ್‌ನ್ಯೂಸ್; ನಿಗಮ ಮಂಡಳಿ ಹುದ್ದೆ ನೀಡಲು ಪಟ್ಟಿ ರೆಡಿ ಎಂದ ಸಿಎಂ

By Kannadaprabha News  |  First Published Jan 1, 2024, 1:04 PM IST

ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಹೀಗಾಗಿ ಅವರಿಗೂ ನಿಗಮ ಹುದ್ದೆ ಸ್ಥಾನ ಮಾನ ನೀಡಲು ಪಟ್ಟಿ ಮಾಡ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ಬೆಂಗಳೂರು (ಜ.1): ನಮ್ಮ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಹೀಗಾಗಿ ಅವರಿಗೂ ನಿಗಮ ಹುದ್ದೆ ಸ್ಥಾನ ಮಾನ ನೀಡಲು ಪಟ್ಟಿ ಮಾಡ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,  ನಾವು ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆ ನೀಡುವ ಬಗ್ಗೆ ಯೋಚಿಸಿದ್ದೆವು. ಆದರೆ ಕಾರ್ಯಕರ್ತರಿಗೂ ಸ್ಥಾನ ನೀಡಲು ಹೈಕಮಾಂಡ್‌ ಸೂಚಿಸಿದೆ. ಹೀಗಾಗಿ ಅವರ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ ಎಂದರು. ಜ.4ರಂದು ದೆಹಲಿಗೆ ಬರುವಂತೆ ನಮ್ಮ ನಾಯಕರು ಕರೆದಿದ್ದಾರೆ. ನಾವು ತೆರಳುತ್ತಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಚರ್ಚೆಯಾಗುವ ನಿರೀಕ್ಷೆಯಿದೆ ಎಂದರು.

Tap to resize

Latest Videos

ವರದಿಗಾರರ ಡೈರಿ: ರಾಹುಲ್‌ ಗಾಂಧಿ ನಡೆಸಲಿರುವ ಹೊಸ ಯಾತ್ರೆ ಯಾವುದು ಅಂತ ಸಿದ್ದರಾಮಯ್ಯಗೆ ಗೊತ್ತಿಲ್ವಾ?

ಕಾಂಗ್ರೆಸ್ ಕಾರ್ಯಕರ್ತರಿಗೆ ಶೀಘ್ರ ನಿಗಮ ಮಂಡಳಿ ಸ್ಥಾನಮಾನಕ್ಕೆ ಆಗ್ರಹ

ರಾಜ್ಯ ನಿಗಮ ಮಂಡಳಿ ಸ್ಥಾನಮಾನ ನೀಡುವಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪರಿಗಣಿಸಬೇಕು ಎಂದು ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ ಆಗ್ರಹಿಸಿದ್ದರು.

 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಜಯ ಸಾಧಿಸಲು ರಾಜ್ಯದ ಜನತೆಯ ಆಶೀರ್ವಾದ ಹಾಗೂ ಪಕ್ಷದ ಕಾರ್ಯಕರ್ತರ ಶ್ರಮ ಅನನ್ಯವಾದದ್ದು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ೬ ತಿಂಗಳು ಗತಿಸಿದ್ದು ರೈತರ, ಕಾರ್ಮಿಕರ ಹಾಗೂ ಜನತೆಯ ಹಿತ ಕಾಪಾಡಲು ಘೋಷಿಸಿದ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜನತೆಯ ವಿಶ್ವಾಸವನ್ನು ಮತ್ತಷ್ಟು ದ್ವಿಗುಣಗೊಳಿಸಿದ್ದಾರೆ.

ಯಾವಾಗ ಬೇಕಾದ್ರು ಕೈ ಸರ್ಕಾರ ಪತನಗೊಳ್ಳುತ್ತೆ; ಬಿವೈ ವಿಜಯೇಂದ್ರ ಸುಳಿವು!

ಆದರೆ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ಅವರು ನಿಗಮ ಮಂಡಳಿಯ ಸ್ಥಾನಮಾನಕ್ಕೆ ಕೇವಲ ಶಾಸಕರನ್ನು ಪರಿಗಣಿಸಲು ಮುತುವರ್ಜಿ ವಹಿಸುತ್ತಿರುವುದು ಕಂಡು ಬರುತ್ತಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಮತ್ತು ಪಕ್ಷವು ನಿಗಮ ಮಂಡಳಿ ಸ್ಥಾನಮಾನವನ್ನು ನೀಡುವಾಗ ಕಾರ್ಯಕರ್ತರನ್ನು ಪರಿಗಣನೆಗೆ ತಗೆದುಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

click me!