
ಗೋಕಾಕ್(ಜ.30): ಅತೃಪ್ತಿ, ಅಸಮಾಧಾನ, ಕೋಪ, ಬಂಡಾಯ ಇವೆಲ್ಲಾ ಒತ್ತಟ್ಟಿಗಿರಲಿ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜನ್ರತಿನಿಧಿಗಳು ಏನಾದರೂ ನಾಟಕವಾಡಲಿ. ಆದರೆ ತಮ್ಮನ್ನು ಆರಿಸಿ ಕಳುಹಿಸಿದ ಕ್ಷೇತ್ರದ ಜನರನ್ನು ಮರೆತವರನ್ನು ಶಾಸಕ ಎಂದು ಕರೆಯುವುದಾದರೂ ಹೇಗೆ ಹೇಳಿ?.
ಗೋಕಾಕ್ ಶಾಸಕರ ಕತೆಯೂ ಹೀಗೆ ಇದೆ. ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದ್ದಿರುವ ಈ ಜನಪ್ರಿಯ ಶಾಸಕ, ತಮ್ಮದೇ ನಾಯಕರ ಮೇಲೆ ಮುನಿಸಿಕೊಂಡು ಮುಂಬೈಗೆ ಹೊಗಿ ಕುಳಿತಿದ್ದಾರೆ.
ಕಳೆದೊಂದು ತಿಂಗಳಿನಿಂದ ಮುಂಬೈ ಐಷಾರಾಮಿ ಹೊಟೇಲ್‌ನಲ್ಲಿರುವ ಗೋಕಾಕ್ ಶಾಸಕರು, ಕ್ಷೇತ್ರದ ಜನರನ್ನು ಮರೆತೇ ಹೋಗಿದ್ದಾರೆ. ಎರಡು ದಿನದಲ್ಲಿ ರಾಜೀನಾಮೆ ಕೊಡ್ತಿನಿ ಅಂದಿದ್ದ ಶಾಸಕರು, ಒಂದು ತಿಂಗಳು ಕಳೆದರೂ ಏನೂ ನಿರ್ಧಾರ ಕೈಗೊಳ್ಳದೇ ಮುಂಬೈನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ಇತ್ತ ತಮ್ಮ ಶಾಸಕರನ್ನು ಕಾಣದೇ ಕ್ಷೇತ್ರದ ಜನ ಕಂಗಾಲಾಗಿದ್ದು, ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲಾಗದೇ ಪರದಾಡುತ್ತಿದ್ದಾರೆ. ಇದೇ ವೇಳೆ ಗೋಕಾಕ್ ಕ್ಷೇತ್ರದ ರೈತರು ಕೂಡ ಕಂಗಾಲಾಗಿದ್ದು, ಶಾಸಕರ ಒಡೆತನದ ಸೌಭಾಗ್ಯ ಲಕ್ಷ್ಮೀ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರು ಬಾಕಿ ಹಣ ಕಾಣದೆ ಕಂಗಾಲಾಗಿದ್ದಾರೆ.
ಈ ಕುರಿತು ರೈತರು ಪ್ರತಿಭಟನೆ ಮಾಡಿದರೂ ಕ್ಯಾರೆ ಎನ್ನದ ಶಾಸಕರು, ಮುಂಬೈನ ಐಷಾರಾಮಿ ಹೋಟೆಲ್‌ನಲ್ಲಿ ಹಂಗ್ ಮಾಡ್ತಿನಿ, ಹಿಂಗ್ ಮಾಡ್ತಿನಿ ಅಂತಾ ಕ್ಷಣಕ್ಕೊಂದು ಹೇಳಿಕೆ ಕೊಡುತ್ತಾ ಕಾಲಹರಣ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ