ಬೆಳಗಾವಿಗೆ ಬಂದ ಗೋವಾ ಮಾಜಿ ಶಾಸಕನ ಮೇಲೆ ಆಟೋ ಡ್ರೈವರ್ ಹಲ್ಲೆ; ಕೆಲವೇ ಕ್ಷಣಗಳಲ್ಲಿ ಸಾವು!

Published : Feb 15, 2025, 03:00 PM ISTUpdated : Feb 15, 2025, 03:14 PM IST
ಬೆಳಗಾವಿಗೆ ಬಂದ ಗೋವಾ ಮಾಜಿ ಶಾಸಕನ ಮೇಲೆ ಆಟೋ ಡ್ರೈವರ್ ಹಲ್ಲೆ; ಕೆಲವೇ ಕ್ಷಣಗಳಲ್ಲಿ ಸಾವು!

ಸಾರಾಂಶ

ಬೆಳಗಾವಿಯಲ್ಲಿ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಆಟೋ ಚಾಲಕ ಹಲ್ಲೆ ಮಾಡಿದ್ದು,  ಕೆಲವೇ ಕ್ಷಣಗಳಲ್ಲಿ ಲಾಡ್ಜ್‌ನಲ್ಲಿ ಕುಸಿದುಬಿದ್ದು ನಿಗೂಢವಾಗಿ ಸಾವಿಗೀಡಾಗಿದ್ದಾರೆ.

ಬೆಳಗಾವಿ (ಫ.15): ಗೋವಾ ರಾಜ್ಯದಿದ ಕುಂದಾನಗರಿ ಬೆಳಗಾವಿಗೆ ಬಂದಿದ್ದ ಗೋವಾದ ಮಾಜಿ ಶಾಸಕರ ಲಾವೋ ಮಾಮಲೇದಾರ್ (Lavoo Mamledar) ಜೊತೆಗೆ ಕ್ಷುಲ್ಲಕ ಕರಣಕ್ಕೆ ಜಗಳ ಆರಂಭಿಸಿದ ಆಟೋ ಡ್ರೈವರ್, ಮಾಜಿ ಶಾಸಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿನ ಸಿಬ್ಬಂದಿ ಜಗಳ ಬಿಡಿಸಿ ಕಳುಹಿಸಿದ್ದಾರೆ. ಅಲ್ಲಿಂದ ಲಾಡ್ಜ್ ಒಳಗೆ ಬಂದ ಮಾಜಿ ಶಾಸಕ ಲಿಪ್ಟ್‌ ಬಳಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ.

ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕನ ಮೇಲೆ ಆಟೋ ಚಾಲಕನಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ (69) ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿಯ ಶ್ರೀನಿವಾಸ ಲಾಡ್ಜ್ ಎದುರು ಘಟನೆ ನಡೆದಿದೆ. ಗೋವಾದ ಪೋಂಡಾ ಕ್ಷೇತ್ರದ ಶಾಸಕರಾಗಿದ್ದ ಲಾವೋ ಮಾಮಲೇದಾರ್ ಇಂದು ಬೆಳಗಾವಿಗೆ ಆಗಮಿಸಿದ್ದರು. ಈ ವೇಳೆ ಬೆಳಗಾವಿಯ ಖಡೇಬಜಾರ್ ಬಳಿಕ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆಗಿದೆ. 

ರಸ್ತೆಯಲ್ಲಿ ಎಷ್ಟೇ ಕೂಗಿದರೂ ಕೇರ್ ಮಾಡದೇ ಲಾಡ್ಜ್‌ನ ಬಳಿ ಬಂದ ಮಾಜಿ ಶಾಸಕ ಲಾವೋ ಮಾಮಲೇದಾರ್ ಅವರನ್ನು ಹಿಂಬಾಲಿಸಿಕೊಂಡು ಬಂದ ಆಟೋ ಚಾಲಕ ಶ್ರೀನಿವಾಸ ಲಾಡ್ಜ್ ಬಳಿ ಬಂದು ಜಗಳ ಆರಂಭಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಲಾಡ್ಜ್ ಎದುರು ಲಾವೋ ಮಾಮಲೇದಾರ್ ಮೇಲೆ ಆಟೋ ಚಾಲಕ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆಗ ಸ್ಥಳೀಯರು ಹಾಗೂ ಲಾಡ್ಜ್‌ನ ಸಿಬ್ಬಂದಿ ಬಂದು ಇಬ್ಬರ ಜಗಳವನ್ನು ಬಿಡಿಸಿದ್ದಾರೆ. 

ಇದನ್ನೂ ಓದಿ: ರಾಜ್ಯದ ಜನತೆಗೆ 5 ಲಕ್ಷ ಗೆಲ್ಲುವ ಬಂಪರ್ ಆಫರ್ ಕೊಟ್ಟ ಸರ್ಕಾರ!

ಇದಾದ ನಂತರ ವೃದ್ಯಾಪ್ಯ ವಯಸ್ಸಿನ ಹಲ್ಲೆಗೊಳಗಾದ ಮಾಜಿ ಶಾಸಕ ಲಾವೂ ಮಾಮಲೇದಾರ್ ತಾವು ತಂಗಿದ್ದ ಲಾಡ್ಜ್‌ನ ಮೆಟ್ಟಿಲನ್ನೇರಿ ತಮ್ಮ ರೂಮಿಗೆ ಹೋಗಲು ಬಂದಿದ್ದಾರೆ. ಆದರೆ, ಮೆಟ್ಟಿಲು ಏರುವ ಮೊದಲೇ ಕಾಲನ್ನು ಎತ್ತಿ ಇಡುವುದಕ್ಕೂ ಸಾಧ್ಯವಾಗದೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ನಂತರ, ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೂಡಲೇ ಮಾಜಿ ಶಾಸಕರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುವುದಕ್ಕೆ ಮುಂದಾದರೂ ಅದಾಗಲೇ ಜೀವ ಹೋಗಿತ್ತು.

ಇನ್ನು ಮಾಜಿ ಶಾಸಕ ಲಾವೋ ಅವರ ಶವವನ್ನು ಬಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಇರಿದಲಾಗಿದೆ. ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ವೃದ್ಧ ಮಾಜಿ ಶಾಸಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ