Glanders Disease Scare: ಮಾರಕ ರೋಗದ ಭೀತಿ, ರೇಸ್ ಕೋರ್ಸ್ ಸುತ್ತ ಕತ್ತೆ ಕುದುರೆ ಹೆಸರಗತ್ತೆ ಓಡಾಟಕ್ಕೆ ನಿರ್ಬಂಧ!

Published : Dec 19, 2025, 09:59 AM IST
Glanders Scare: Movement of Horses Banned Near Race Course

ಸಾರಾಂಶ

Bangalore Turf Club horse restrictions:: ಕುದುರೆ ಗ್ಲ್ಯಾಂಡರ್ಸ್ ರೋಗ ಕಾಣಿಸಿಕೊಂಡಿರುವ ಹಿನ್ನೆಲೆ ಬೆಂಗಳೂರು ಟರ್ಫ್ ಕ್ಲಬ್‌ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನ ನಿರ್ಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು (ಡಿ.19) : ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್‌ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಕತ್ತೆ ಪ್ರಾಣಿಗಳ ಚಲನೆಯನ್ನು ನಿರ್ಬಂಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿರುವ ಕುದುರೆಗಳಲ್ಲಿ ಕೆಲವು ದಿನಗಳ ಹಿಂದೆ ಸೋಂಕು ರೋಗ ಗ್ಲ್ಯಾಂಡರ್ಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕುಕಾರಕ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧಕ ಮತ್ತು ನಿಯಂತ್ರಣ ಅಧಿನಿಯಮದಂತೆ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಗ್ಲ್ಯಾಂಡರ್ಸ್ ಕೇಂದ್ರೀಕೃತ ಸ್ಥಳ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಜಾನುವಾರು ರೋಗಗಳ ನಿರ್ವಹಣಾ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ಬೆಂಗಳೂರು ಟರ್ಫ್ ಕ್ಲಬ್ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಮನೋರಂಜನೆ, ಮೆರವಣಿಗೆ, ಶುಭಕಾರ್ಯಗಳು ಸೇರಿದಂತೆ ಯಾವುದೇ ಉದ್ದೇಶಗಳಿಗೆ ಕುದುರೆ, ಕತ್ತೆ, ಹೇಸರಕತ್ತೆಗಳನ್ನು ಓಡಾಡಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಗ್ಲ್ಯಾಂಡರ್ಸ್ ರೋಗವೂ ಅತ್ಯಂತ ಸಾಂಕ್ರಾಮಿಕ ರೋಗವಾಗಿದ್ದು, ಕುದುರೆಗಳು ರೋಗಪೀಡಿತವಾದರೆ ಗುಣವಾಗುವುದಿಲ್ಲ. ಕುದುರೆ ಜಾತಿಯ ಪ್ರಾಣಿಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಅಲ್ಲದೇ, ಈ ಕುದುರೆಗಳ ಸಂಪರ್ಕದಿಂದ ಮನುಷ್ಯನಿಗೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಅತ್ಯಂತ ವೇಗವಾಗಿ ಹಬ್ಬುವ ಕಾರಣ ಟರ್ಫ್ ಕ್ಲಬ್‌ನ 2 ಕಿ.ಮೀ ವ್ಯಾಪ್ತಿಯಲ್ಲಿ ಕುದುರೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ರೇಸ್ ಮುಂದುವರಿಕೆ:

ಕುದುರೆಗಳಿಗೆ ಗ್ಲ್ಯಾಂಡರ್ಸ್ ರೋಗ ಕಾಣಿಸಿಕೊಂಡಿದ್ದರೂ ಎಂದಿನಂತೆ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್ ಮುಂದುವರೆದಿದೆ. ಗುರುವಾರವೂ ಕಲ್ಕತ್ತ ರೇಸ್ ನಡೆಯಿತು ಎಂದು ಕ್ಲಬ್‌ನ ಸಿಬ್ಬಂದಿ ತಿಳಿಸಿದರು.

ಗ್ಲ್ಯಾಂಡರ್ಸ್ ರೋಗ ನಿಯಂತ್ರಣ ಮತ್ತು ಹಬ್ಬದಂತೆ ಮುಂಜಾಗ್ರತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪಶು ಇಲಾಖೆ ಮತ್ತು ಟರ್ಫ್ ಕ್ಲಬ್‌ಗೆ ನಿರ್ದೇಶನ ನೀಡಲಾಗಿದೆ. ಸದ್ಯಕ್ಕೆ ಗಮನಾರ್ಹ ಅಪಾಯ ಕಂಡು ಬಂದಿಲ್ಲ. ಮನುಷ್ಯರಿಗೆ ರೋಗ ಹಬ್ಬದಂತೆ ವಿಶೇಷ ನಿಗಾ ವಹಿಸಲಾಗಿದೆ.

ಜಿ. ಜಗದೀಶ್, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ

ಮನುಷ್ಯರಲ್ಲಿ ಮುನ್ನೆಚ್ಚರಿಕೆ ಕ್ರಮಗಳು

- ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಮನುಷ್ಯರು ದೂರ ಇರಬೇಕು.

- ಸೋಂಕಿತ ಪ್ರಾಣಿಗಳಿರುವ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡುವುದು.

- ಸೋಂಕಿತ ಪ್ರಾಣಿಗಳನ್ನು ಕಟ್ಟಿರುವ, ಓಡಾಡಿರುವ ಸ್ಥಳಗಳನ್ನು ಸ್ಯಾನಿಟೈಜ್ ಮಾಡಬೇಕು.

- ಪಶು ವೈದ್ಯರಿಂದ ಸೋಂಕು ಪೀಡಿತ ಪ್ರದೇಶದ ಮೇಲೆ ನಿಗಾ.

- ಆರೋಗ್ಯವಂತ ಕುದುರೆಗಳನ್ನು ಸೋಂಕಿತ ಕುದುರೆಗಳಿಂದ ಪ್ರತ್ಯೇಕಗೊಳಿಸಬೇಕು.

- ಸೋಂಕು ಪೀಡಿತ ಪ್ರದೇಶದಲ್ಲಿ ಆರೋಗ್ಯವಂತ ಕುದುರೆ, ಕತ್ತೆ, ಹೇಸರಕತ್ತೆ ಓಡಾಡದಂತೆ ನಿರ್ಬಂಧಿಸುವುದು.

- ಸೋಂಕು ಶಂಕಿತ ಕುದುರೆಗಳನ್ನು ನೋಡಿಕೊಳ್ಳುವವರು ಪಿಪಿಇ ಕಿಟ್ ಧರಿಸಿ ಪಾಲನೆ, ಆರೈಕೆ ಮಾಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಎರಡನೆ ಬೆಳೆಗೆ ನೀರಿಲ್ಲ, ಸಸಿ ನಾಟಿ ಮಾಡಬೇಡಿ' ತುಂಗಭದ್ರಾ ರೈತರಿಗೆ ಸಚಿವ ತಂಗಡಗಿ ಅಚ್ಚರಿಯ ಸಲಹೆ!
ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?