ಕೃಷಿ ಚಟುವಟಿಕೆಗಳಿಗೆ ಹೆಚ್ಚು ಸಾಲ ನೀಡಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

By Kannadaprabha News  |  First Published Nov 10, 2024, 8:24 AM IST

ಕೇಂದ್ರ ಸರ್ಕಾರದ ಮುದ್ರಾ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಸಹ ಸಾಲ ವಿತರಣೆ ಹೆಚ್ಚಿಸಬೇಕು. ವಿಶೇಷವಾಗಿ ತೆಲಂಗಾಣದ ಡೈರಿ ವಲಯ, ಕೇರಳದ ಮೀನುಗಾರಿಕಾ ವಲಯಕ್ಕೆ ಸಾಲ ವಿತರಣೆ ಹೆಚ್ಚಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಪ್ರಾಯೋಜಕ ಬ್ಯಾಂಕುಗಳು ಆಯಾ ರಾಜ್ಯ ಸರ್ಕಾರದ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು: ನಿರ್ಮಲಾ ಸೀತಾರಾಮನ್


ಬೆಂಗಳೂರು(ನ.10): ಕೃಷಿ ಸಂಬಂಧಿತ ಚಟುವಟಿಕೆಗಳಾದ ಹೈನುಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆಮುಂತಾದವು ಗಳಿಗೆ ವಿಶೇಷ ಗಮನ ಹರಿಸಿ ಹೆಚ್ಚಿನ ಸಾಲ ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ನಿರ್ದೇಶನ ನೀಡಿದರು. 

ಶನಿವಾರ ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ರಾಜ್ಯಗಳನ್ನು ಒಳಗೊಂಡ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮುದ್ರಾ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿಯಲ್ಲಿ ಸಹ ಸಾಲ ವಿತರಣೆ ಹೆಚ್ಚಿಸಬೇಕು. ವಿಶೇಷವಾಗಿ ತೆಲಂಗಾಣದ ಡೈರಿ ವಲಯ, ಕೇರಳದ ಮೀನುಗಾರಿಕಾ ವಲಯಕ್ಕೆ ಸಾಲ ವಿತರಣೆ ಹೆಚ್ಚಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಪ್ರಾಯೋಜಕ ಬ್ಯಾಂಕುಗಳು ಆಯಾ ರಾಜ್ಯ ಸರ್ಕಾರದ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು. 

Latest Videos

ಪ್ರತಿ ವರ್ಷ ಮೈಸೂರು ಸಂಗೀತ ಸುಗಂಧ ಉತ್ಸವ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

ಪ್ರಧಾನಮಂತ್ರಿ ಜನಧನ್ ಅಡಿಯಲ್ಲಿ ನಿಷ್ಕ್ರಿಯ ಖಾತೆಗಳನ್ನು ಪುನಃ ಕಾರ್ಯಗತಗೊಳಿಸಲು ವಿಶೇಷ ಅಭಿಯಾನ ಆರಂಭಿಸಬೇಕು ಎಂದು ಸಚಿವರು ಬ್ಯಾಂಕುಗಳಿಗೆ ನಿರ್ದೇಶಿಸಿದರು.

click me!