Mangaluru: 360 ಕಿ.ಮೀ ನಡೆದು ಗಿರ್ ಕರುವಿನ ಜೊತೆ ಧರ್ಮಸ್ಥಳ ತಲುಪಿದ ಯುವಕ!

Published : Nov 11, 2022, 10:27 AM IST
Mangaluru: 360 ಕಿ.ಮೀ ನಡೆದು ಗಿರ್ ಕರುವಿನ ಜೊತೆ ಧರ್ಮಸ್ಥಳ ತಲುಪಿದ ಯುವಕ!

ಸಾರಾಂಶ

ಆತ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಭಕ್ತ. ಅಷ್ಟೇ ಅಲ್ಲ, ಧರ್ಮಸ್ಥಳದ ಸಿದ್ದವನದ ಹಳೆಯ ವಿದ್ಯಾರ್ಥಿ. ಹೀಗಾಗಿ ಮಂಜುನಾಥ ಸ್ವಾಮಿ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಆ ಯುವಕ ಶ್ರೀಕ್ಷೇತ್ರಕ್ಕೆ ಗಿರ್ ತಳಿಯ ಕರುವನ್ನು ದಾನವಾಗಿ ಕೊಟ್ಟಿದ್ದಾನೆ. 

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ನ.11): ಆತ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಭಕ್ತ. ಅಷ್ಟೇ ಅಲ್ಲ, ಧರ್ಮಸ್ಥಳದ ಸಿದ್ದವನದ ಹಳೆಯ ವಿದ್ಯಾರ್ಥಿ. ಹೀಗಾಗಿ ಮಂಜುನಾಥ ಸ್ವಾಮಿ ಮತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಆ ಯುವಕ ಶ್ರೀಕ್ಷೇತ್ರಕ್ಕೆ ಗಿರ್ ತಳಿಯ ಕರುವನ್ನು ದಾನವಾಗಿ ಕೊಟ್ಟಿದ್ದಾನೆ. ಅಚ್ಚರಿ ಅಂದ್ರೆ ಬೆಂಗಳೂರಿನಿಂದ ಕರುವಿನ ಜೊತೆ ನಡೆದುಕೊಂಡೇ ಬಂದು ಕ್ಷೇತ್ರಕ್ಕೆ ಅರ್ಪಿಸಿದ್ದಾನೆ. ಕಳಸದ ಹಿರೇಬೈಲ್‌ನ ಶ್ರೇಯಾಂಸ್ ಜೈನ್ ತನ್ನ ಮನೆಯ ಮೊದಲ ಗಿರ್ ಕರುವನ್ನು ಧರ್ಮಸ್ಥಳಕ್ಕೆ ಅರ್ಪಿಸುತ್ತೇನೆಂದು ಹರಕೆ ಹೊತ್ತಿದ್ದರು. ಆ ಪ್ರಾರ್ಥನೆಯಂತೆ ಎರಡು ವರ್ಷಗಳ ನಂತರ ಬರೋಬ್ಬರಿ 360 ಕಿ.ಮೀಟರ್ ಗಿರ್ ಕರುವಿನ ಜೊತೆ ನಡೆದುಕೊಂಡು ಬಂದು ಧರ್ಮಸ್ಥಳಕ್ಕೆ ಅರ್ಪಿಸಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಗಿರ್ ಕರುವಿಗೆ ತಿನ್ನಲು ಫಲಹಾರ ನೀಡುವ ಮೂಲಕ ಬರಮಾಡಿಕೊಂಡರು.

ಬೆಂಗಳೂರಿನ ಜಿಗಣಿಯಲ್ಲಿ ಲಾಕ್‌ಡೌನ್ ವೇಳೆ ದನ ಸಾಕಿದ್ದ ಶ್ರೇಯಾಂಸ್: ದೊಡ್ಡ ಕಂಪೆನಿಯ ಉದ್ಯೋಗವಿದ್ದರೂ ಹೈನುಗಾರಿಕೆ ಮೇಲೆ ಆಸಕ್ತಿ ಹೊಂದಿದ್ದ ಯುವಕ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. 2019ರಲ್ಲಿ ಬಂದೆರಗಿದ ಕೊರೊನಾ ಮಹಾ ಮಾರಿಯಿಂದಾಗಿ ಲಾಕ್‌ಡೌನ್ ಆಗಿದ್ದರಿಂದ, ಇವರಿಗೆ ವರ್ಕ್ ಫ್ರಂ ಹೋಮ್ ಪದ್ಧತಿ ಜಾರಿಯಾಗಿತ್ತು. ಹೀಗಿರುವಾಗಲೇ ಬೆಂಗಳೂರಿನ ತನ್ನ ಬಾಡಿಗೆ ಮನೆಯ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ದನ ಸಾಕುವ ಯೋಚನೆಯನ್ನು ಮಾಡಿದ್ದರು. ಖಾಲಿ ಸೈಟ್‌ನಲ್ಲೇ ದನ ಸಾಕಲು ಮುಂದಾಗಿ ಹೈನುಗಾರಿಕೆಗೆ ಮುಂದಡಿಯಿಟ್ಟರು.  

Mangaluru: ವೈದ್ಯಕೀಯ ವಿದ್ಯಾರ್ಥಿ ಸಾವು: 8 ವರ್ಷಗಳ ಬಳಿಕ ಸಿಬಿಐಗೆ ವಹಿಸಿದ ಸುಪ್ರೀಂಕೋರ್ಟ್!

ಮಂಜುನಾಥ ಸ್ವಾಮಿಗೆ ಮೊದಲ ಕರು ಭೀಷ್ಮನನ್ನು ಅರ್ಪಿಸುವ ಸಂಕಲ್ಪ ಕೂಡ ಮಾಡಿದ್ದರು. ಕರು ನಡೆಸಿಕೊಂಡು ಬಂದೇ ಅರ್ಪಿಸಲು ಚಿಂತಿಸಿದ್ದರು. ಅದರಂತೆ ಬೆಂಗಳೂರಿನಲ್ಲಿ ಹೈನುಗಾರಿಕೆ ಆರಂಭಿಸಿದ ಶ್ರೇಯಾಂಸ್ ಜೈನ್ ತನ್ನ ಮನೆಯ ಮೊದಲ ಕರುವನ್ನು ಮಂಜುನಾಥ ಸ್ವಾಮಿಗೆ ಅರ್ಪಿಸಬೇಕೆಂದು ಮನದಲ್ಲಿ ಅಂದುಕೊಂಡರು. ಒಂದು ವರ್ಷದೊಳಗೆ ಮೊದಲ ಗಂಡು ಕರು ಭೀಷ್ಮನನ್ನು ಕ್ಷೇತ್ರಕ್ಕೆ ತಲುಪಿಸುವ ಯೋಜನೆ ರೂಪಿಸಿಕೊಂಡಿದ್ದರು. ಆದರೆ ಅದು ಸಾಧ್ಯವಾಗದೇ ಇದ್ದಾಗ 1 ವರ್ಷ ಎಂಟು ತಿಂಗಳುಗಳಾದಾಗ ಕ್ಷೇತ್ರಕ್ಕೆ ನಡೆದುಕೊಂಡೇ ಬಂದು ಅರ್ಪಿಸುವ ಚಿಂತನೆ ಮಾಡಿದ್ದರು. ಇದಕ್ಕಾಗಿ ಸುಮಾರು ತಿಂಗಳುಗಳ ಪೂರ್ವಭಾವಿ ಚಿಂತನೆ, ರೂಪುರೇಷೆ ಕೈಗೊಂಡಿದ್ದರು. ತಾನು ಹೋಗುವಲ್ಲಿ ಕರು ನಡೆಯುವ ಬದಲು ಕರು ಹೋದಲ್ಲಿ ತಾನು ಹೋಗುವ ನಿರ್ಧಾರ ಮಾಡಿಕೊಂಡಿದ್ದರು. 

ಭೀಷ್ಮನಿಗೆ ಸುಸ್ತಾದರೆ, ಕಷ್ಟಪಟ್ಟರೆ ನಡಿಗೆಗೆ ಬ್ರೇಕ್ ಹಾಕಿ ವಾಹನದಲ್ಲಿ ಬರುವ ನಿರ್ಧಾರ ಮಾಡಿದ್ದರು. ಬೆಂಗಳೂರಿನ ಜಿಗಣಿಯಿಂದ ಮುಖ್ಯರಸ್ತೆಯಲ್ಲೇ ಸಾಗಿ ಬರುವುದಾದರೇ ಕರುವಿಗೆ ಆಹಾರದ ವ್ಯವಸ್ಥೆ ಸರಿಯಾಗಿ ಆಗುವುದಿಲ್ಲ. ಕರು ಹಳ್ಳಿರಸ್ತೆಗಳಲ್ಲಿ ನಡೆದು ಸಾಗಿದರೆ ಸುತ್ತಮುತ್ತಲು ಹುಲ್ಲು ಸಿಗುತ್ತದೆ.  ಇದರಿಂದ ಭೀಷ್ಮನಿಗೂ ಆಹಾರದ ವ್ಯವಸ್ಥೆ ಆಗುತ್ತದೆ ಎಂದು ಯೋಜನೆ ರೂಪಿಸಿ ಗರಿಷ್ಠ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಹಾದು ಬಂದಿದ್ದಾರೆ. ಹೀಗೆ ಬರುವ ವೇಳೆ ಭೀಷ್ಮನಿಗೆ ಸುಸ್ತಾದರೆ ಅಥವಾ ನಡೆದಾಡಲು ಕಷ್ಟಪಟ್ಟರೆ ನಡಿಗೆಗೆ ಬ್ರೇಕ್ ಹಾಕಿ ವಾಹನದಲ್ಲಿ ಬರುವ ನಿರ್ಧಾರವನ್ನು ಕೈಗೊಂಡೇ ನಡಿಗೆಯನ್ನು ಆರಂಭ ಮಾಡಿದ್ದರು.

360 ಕಿಲೋಮೀಟರ್ ಬರೋಬ್ಬರಿ 36 ದಿನದ ಪ್ರಯಾಣ!: ಭೀಷ್ಮನೊಂದಿಗಿನ ನಡಿಗೆ ಬಗ್ಗೆ ಆರಂಭದಲ್ಲಿ ಶ್ರೇಯಾಂಸ್‌ಗೂ ಕೂಡ ಚಿಕ್ಕ ಅಳುಕಿತ್ತು. ಅದಕ್ಕಾಗಿ ಮೊದಲೆರಡು ದಿನ ಗೆಳೆಯನೂ ಶ್ರೇಯಾಂಸ್‌ಗೆ ಸಾಥ್ ನೀಡಿದ್ದ. ಆದರೆ ಭೀಷ್ಮನ ಸಹಕಾರ ಮತ್ತು ತಾಳ್ಮೆಯುತ ವರ್ತನೆ ನೋಡಿದ ನಂತರ ಶ್ರೇಯಾಂಸ್ ತೊಂದರೆಯಾಗುವುದಿಲ್ಲ ಎಂದು ಸಾಬೀತಾಯ್ತು. ಸತತ 36 ದಿನಗಳ ಕಾಲ ಪ್ರಯಾಣಿಸಿ ಧರ್ಮಸ್ಥಳವನ್ನು ತಲುಪಿದ್ದಾರೆ. ಆದರೆ ಈ ವೇಳೆ ಒಂದು ದಿನವೂ ಕೂಡ ಕಚೇರಿಗೆ ಶ್ರೇಯಾಂಸ್ ರಜೆ ಹಾಕಿಲ್ಲ, ಮುಂಜಾನೆ ಹೊತ್ತಲ್ಲಿ ನಡೆದು ನಂತರ ವರ್ಕ್ ಫ್ರಂ ಹೋಮ್ ನಡಿ ಕೆಲಸ ನಿರ್ವಹಿಸುತ್ತಾ ಸಾಗಿದ್ರು. 

360 ಕಿಲೋಮೀಟರ್ ನಡಿಗೆಗೆ ಖರ್ಚಾಗಿದ್ದು ಜಸ್ಟ್ 1000 ಚಿಲ್ಲರೆ ಕಾಸು.ದಾರಿಯುದ್ದಕ್ಕೂ ಜನರ ಪ್ರೀತಿಯೇ ಹೊಟ್ಟೆ ತುಂಬಿಸಿದೆ ಎಂದ ಶ್ರೇಯಾಂಸ್, ಕೇವಲ 1000 ರೂಪಾಯಿ ಹಣವನ್ನಷ್ಟೇ ಖರ್ಚು ಮಾಡಿದ್ದಾರೆ. ಕರುವಿನ ಜೊತೆ ಸಾಗುತ್ತಿದ್ದ ಶ್ರೇಯಾಂಸ್‌ಗೆ ಜನರು ಪ್ರೀತಿಯಿಂದ ಹಲವೆಡೆ ಊಟ ತಿಂಡಿ ನೀಡಿದ್ದಾರೆ. ದಾರಿಯುದ್ದಕ್ಕೂ  ಜನರು ಪ್ರೀತಿಯಿಂದ ಅಕ್ಕಿ ಬೆಲ್ಲ ಫಲಹಾರವನ್ನು ಭೀಷ್ಮನಿಗೆ ನೀಡುತ್ತಿದ್ದರು. ಹಲವೆಡೆ ಶ್ರೇಯಾಂಸ್‌ಗೆ ಊಟದ ಬಿಲ್ ಕೂಡ ತೆಗೆದುಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಭೀಷ್ಮನ ನಡಿಗೆ, ವರ್ತನೆ, ಜನರೊಂದಿಗೆ ಬೆರೆತ ರೀತಿ ಪವಾಡ. 

ಯಕ್ಷಗಾನಕ್ಕೆ ‌ಕಾಲಮಿತಿ, ಪಾದರಕ್ಷೆ ಕಳಚಿ ಕಟೀಲು ದೇವಿ ಸನ್ನಿಧಾನಕ್ಕೆ ಹೆಜ್ಜೆ ಹಾಕಿದ ಭಕ್ತರು

ಪ್ರತಿ ಊರಿನಲ್ಲೂ ಕೂಡ ಕರುವಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿತ್ತು. ಅಲ್ಲದೇ ಕೆಲವೆಡೆ ದೃಷ್ಟಿ ತೆಗೆಯುವ ಕೆಲಸವನ್ನು ಊರಿನವರು ಮಾಡುತ್ತಿದ್ದರು. ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭೀಷ್ಮನಿಗೆ ಫಲ ಅರ್ಪಿಸಿ, ಶ್ರೇಯಾಂಸ್ ರವರ ಭಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದ್ರು. 36 ದಿನಗಳ ನಿರಂತರ ನಡಿಗೆಯ ನಂತರ ಧರ್ಮಸ್ಥಳವನ್ನು ತಲುಪಿರುವುದಕ್ಕೆ ಶ್ರೇಯಾಂಸ್ ಕೂಡ ಸಂತಸದಿಂದಿದ್ದರು. ಮಂಜುನಾಥ ಸ್ವಾಮಿಯ ಕೃಪೆಯಿಂದ ಯಾವುದೇ ತೊಂದರೆಗಳಿಲ್ಲದೇ ಗುರಿ ತಲುಪಿರುವುದಾಗಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!