
ವಿಜಯಪುರ (ಆ.15) ಯೂಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗ ಜಾಡಿಸಿದ ಘಟನೆ ವಿಜಯಪುರ ಎಸ್‌ಆರ್ ಕಾಲೋನಿಯಲ್ಲಿ ನಡೆದಿದೆ.
ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಯತ್ನಾಳರು. ಮಾಧ್ಯಮಗಳಿಗೆ ಮುಸ್ಲಿಂ ಧರ್ಮದ ಹುಡುಗಿಯರ ಜೊತೆ ಮದುವೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದರು ಈ ವೇಳೆ ಯೂಟ್ಯೂಬರ್ ಪತ್ರಕರ್ತ ಎಂದು ಹೇಳಿಕೊಂಡ ಮಹಮ್ಮದ್ ಎಂಬಾತ ಯತ್ನಾಳ್‌ಗೆ ಪ್ರಶ್ನೆ ಕೇಳಿದ್ದಾನೆ.
'ನೀನು ಯಾರು?' ಎಂದು ಪ್ರಶ್ನಿಸಿದ ಯತ್ನಾಳ್‌ಗೆ, 'ಮೈ ನೇಮ್ ಈಜ್ ಮೊಹಮ್ಮದ್' ಎಂದು ಉತ್ತರಿಸುತ್ತಿದ್ದಂತೆ, ಶಾಸಕರು ಕೋಪಗೊಂಡು, 'ಗೆಟ್ ಔಟ್ ರಾಸ್ಕಲ್! ಎಂದು ಗುಡುಗಿದ್ದಾರೆ.
ಇದನ್ನೂ ಓದಿ: 'ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ ₹'5 ಲಕ್ಷ ಘೋಷಣೆ; ಯತ್ನಾಳ್ ವಿರುದ್ಧ ಕಲಬುರಗಿಯಲ್ಲಿ ಎಫ್‌ಐಆರ್!
ಎಲ್ಲಿಂದಲೋ ಬರ್ತಾರೆ, ಯೂಟ್ಯೂಬ್ ಅಂತ ದಂಧೆ ಮಾಡಿಕೊಂಡಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ ಯತ್ನಾಳರು.
) ಯೂಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಿಗ್ಗಾಮುಗ್ಗ ಜಾಡಿಸಿದ ಘಟನೆ ವಿಜಯಪುರ ಎಸ್‌ಆರ್ ಕಾಲೋನಿಯಲ್ಲಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ