Ganesh Chaturthi 2026: ನಗರಗಳಷ್ಟೇ ಅಲ್ಲ, ಈ ಭಾರಿ ಹಳ್ಳಿಗಳಲ್ಲೂ ಗಣಪತಿ ಹಬ್ಬಕ್ಕೂ ಕಡಿವಾಣ! ಈ ನಿಯಮಗಳ ಪಾಲಿಸಲೇಬೇಕು!

Kannadaprabha News   | Kannada Prabha
Published : Aug 07, 2026, 06:53 AM IST
Ganesh Chaturthi 2026 POP Ganesha idols banned in Karnataka Villages rav

ಸಾರಾಂಶ

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯನ್ನು ನಿಷೇಧಿಸಿರುವುದಾಗಿ ಘೋಷಿಸಿದ್ದಾರೆ.

ಬೆಂಗಳೂರು: (ಜು.7): ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಅವಕಾಶವಿಲ್ಲ. ಇವುಗಳ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್‌ 14ರಂದು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ, ಈ ವೇಳೆ ಪಿಒಪಿ ಮೂರ್ತಿಗಳ ಬದಲಿಗೆ ಪರಿಸರಸ್ನೇಹಿ ಗಣೇಶಮೂರ್ತಿಗಳನ್ನು ಬಳಸಬೇಕು. ಹೀಗಾಗಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ, ಸಾಗಾಟಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಪಿಒಪಿ ಮೂರ್ತಿಗಳನ್ನು ರಾಜ್ಯದ ಯಾವುದೇ ನದಿ, ಸರೋವರ, ಕೆರೆ- ಕಟ್ಟೆಯಲ್ಲಿ ವಿಸರ್ಜನೆಗೆ ಅನುಮತಿಸುವುದಿಲ್ಲ. ಜತೆಗೆ ಗಣೇಶ ಹಬ್ಬದ ಆಚರಣೆ ವೇಳೆ ಶಬ್ದಮಾಲಿನ್ಯಕ್ಕೂ ಅವಕಾಶವಿಲ್ಲ. ರಾತ್ರಿ 10 ಗಂಟೆವರೆಗೂ ಸಂಗೀತ, ಡಿಜೆ ಬಳಸಬೇಕು. ಅದರೂ ಅನುಮತಿಸಿದ ಡೆಸಿಬಲ್‌ನಷ್ಟು ಶಬ್ದ ಮಾತ್ರ ಇರಬೇಕು ಎಂದು ಹೇಳಿದರು.

ಪರಿಸರ ಜಾಗೃತಿ ಮೂಡಿಸಿ:

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರ ಪಡೆದು ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಪಿಒಪಿಯಿಂದ ಮನುಷ್ಯರ ಆರೋಗ್ಯದ ಜತೆಗೆ ಮಣ್ಣು, ಜಲಚರಗಳು ಸಹ ಹಾಳಾಗುತ್ತವೆ. ಹೀಗಾಗಿ ಪರಿಸರ ಸಂರಕ್ಷಣೆಗೆ ಮಣ್ಣಿನ ಗಣೇಶ ಪ್ರತಿಷ್ಠಾಪನೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಪರವಾನಗಿ ಕೊಡುವ ಮೊದಲೇ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಕಟ್ಟುನಿಟ್ಟಾಗಿ ಕಾನೂನು ಪಾಲನೆ ಆಗಬೇಕು ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ: ಖಂಡ್ರೆ

ರಾಜ್ಯಾದ್ಯಂತ ನೆರೆ ಹಾಗೂ ಬರ ಪರಿಶೀಲನೆ ಮಾಡಲಾಗಿದೆ. ಬರ ಪ್ರಭಾವ ಇರುವ ಕಡೆ ಕುಡಿಯುವ ನೀರಿನ ಸಮಸ್ಯೆ ಬಗೆಹಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಈಗಾಗಲೇ ಬೆಳಗಾವಿ, ಕಲಬುರಗಿ, ಚಿತ್ರದುರ್ಗದಲ್ಲಿ ಪ್ರಗತಿ ಪಶೀಲನಾ ಸಭೆ ನಡೆಸಲಾಗಿದೆ. 600-700 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಒದಗಿಸುತ್ತಿದ್ದೇವೆ. ಕುಡಿಯುವ ನೀರಿಗಾಗಿ 189 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: ಜೆನ್‌ಝೀ ಪ್ರತಿಭಟನೆಗೆ ಮಣಿದ ಡಿಕೆ ಶಿವಕುಮಾರ್‌ ಸರ್ಕಾರ!
‘ಜಿ ರಾಮ್‌ ಜಿ’ ಉದ್ಯೋಗ ಕೊಡದ ಪಿಡಿಒ ಸಸ್ಪೆಂಡ್‌: ಕೆಲಸ ಸಿಗುತ್ತಿಲ್ಲವೇ? ನಿಮ್ಮೂರಲ್ಲೇ ಉದ್ಯೋಗ ಕೇಳಿ, ಸರ್ಕಾರ ನಿಮ್ಮೊಂದಿಗಿದೆ