ಸೆ.15ರಿಂದ ಮುಂಬೈ-ಮಂಗಳೂರು ನಡುವೆ ಗಣೇಶ ಚತುರ್ಥಿ ವಿಶೇಷ ರೈಲು ಓಡಾಟ, ಈಗಲೇ ಟಿಕೆಟ್ ಬುಕ್ ಮಾಡಿ

Published : Jul 11, 2023, 04:04 PM IST
ಸೆ.15ರಿಂದ ಮುಂಬೈ-ಮಂಗಳೂರು ನಡುವೆ ಗಣೇಶ ಚತುರ್ಥಿ ವಿಶೇಷ ರೈಲು ಓಡಾಟ, ಈಗಲೇ ಟಿಕೆಟ್ ಬುಕ್ ಮಾಡಿ

ಸಾರಾಂಶ

ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮುಂಬೈ ಲೋಕಮಾನ್ಯ ತಿಲಕ್‌ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಸೆ.15ರಿಂದ ವಿಶೇಷ ರೈಲುಗಳ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಮಂಗಳೂರು (ಜು.11): ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮುಂಬೈ ಲೋಕಮಾನ್ಯ ತಿಲಕ್‌ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಸೆ.15ರಿಂದ ವಿಶೇಷ ರೈಲುಗಳ ಸಂಚಾರ ಸೌಲಭ್ಯವನ್ನು ಕಲ್ಪಿಸಲಾಗಿದೆ. ರೈಲು ಸಂಖ್ಯೆ 01165 ಮುಂಬೈ ಲೋಕಮಾನ್ಯ ತಿಲಕ್‌ - ಮಂಗಳೂರು ಜಂಕ್ಷನ್‌ ವಿಶೇಷ ರೈಲು ಮುಂಬೈ ಲೋಕಮಾನ್ಯ ತಿಲಕ್‌ ನಿಲ್ದಾಣದಿಂದ ರಾತ್ರಿ 10.15 ಗಂಟೆಗೆ ಹೊರಡಲಿದೆ. ಮರುದಿನ ಸಂಜೆ 5.20 ಗಂಟೆಗೆ ಮಂಗಳೂರು ಜಂಕ್ಷನ್‌ ತಲುಪಲಿದೆ. ಸೆ. 15, 16, 17, 18, 22, 23, 29 ಮತ್ತು 30 ರಂದು ರಾತ್ರಿ ಮುಂಬೈನಿಂದ ರೈಲು ಹೊರಡಲಿದೆ.

ರೈಲು ಸಂಖ್ಯೆ 01166 ಮಂಗಳೂರು ಜಂಕ್ಷನ್‌ - ಮುಂಬೈ ಲೋಕಮಾನ್ಯ ತಿಲಕ್‌ ವಿಶೇಷ ಸಂಚಾರ ಮಂಗಳೂರು ಜಂಕ್ಷನ್‌ನಿಂದ ಸಂಜೆ 6.40 ಗಂಟೆಗೆ ಹೊರಡಲಿದೆ. ಮತ್ತು ಮುಂಬೈ ಲೋಕಮಾನ್ಯ ತಿಲಕ್‌ನ್ನು ಮರುದಿನ ಮಧ್ಯಾಹ್ನ 1.35 ಗಂಟೆಗೆ ತಲುಪುತ್ತದೆ. ಸೆಪ್ಟೆಂಬರ್‌ 17, 18, 19, 20, 24 ಮತ್ತು 25, ಅಕ್ಟೋಬರ್‌ 1 ಮತ್ತು 2 ರಂದು ಕ್ರಮವಾಗಿ ರೈಲು ಸಂಚರಿಸಲಿದೆ.

South Western Railway: ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಶಾಶ್ವತ ಸ್ಥಗಿತ!

ಈ ರೈಲಿಗೆ ಥಾಣೆ, ಪನ್ವೇಲ, ರೋಹಾ, ಮಡ್ಗಾಂವ್‌, ಖೇಡ್‌, ಚಿಪ್ಲೂನ್‌, ಸವರ್ಡೆ, ಸಂಗಮೇಶ್ವರ ರಸ್ತೆ, ರತ್ನಗಿರಿ, ಅಡವಳಿ, ರಾಜಾಪುರ ರಸ್ತೆ, ವೈಭವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಂ, ಕರ್ಮಾಲಿ, ಮಡಗಾಂವ್‌ ಜಂಕ್ಷನ್‌, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್ ಗಳಲ್ಲಿ ನಿಲುಗಡೆ ಇರುತ್ತದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲ್ವೆ ಕಾಮಗಾರಿ ಪರಿಶೀಲಿಸಿದ ಕೇಂದ್ರ ಸಚಿವ: 
ಪಾವಗಡ: ಕೇಂದ್ರ ಸಾಮಾಜಿಕ ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ, ಸ್ಥಳೀಯ ಶಾಸಕ ಎಚ್‌.ವಿ.ವೆಂಕಟೇಶ್‌ ಹಾಗೂ ಕೇಂದ್ರದ ರೈಲ್ವೆ ಇಲಾಖೆಯ ಮುಖ್ಯಾಧಿಕಾರಿಗಳು ಸೋಮವಾರ ಪಾವಗಡಕ್ಕೆ ಭೇಟಿ ನೀಡಿ, ಇಲ್ಲಿನ ರಾಯದುರ್ಗ-ತುಮಕೂರು ರೈಲ್ವೆ ಯೋಜನೆಯ ಕಾಮಗಾರಿ ವೀಕ್ಷಿಸಿದರು.

ಶಿವಮೊಗ್ಗಕ್ಕೆ ವಿಮಾನ ಹಾರಾಟ, ಹೊಸ ರೈಲು ಮಾರ್ಗದ ಅಪ್ಡೇಟ್‌ ಮಾಹಿತಿ ಕೊಟ್ಟ ಸಂಸದ ರಾಘವೇಂದ್ರ

ಈ ಹಿಂದಿನ ಶಾಸಕ ವೆಂಕಟರಮಣಪ್ಪರ ಅವಧಿಯಲ್ಲಿ ಶಿವಮೊಗ್ಗ ವಿಭಾಗಕ್ಕೆ ಸೇರಿದ್ದ ರೈಲೊಂದನ್ನು ಪ್ರಾಯೋಗಿಕವಾಗಿ ತಾಲೂಕಿನ ಕೆ.ರಾಮಪುರದವರೆಗೆ ಸಂಚರಿಸಲಾಗಿತ್ತು. ಮುಂದುವರಿದ ಭಾಗವಾಗಿ ಪಾವಗಡದಿಂದ ತುಮಕೂರಿಗೆ ಸಂಚರಿಸಲು ಸುಮಾರು ನೂರು ಕಿಮೀ ರೈಲ್ವೆ ಹಳಿಯ ಮಾರ್ಗ ಶೀಘ್ರ ಪ್ರಗತಿ ಕಾಣಬೇಕಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಪಾವಗಡ ಸೇರಿದಂತೆ ಮಧುಗಿರಿ, ಕೊರಟಗೆರೆ ತಾಲೂಕು ವ್ಯಾಪ್ತಿಯ ರೈಲ್ವೆ ಹಳಿಗಳ ಮಾರ್ಗದ ಕಾಮಗಾರಿ ಪೂರ್ಣಗೊಂಡರೆ ತುಮಕೂರು ಮತ್ತು ರಾಯದುರ್ಗ ರೈಲು ಸಂಚಾರಕ್ಕೆ ಸುಗಮವಾಗಲಿದ್ದು, ಇದರಿಂದ ರೈತರು, ಕೂಲಿಕಾರ್ಮಿಕರು ಇತರೆ ವಿವಿಧ ವಲಯಗಳ ಉದ್ಯೋಗಿಗಳು ಕಡಿಮೆ ವೆಚ್ಚದಲ್ಲಿ ಇಲ್ಲಿಂದ ನಗರ ಪ್ರದೇಶಗಳಿಗೆ ತೆರಳಲು ಅನುಕೂಲವಾಗಲಿದೆ. ಗಡಿಯ ತಾಲೂಕಿನ ನಾಗಲಾಪುರ ಮತ್ತು ಕೆ.ರಾಮಪುರದ ವರೆಗಿನ ರೈಲ್ವೆ ಮಾರ್ಗದ ಪ್ರಗತಿಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ವೀಕ್ಷಿಸಿ, ಕಾಮಗಾರಿ ನಿರ್ವಹಣೆ ಕುರಿತು ಸಂಬಂಧಪಟ್ಟರೈಲ್ವೆ ಇಲಾಖೆಯ ಮುಖ್ಯಸ್ಥರಿಂದ ಮಾಹಿತಿ ಪಡೆದರು.

ಈ ವೇಳೆ ರೈಲು ಮಾರ್ಗಕ್ಕೆ ಜಮೀನು ನೀಡಿದ ತಾಲೂಕಿನ ರೈತರೊಂದಿಗೆ ಸಮಾಲೋಚನೆ ನಡೆಸಿದ ಸಚಿವ ನಾರಾಯಣಸ್ವಾಮಿ ಸಂಬಂಧಪಟ್ಟಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಸಮಸ್ಯೆ ನಿವಾರಿಸುವ ಮೂಲಕ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅನುಕೂಲ ಕಲ್ಪಿಸುವ ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು