ಯಾದಗಿರಿ ಜಿಲ್ಲೆಯಲ್ಲಿ ಗಾಂಧೀಜಿ ದೇಗುಲ, ನ್ಯಾಯ ಅರಸಿ ಬಂದವರಿಗೆ ಇಲ್ಲಿನ ಗಾಂಧಿ ಕಟ್ಟೆಯಲ್ಲೇ ಪಂಚಾಯಿತಿ!

By Kannadaprabha News  |  First Published Oct 2, 2023, 5:52 AM IST

ಅಹಿಂಸೆ ಹಾಗೂ ಶಾಂತಿಯುತ ಹೋರಾಟದ ಮೂಲಕ ಬ್ರಿಟಿಷ್‌ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಇಲ್ಲೊಂದು ದೇಗುಲವಿದ್ದು, ನಿತ್ಯವೂ ಪೂಜೆ ನಡೆಯುತ್ತಿರುವುದು ವಿಶೇಷ.


ಬಸವರಾಜ ಎಂ. ಕಟ್ಟಿಮನಿ

ಹುಣಸಗಿ (ಅ.2): ಅಹಿಂಸೆ ಹಾಗೂ ಶಾಂತಿಯುತ ಹೋರಾಟದ ಮೂಲಕ ಬ್ರಿಟಿಷ್‌ ದಾಸ್ಯದಿಂದ ಭಾರತೀಯರಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮನಿಗಾಗಿ ಇಲ್ಲೊಂದು ದೇಗುಲವಿದ್ದು, ನಿತ್ಯವೂ ಪೂಜೆ ನಡೆಯುತ್ತಿರುವುದು ವಿಶೇಷ.

Tap to resize

Latest Videos

undefined

ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ(balashettihal village gandhiji temple) ಎಂಬ ಪುಟ್ಟ ಗ್ರಾಮದಲ್ಲಿ ಸ್ವಾತಂತ್ರ್ಯಾ ನಂತರ ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಗಾಂಧೀಜಿ ಸ್ಮರಿಸುವ ದೇಗುಲವೊಂದನ್ನು ನಿರ್ಮಿಸಲಾಗಿದ್ದು, ಗಾಂಧೀ ಜಯಂತಿ(Gandhi jayanti) ಸೇರಿದಂತೆ ರಾಷ್ಟ್ರೀಯ ಹಬ್ಬಗಳಂದು ಈ ಐತಿಹಾಸಿಕ ಗುಡಿಯಲ್ಲಿರುವ ಗಾಂಧಿಜೀಯ ಪುಟ್ಟ ಮೂರ್ತಿಯನ್ನು ದೇವರಂತೆ ಪೂಜಿಸಲಾಗುತ್ತದೆ.

 

ಗಾಂಧೀಜಿಯವರ ಆಹಾರ ಕ್ರಮ ಅನುಸರಿಸಿ, ವೃದ್ಧಾಪ್ಯದಲ್ಲೂ ಆರೋಗ್ಯದಿಂದಿರಿ!

ಹುಣಸಗಿ ತಾಲೂಕಿನಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೋಗುವ ಮಾರ್ಗಮಧ್ಯೆ ಮುಖ್ಯರಸ್ತೆಗೆ ಹೊಂದಿಕೊಂಡಿರುವಂತೆ ಬಲಶೆಟ್ಟಿಹಾಳ ಗ್ರಾಮವಿದೆ. ಇಲ್ಲಿನ ಗಾಂಧೀವಾದಿ ಹಂಪಣ್ಣ ಸಾಹುಕಾರ ಅವರು ಸ್ವತಃ ತಾವೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ದೇವಸ್ಥಾನ ನಿರ್ಮಿಸಿದ್ದಾರೆ.

1948ರಲ್ಲಿ ನಾಥೂರಾಮ್‌ ಗೋಡ್ಸೆ ಗಾಂಧೀ ಅವರನ್ನು ಹತ್ಯೆ ಮಾಡಿದಾಗ, ಹಂಪಣ್ಣ ಸಾಹುಕಾರ ಅವರು ಬಲಶೆಟ್ಟಿಹಾಳ ಮಂಡಲದ ಸದಸ್ಯರಾಗಿದ್ದರು. ಅಹಿಂಸಾವಾದಿ, ಗಾಂಧಿವಾದಿಯಾಗಿದ್ದ ಹಂಪಣ್ಣ ಈ ಸುದ್ದಿಯನ್ನು ಕೇಳಿ ತಲ್ಲಣಗೊಂಡು, ಅವರು ತಮಗಿರುವ ಅಭಿಮಾನಕ್ಕಾಗಿ 1949ರಲ್ಲಿ ಗಾಂಧೀಜಿಗಾಗಿ ದೇವಸ್ಥಾನ ಕಟ್ಟಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದರು ಎನ್ನಲಾಗಿದೆ.

ನ್ಯಾಯದ ಕಟ್ಟೆ: ಇದಾದ ಬಳಿಕ ಕೆಲವು ದಿನಗಳ ನಂತರ ಈ ಗಾಂಧೀಜಿ ದೇವಸ್ಥಾನದ ಕಟ್ಟೆ ನ್ಯಾಯದ ಕಟ್ಟೆಯಾಗಿ ಬದಲಾಯಿತು. ಗ್ರಾಮಸ್ಥರ ಯಾವುದೇ ಸಮಸ್ಯೆಗೂ ಇಲ್ಲಿ ನ್ಯಾಯ ಸಿಗುತ್ತದೆ. ಅಂದಿನಿಂದ ಇಂದಿನವರೆಗೂ ಈ ಗ್ರಾಮದಲ್ಲಿ ಅ.2ರಂದು ಮತ್ತು ರಾಷ್ಟ್ರೀಯ ಹಬ್ಬಗಳಂದು ಈ ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿದು, ಮೂರ್ತಿಗೆ ಅಲಂಕಾರ ಮಾಡಿ, ಗಾಂಧೀಜಿ ಮೂರ್ತಿಗೆ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ.

ಸಂಸತ್‌ನಲ್ಲಿ ಕನ್ನಡ ಡಿಂಡಿಮ, ಅಖಂಡ ಭಾರತದ ನಕ್ಷೆ: 5000 ಕ್ಕೂ ಹೆಚ್ಚು ವಿವಿಧ ಕಲಾಕೃತಿಗಳ ಸಂಗಮ

ದಿ. ಹಂಪಣ್ಣ ಸಾಹುಕಾರ ಚಿಂಚೋಳಿ ಅವರು 1995ರಲ್ಲಿ ಮರಣ ಹೊಂದಿದ್ದು, ಅಂದಿನಿಂದ ಇಲ್ಲಿಯವರೆಗೂ ಅವರ ಪುತ್ರನಾದ ಬಸವರಾಜ ಚಿಂಚೋಳಿ ಅವರ ನೇತೃತ್ವದಲ್ಲಿ ದಿನವೂ ದೇಗುಲದಲ್ಲಿ ಪೂಜೆ ನೆರೆವೇರುತ್ತಿದೆ.

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿ ಹೆಸರು ಅಮರ. ಅವರ ಆದರ್ಶಗಳು ಶಾಶ್ವತವಾಗಿ ಉಳಿಯಬೇಕಾದರೆ ಯುವ ಜನರು ಗಾಂಧೀ ತತ್ವಾದರ್ಶ ಬೆಳಿಸಿಕೊಳ್ಳಬೇಕು. ರಾಷ್ಟ್ರಪಿತನ ಸ್ಮರಣಾರ್ಥ ಗ್ರಾಮದ ಗಾಂಧೀಜಿ ಗುಡಿ ಇರುವುದು ನಮ್ಮ ಹೆಮ್ಮೆಯಾಗಿದೆ.

- ಬಸಣ್ಣ ಗೋಡ್ರಿ, ಕಸಾಪ ವಲಯ ಗೌರವ ಅಧ್ಯಕ್ಷ, ಬಲಶೆಟ್ಟಿಹಾಳ
 

click me!