ರಾಜ್ಯದ 11000 ಕೋಟಿ ರೂ. ಹೆದ್ದಾರಿ ಯೋಜನೆಗಳಿಗೆ ಇಂದು ಗಡ್ಕರಿ ಚಾಲನೆ!

By Suvarna NewsFirst Published Dec 19, 2020, 7:42 AM IST
Highlights

ರಾಜ್ಯದ 11000 ಕೋಟಿಯ ಹೆದ್ದಾರಿ| ಯೋಜನೆಗಳಿಗೆ ಇಂದು ಗಡ್ಕರಿ ಚಾಲನೆ| 33 ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕು

ನವದೆಹಲಿ(ಡಿ.19): ಬರೋಬ್ಬರಿ 11 ಸಾವಿರ ಕೋಟಿ ರು. ವೆಚ್ಚದಲ್ಲಿ ಪೂರ್ಣಗೊಂಡಿರುವ ಹಾಗೂ ನಿರ್ಮಾಣಗೊಳ್ಳಲಿರುವ ಕರ್ನಾಟಕದ 33 ರಸ್ತೆ ಯೋಜನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಶನಿವಾರ ಚಾಲನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯಲಿರುವ ಈ ಸಮಾರಂಭದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್‌ ಮತ್ತಿತರರು ಭಾಗವಹಿಸಲಿದ್ದಾರೆ.

33 ಯೋಜನೆಗಳ ಒಟ್ಟಾರೆ ಉದ್ದ 1200 ಕಿ.ಮೀ. ಆಗಿದೆ. ಈ ಯೋಜನೆಗಳಿಂದ ಉತ್ತಮ ಸಂಪರ್ಕ ಸಾಧ್ಯವಾಗಲಿದ್ದು, ಕರ್ನಾಟಕದ ಆರ್ಥಿಕಾಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

click me!