ಶ್ರೀರಾಮನ ಮಂದಿರದ ಉದ್ಘಾಟನಾ ಕಾರ್ಯಕ್ರಮದ ವೇಳೆ ರಾಮ ಮಂದಿರದ ಮೇಲೆ ಇಸ್ಲಾಂ ಧ್ವಜ ಹಾರಿಸುವಂತಹ ತಿರುಚಿದ ಫೋಟೋವನ್ನು ಮುಸ್ಲಿಂ ಯುವಕ ಹಂಚಿಕೊಂಡಿದ್ದಾರೆ.
ಗದಗ (ಜ.22): ಹಿಂದೂಗಳ ಆರಾಧ್ಯ ದೈವವಾಗಿರುವ ಹಾಗೂ 500 ವರ್ಷಗಳ ನಿರಂತರ ಹೋರಾಟದ ಫಲವಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ. ಗದಗ ಜಿಲ್ಲೆಯ ಕಿಡಿಗೇಡಿಯೊಬ್ಬ ರಾಮ ಮಂದಿರದ ಮೇಲೆ ಮುಸ್ಲಿಂ ಧ್ವಜಗಳನ್ನು ಹಾರಿಸುವಂತಹ ನಕಲಿ ಫೋಟೋವನ್ನು ಸೃಜಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದ ಬೆನ್ನಲ್ಲಿಯೇ ಪೊಲೀಸರು ಮುಸ್ಲಿಂ ಯುವಕನನ್ನು ಬಂಧಿಸಿದ್ದಾರೆ.
ಹೌದು, ರಾಮ ಮಂದಿರ ಉದ್ಘಾಟನೆಯು ಜಗತ್ತಿನ 100 ಕೋಟಿಗೂ ಅಧಿಕ ಹಿಂದೂಗಳು ಸಂಭ್ರಮಿಸುವಂತಹ ಆಚರಣೆಯಾಗಿದೆ. ಆದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಚಿತ್ರವನ್ನು ಮುಸ್ಲಿಂ ಯುವಕನೊಬ್ಬ ಸೃಜಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಪೋಸ್ಟ್ ಗಮನಿಸಿದ ಹಿಂದೂಪರ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದರು. ಹೀಗೆ ರಾಮ ಮಂದಿರ ಫೋಟೋ ತಿರುಚಿ ಫೇಸ್ ಬುಕ್ ಪೋಸ್ಟ್ ಮಾಡಿದ ಕಿಡಿಗೇಡಿಯನ್ನು ಗದಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ- ಅಯೋಧ್ಯೆ ಪಾದಯಾತ್ರೆ: ರಾಮ ಮಂದಿರಕ್ಕೆ 1,800 ಕಿ.ಮೀ. ನಡೆದುಕೊಂಡು ಹೋದ ಗದಗಿನ ಗಾಂಧಿ
ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸರು ತಾಜುದ್ದೀನ್ ದಫೆದಾರ್ ಎಂಬ ಯುವಕನ ವಶಕ್ಕೆ ಪಡೆದಿದ್ದಾರೆ. ಯುವಕನನ್ನ ವಶಕ್ಕೆ ಪಡೆದು ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ರಾಮ ಮಂದಿರ ಫೋಟೋವನ್ನು ತಿರುಚಿದ ಪೋಸ್ಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾತಲಾಣದಲ್ಲಿ ವೈರಲ್ ಆಗುತ್ತಿದೆ. ಯುವಕನ ವಿರುದ್ಧ ಕಾನೂನು ಹಿಂದೂಪರ ಸಂಘಟನೆ ಪಟ್ಟು ಹಿಡಿದಿವೆ. ಈ ಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಭರವಸೆಯನ್ನು ನೀಡಿದೆ.
ರಾಮಮಂದಿರ ಶೋಭಾಯಾತ್ರ ಮೇಲೆ ಅನ್ಯ ಕೋಮಿನವರ ದಾಳಿ:
ಮುಂಬೈ(ಜ.22): ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ದೇಶದೆಲ್ಲೆಡೆ ಮನೆ ಮಾಡಿದೆ. ದೇಶದ ಮೂಲೆ ಮೂಲೆಯಲ್ಲಿ ಶ್ರೀರಾಮನ ಭಜನೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ, ಶೋಭಯಾತ್ರೆ, ರಾಮಕಥಾ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಮುಂಬೈ ಥಾಣೆಯಲ್ಲಿ ನಡೆಯುತ್ತಿದ್ದ ಶ್ರೀರಾಮ ಶೋಭಯಾತ್ರೆ ಮೇಲೆ ಭೀಕರ ದಾಳಿ ನಡೆದಿದೆ. ಕಲ್ಲು ತೂರಾಟ, ಬಡಿಗೆಗಳ ಮೂಲಕ ದಾಳಿ ನಡೆಸಿದ್ದು, ಹಲವು ರಾಮ ಭಕ್ತರು ಗಾಯಗೊಂಡಿದ್ದಾರೆ. ಇತ್ತ ಶೋಭಯಾತ್ರೆಗೆ ಬಳಸಿದ ಕಾರುಗಳು ಜಖಂ ಗೊಂಡಿದೆ.
ರಾಮಮಂದಿರ ಉದ್ಘಾಟನೆಗೆ ರಾಜ್ಯ ಸರ್ಕಾರ ರಜೆ ಕೊಡದಿದ್ರೇನು, ಶಾಸಕನಾಗಿ ಉಡುಪಿಗೆ ರಜೆ ಕೊಟ್ಟ ಯಶ್‌ಪಾಲ್ ಸುವರ್ಣ!
ಸಿಎಂ ತವರಲ್ಲೇ ದುರ್ಘಟನೆ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ. ಜೈಶ್ರೀರಾಮ್ ಘೋಷಣೆಯೊಂದಿಗೆ ಸಾಗಿದ ಶ್ರೀರಾಮ ಶೋಭಯಾತ್ರೆ ಮೇಲೆ ಏಕಾಏಕಿ ದಾಳಿಯಾಗಿದೆ. ಇದೊಂದು ಪೂರ್ವನಿಯೋಜಿತ ದಾಳಿ ಎಂದು ರಾಮ ಭಕ್ತರು ಆರೋಪಿಸಿದ್ದಾರೆ. ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ಶೋಭಯಾತ್ರೆ ಮೇಲೆ ದಾಳಿ ನಡೆದಿದೆ. 200ಕ್ಕೂ ಹೆಚ್ಚು ಅನ್ಯಕೋಮಿನ ಯುವಕರ ಗುಂಪು ಏಕಾಏಕಿ ದಾಳಿ ನಡೆಸಿದೆ. ಶಾಂತಿಯುತವಾಗಿ ಸಾಗುತ್ತಿದ್ದ ಶ್ರೀರಾಮನ ಶೋಭಯಾತ್ರೆ ಮೇಲಿನ ದಾಳಿಯ ಭೀಕರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ದಾಳಿ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ತಕ್ಷಣವೇ ಕ್ರಮಕ್ಕೆ ಆಗ್ರಹಿಸಲಾಗಿದೆ. ಇಷ್ಟೇ ಅಲ್ಲ ಸೂಕ್ತ ತನಿಖೆ ನಡೆಸಲು ಆಗ್ರಹ ಹೆಚ್ಚಾಗುತ್ತಿದೆ.