Congress Poster War: ಗದಗ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪೋಸ್ಟರ್ ವಾರ್! ಸಿದ್ದರಾಮಯ್ಯ, ಡಿಕೆಶಿಗೆ ಎಚ್ಚರಿಕೆ!

Published : Jun 03, 2025, 02:07 PM ISTUpdated : Jun 03, 2025, 02:18 PM IST
Gadag Congress

ಸಾರಾಂಶ

ಲಕ್ಕುಂಡಿ ಗ್ರಾಮದಲ್ಲಿ ನಡೆಯಲಿರುವ ಉತ್ಖನನ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಅವರ ಹೆಸರು ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ (ಜೂ.3): ನರಗುಂದ ವಿಧಾನಸಭಾ ಕ್ಷೇತ್ರದ ಲಕ್ಕುಂಡಿ ಗ್ರಾಮದಲ್ಲಿ ನಡೆಯಲಿರುವ ಉತ್ಖನನ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಅವರ ಹೆಸರು ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕಾಗಿ ಗದಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪೋಸ್ಟರ್ ವಾರ್ ಭುಗಿಲೆದ್ದಿದೆ.

ಏನಿದು ಪೋಸ್ಟರ್ ವಾರ್?

ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಫೇಸ್‌ಬುಕ್‌ನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರ ಆಪ್ತರಿಂದ ಹಿರಿಯ ನಾಯಕ ಬಿ.ಆರ್. ಯಾವಗಲ್ ಅವರ ಕಡೆಗಣನೆಯಾಗುತ್ತಿರುವುದನ್ನು ಖಂಡಿಸಿದ್ದಾರೆ. ಪೋಸ್ಟ್‌ನಲ್ಲಿ, 'ನರಗುಂದ ಕ್ಷೇತ್ರದಿಂದ ಹಲವು ಬಾರಿ ಆಯ್ಕೆಯಾಗಿ ಜನರ ಸೇವೆ ಮಾಡಿದ ಬಿ.ಆರ್. ಯಾವಗಲ್ ಅವರ ಫೋಟೋ ಬ್ಯಾನರ್‌ನಲ್ಲಿ ಇಲ್ಲ. ಕೇವಲ ಹೊಂದಾಣಿಕೆಯ ನಾಯಕರ ಭಾವಚಿತ್ರಗಳು ಮಾತ್ರ ಮೆರೆದಾಡುತ್ತಿವೆ. ಇಂತಹ ಘಟನೆಗಳು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಇದನ್ನು ತಡೆಯದಿದ್ದರೆ, ಅವರು ಪರೋಕ್ಷವಾಗಿ ಇಂತಹ ಕೃತ್ಯಕ್ಕೆ ಬೆಂಬಲ ನೀಡಿದಂತೆ ಆಗುತ್ತದೆ' ಎಂದು ಆರೋಪಿಸಲಾಗಿದೆ.

2023ರ ವಿಧಾನಸಭಾ ಚುನಾವಣೆಯಿಂದಲೂ ಇಂತಹ ಕಡೆಗಣನೆಗಳು ನಡೆಯುತ್ತಿವೆ. ಕೆಲವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಪಕ್ಷದ ಹಿರಿಯರಾಗಿ, ರಾಜ್ಯ ಕಾಂಗ್ರೆಸ್‌ನಲ್ಲಿ ಪ್ರಭಾವಿ ಎಂದು ಗುರುತಿಸಿಕೊಂಡಿರುವ ಎಚ್.ಕೆ. ಪಾಟೀಲ್ ತಮ್ಮ ಆಪ್ತರಿಂದ ಆಗುತ್ತಿರುವ ಈ ಕೃತ್ಯವನ್ನು ತಡೆಯದಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕಾಗಿ ಇಂತಹ ಘಟನೆಗಳನ್ನು ಕೂಡಲೇ ತಡೆಯಬೇಕು ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ನರಗುಂದ ಕ್ಷೇತ್ರಕ್ಕೆ ಹಿನ್ನಡೆ ಮಾಡಿದ್ದು ಯಾರು?

ನರಗುಂದ ಕ್ಷೇತ್ರಕ್ಕೆ ಹಿನ್ನಡೆ ಉಂಟು ಮಾಡಿದವರು ಯಾರೆಂದು ನರಗುಂದ ಕ್ಷೇತ್ರ ಸೇರಿದಂತೆ ಇಡೀ ಗದಗ ಜಿಲ್ಲೆಗೆ ತಿಳಿದ ವಿಷಯವೇ. ಚುನಾವಣೆ ನಿಂತಿದ್ದು ಆಯ್ತು, ಗೆದ್ದಿದ್ದು ಆಯ್ತು, ಶಾಸಕರಾಗಿ ಸಚಿವ ಸ್ಥಾನ ಪಡೆದದ್ದು ಆಯ್ತು ಪಕ್ಷದ ಚಿಂತೆ ನಮಗೇಕೆ ಚುನಾವಣೆ ಹತ್ತಿವಿದ್ದಾಗ ಅದರ ಬಗ್ಗೆ ಯೋಚಿಸದರಾಯಿತು ಎಂದು ಸುಮ್ಮನೆ ಕುಳಿತುಕೊಳ್ಳುವದರಿಂದ ಕೇವಲ ಪಕ್ಷಕ್ಕೆ ಮಾತ್ರವಲ್ಲ ಸ್ವತಃ ಅವರಿಗೂ ಹಿನ್ನಡೆಯಾಗುವದು ಸತ್ಯ. ಅಂತಹ ಘಟನೆಗಳು ಸಂಭವಿಸುವ ಮುನ್ನವೇ ತಿಳಿದವರು, ಹಿರಿಯರು ಆದಂತಹ ಅನೇಕರೂ ಸಮಸ್ಯೆ ದೀರ್ಘ ಸ್ವರೂಪ ಪಡೆಯುವ ಮುನ್ನವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ ಎಂದು ಎಚ್ಚರಿಸಿದ್ದಾರೆ.

ಕರ್ಮ ಯಾರನ್ನೂ ಬಿಡೋಲ್ಲ:

ಕರ್ಮ ಯಾರನ್ನೂ ಬಿಡುವುದಿಲ್ಲ ಕರ್ಮಕ್ಕೆ ರಾಜಕೀಯ ದೊಂಬರಾಟ ಗೊತ್ತಿಲ್ಲ ಎಂಬುದನ್ನು ಈಗಲೇ ತಿಳಿಯುವುದು ಹಿರಿಯ ಜಾಣ ರಾಜಕಾರಣಿಗಳ ಲಕ್ಷಣ. ಈಗಾಗಲೇ ಅತಿರೇಕವಾಗಿ ಬೆಳೆದಿದೆ ಲಕ್ಕುಂಡಿ ಜನರು ಉತ್ತರ ಕೊಡಲು ಸನ್ನದ್ಧರಾಗಿದ್ದಾರೆ. ಪಕ್ಷದ ನಾಯಕರು ನಮ್ಮ ಸಂಪರ್ಕದಲ್ಲಿ ಇರಲಿ, ಇಲ್ಲದಿರಲಿ ಪಕ್ಷದ ನಾಯಕರನ್ನು ಗೌರವಿಸುತ್ತೇವೆ ಆದರೆ ಅದೇ ಗೌರವವನ್ನು ಉಳಿಸಿಕೊಳ್ಳುವುದು ಪಕ್ಷದ ನಾಯಕರ ಜವಾಬ್ದಾರಿ. ಮುಂದಿನ ದಿನಗಳಲ್ಲೂ ಇದೆ ರೀತಿಯಾದರೆ ಉತ್ತರ ನೀಡಲು ನಾವೂ ರೆಡಿ ಎಂಬ ಎಚ್ಚರಿಕೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!