ಜಿ ಪರಮೇಶ್ವರ್ ಅವರು ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿ ಇದ್ದಾಗ ಡಾಕ್ಟರ್ ವೇಶದಲ್ಲಿ ಬಂದು ಭೇಟಿಯಾಗಿದ್ದರು ಎನ್ನುವ ವಿಚಾರವೀಗ ಹೊರಬಿದ್ದಿದೆ.
ಡಾಕ್ಟರ್ ವೇಷದಲ್ಲಿ ಹೋಗಿ ಡಿಕೆಶಿ ಭೇಟಿಯಾಗಿದ್ದ ಪರಂ!
ಬೆಂಗಳೂರು [ಅ.27]: ತಿಹಾರ್ ಜೈಲಿನ ಪೊಲೀಸರು ಪ್ರತಿಯೊಂದಕ್ಕೂ ಕಾನೂನು ಮಾತನಾಡುತ್ತಾರೆ. ಯಾರೊಬ್ಬರೂ ನನ್ನ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಆಸ್ಪತ್ರೆಗೆ ಕರೆತಂದಾಗ ಡಾ.ಜಿ. ಪರಮೇಶ್ವರ್ ಅವರನ್ನು ಡಾಕ್ಟರ್ ಎಂದು ಹೇಳಿ ಒಳಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದೆ. ಸೂಟು ಬೂಟು ಧರಿಸಿ ಒಂದು ಸ್ಟೆತಸ್ಕೋಪ್ ಹಾಕಿಕೊಂಡು ಬನ್ನಿ ಎಂದು ಹೇಳಿದ್ದೆ. ಹಾಗೆ ಬಂದು ಭೇಟಿ ಮಾಡಿಕೊಂಡು ಹೋದರು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
undefined
ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಿಂಬದಿಯಿಂದ ಬಂದು ಭೇಟಿ ಮಾಡಿಕೊಂಡು ಹೋಗಿದ್ದರು. ಸಿದ್ದರಾಮಯ್ಯ ಆಸ್ಪತ್ರೆಗೆ ಬಂದರೂ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಡಿ.ಕೆ. ಶಿವಕುಮಾರ್ ಅನುಭವ ಹಂಚಿಕೊಂಡರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದರಿಂದ ನನ್ನ ಭೇಟಿಗಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರೂ ಕಾಯುವಂತಾಯಿತು. ಅವರು ಇದಕ್ಕೂ ಮೊದಲೇ ಭೇಟಿಯಾಗಲು ಅವಕಾಶ ಕೇಳಿದ್ದರು. ಆದರೆ ನನಗೆ ಇಬ್ಬರ ಹೆಸರು ನೀಡಲು ಮಾತ್ರ ಅವಕಾಶ ಇತ್ತು. ಹೀಗಾಗಿ ಮೂರು ದಿನ ಕಾದರೂ ಎಚ್.ಡಿ. ದೇವೇಗೌಡ ಅವರಿಗೂ ಅವಕಾಶ ದೊರೆಯಲಿಲ್ಲ. ಕಾನೂನು ಕುರಿತು ಚರ್ಚೆ ಮಾಡಲು ಅಹಮದ್ ಪಟೇಲ್, ಕೆ.ಸಿ. ವೇಣುಗೋಪಾಲ್ ಅವರಿಗೆ ಅವಕಾಶ ಕೊಡಬೇಕಾಯಿತು. ಇದರ ನಡುವೆ ಡಿ.ಕೆ. ಸುರೇಶ್ ಹಾಗೂ ವಕೀಲರ ಭೇಟಿಯನ್ನೂ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿತ್ತು. ಹೀಗಾಗಿ ನನ್ನ ಪತ್ನಿ, ಮಕ್ಕಳಿಗೂ ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗೌರವ ಕೊಟ್ಟು ಜೈಲಿನಲ್ಲಿ ಭೇಟಿಯಾಗಲು ಹೆಸರು ನೀಡಲಾಯಿತು ಎಂದು ಹೇಳಿದರು
ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ: