ವಾಹನ ಸವಾರರಿಗೆ ಬಿಗ್ ಶಾಕ್: 3 ರೂ. ದರ ಏರಿಕೆಯ ಬಳಿಕ ಪೆಟ್ರೋಲ್ ಬೆಲೆ ದೆಹಲಿಯಲ್ಲಿ ₹95 ಒಳಗೆ, ರಾಯಚೂರಿನಲ್ಲಿ ₹107!

Published : May 15, 2026, 10:14 AM IST
Fuel Shock Rs 3 Hike Pushes Petrol Below Rs 95 in Delhi Rs 107 in Raichur Karnataka rav

ಸಾರಾಂಶ

ರಾಯಚೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದೇ ದಿನದಲ್ಲಿ ₹3 ಕ್ಕಿಂತ ಹೆಚ್ಚು ಏರಿಕೆಯಾಗಿದ್ದು, ವಾಹನ ಸವಾರರಲ್ಲಿ ತೀವ್ರ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ದರ ಹೆಚ್ಚಿರುವುದಕ್ಕೆ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ರಾಯಚೂರು (ಮೇ.15): ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ತೈಲ ಕಂಪನಿಗಳು ಮತ್ತೊಂದು ಬರೆ ಎಳೆದಿವೆ. ರಾಯಚೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಏರಿಕೆಯಾಗಿದ್ದು, ವಾಹನ ಸವಾರರು ಅಕ್ಷರಶಃ ಕಂಗಾಲಾಗಿದ್ದಾರೆ.

ಒಂದೇ ದಿನದಲ್ಲಿ ₹3ಗೂ ಹೆಚ್ಚು ಏರಿಕೆ!

ರಾಯಚೂರಿನಲ್ಲಿ ಇಂದಿನ ಪೆಟ್ರೋಲ್ ₹107.36, ನಿನ್ನೆ: ₹104.09 ಇತ್ತು. ಅಂದರೆ ಒಂದೇ ದಿನದಲ್ಲಿ ₹3.27 ಏರಿಕೆ!

ಇನ್ನು ಡೀಸೆಲ್ ಇಂದಿನ ದರ ₹95.29 ಆಗಿದೆ.ನಿನ್ನೆ: ₹92.18 ಇತ್ತು ಇಲ್ಲಿಯೂ ₹3.11 ಏರಿಕೆಯಾಗಿದೆ.

ಬೆಳ್ಳಂಬೆಳಗ್ಗೆ ಪೆಟ್ರೋಲ್ ಬಂಕ್‌ಗಳಿಗೆ ಬಂದ ವಾಹನ ಸವಾರರು, ರೇಟ್ ಕೇಳಿ ಆಘಾತಕ್ಕೊಳಗಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಏರಿಕೆಯಾದರೆ ಹೇಗೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿ Vs ಕರ್ನಾಟಕ: ದರದಲ್ಲಿ ಇಷ್ಟೊಂದು ವ್ಯತ್ಯಾಸವೇಕೆ?

ದೇಶದ ರಾಜಧಾನಿ ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತೈಲ ದರ ಗಗನಕ್ಕೇರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹94.77 ರಷ್ಟಿದ್ದರೆ, ಬೆಂಗಳೂರು, ರಾಯಚೂರಿನಲ್ಲಿ ₹107.36 ತಲುಪಿದೆ. ಅಂದರೆ ದೆಹಲಿಗಿಂತ ರಾಜ್ಯದಲ್ಲಿಯೇ ಪೆಟ್ರೋಲ್ ಡೀಸೆಲ್ ದುಬಾರಿ ಆಯ್ತಲ್ಲ!

ನಿಜಕ್ಕೂ ಬೆಲೆ ಹೆಚ್ಚಿಸಿದ್ದು ಯಾರು?

ಕೇಂದ್ರ ಸರ್ಕಾರ ಬೆಲೆ ಏರಿಸುತ್ತಿದೆ ಎಂದು ಪ್ರತಿ ಬಾರಿ ದೂರುವ ರಾಜ್ಯ ಸರ್ಕಾರಕ್ಕೆ ಈಗ ಸಾರ್ವಜನಿಕರು ನೇರ ಪ್ರಶ್ನೆ ಹಾಕುತ್ತಿದ್ದಾರೆ. ಇಂಧನ ಬೆಲೆ 3 ರೂ. ಹೆಚ್ಚಿಸಿದ ಮೇಲೂ ದೆಹಲಿಯಲ್ಲಿ ಪೆಟ್ರೋಲ್ ದರ ₹95ರ ಒಳಗಿರುವಾಗ, ನಮ್ಮಲ್ಲಿ ₹107 ದಾಟುತ್ತಿರುವುದು ಹೇಗೆ? ಕೇಂದ್ರದ ಮೇಲೆ ಗೂಬೆ ಕೂರಿಸುವ ಮುನ್ನ, ರಾಜ್ಯ ಸರ್ಕಾರ ಈ 3 ರೂಪಾಯಿಗಳ ದರ ಹೆಚ್ಚಳಕ್ಕೆ ನೀಡುವ ಸಮರ್ಥನೆ ಏನು? ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದೇ ನಿಮ್ಮ ಆಡಳಿತ ವೈಖರಿಯೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಡ್ಯ: ನಾಪತ್ತೆಯಾಗಿದ್ದ 20 ಮಕ್ಕಳ ಪೈಕಿ 8 ಮಕ್ಕಳು ಪೋಷಕರ ಮಡಿಲಿಗೆ! ಟ್ರೇಸ್ ಮಾಡಿದ್ದು ಹೇಗೆ ಪೊಲೀಸರು?
ಆಸ್ತಿ ಬೇಕು, ತಾಯಿ ಬೇಡ! ಅಮ್ಮನ ನೋಡಿಕೊಳ್ಳದ ಮಗಳಿಗೆ ಹೈಕೋರ್ಟ್ ತಪರಾಕಿ, ದಾನಪತ್ರ ರದ್ದು, ಏನಿದು ಪ್ರಕರಣ?