ಬೆಂಗಳೂರಲ್ಲಿ ಪದೇಪದೆ ಬೆಂಕಿ ಅವಘಡ: ಕಠಿಣ ಕ್ರಮಕ್ಕೆ ಮುಂದಾದ ಅಗ್ನಿಶಾಮಕ ದಳ

By Ravi Janekal  |  First Published Oct 19, 2023, 3:08 PM IST

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿರುವ ಹಿನ್ನೆಲೆ ಇದೀಗ ಬೆಂಕಿ ಅವಘಡಗಳಿಗೆ ಬ್ರೇಕ್ ಹಾಕಲು ಅಗ್ನಿಶಾಮಕ ದಳ ಮುಂದಾಗಿದೆ.


ಬೆಂಗಳೂರು (ಅ.19): ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಾಲು ಸಾಲು ದುರಂತಗಳು ಸಂಭವಿಸುತ್ತಿರುವ ಹಿನ್ನೆಲೆ ಇದೀಗ ಬೆಂಕಿ ಅವಘಡಗಳಿಗೆ ಬ್ರೇಕ್ ಹಾಕಲು ಅಗ್ನಿಶಾಮಕ ದಳ ಮುಂದಾಗಿದೆ.

ಪದೇ ಪದೇ ದೊಡ್ಡ ಅವಾಂತರಗಳನ್ನೆ ಸೃಷ್ಟಿಸುತ್ತಿರುವ ಅಗ್ನಿ ಅವಘಡಗಳು. ಅತ್ತಿಬೆಲೆಯಲ್ಲಿ ಪಟಾಕಿ ಗೋಡೌನ್ ಬೆಂಕಿ, 17 ಸಾವು., ವಿಜಯನಗರದಲ್ಲಿ ಅಗರಬತ್ತಿ ಫ್ಯಾಕ್ಟರಿಗೆ ಬೆಂಕಿ ಎಂಟು ಬೈಕ್ ಭಸ್ಮ, ಓರ್ವನಿಗೆ ಗಾಯ., ಕೆಂಗೇರಿಯಲ್ಲಿ ನಡೆದಿದ್ದ ಮತ್ತೊಂದು ಅಗ್ನಿ ಅವಘಡ. ಮೂರು ದುರಂತಗಳು ಮರೆಯೋ ಮುನ್ನ ಮತ್ತೊಂದು ಅವಘಡ ಸಂಭವಿಸಿದೆ. ಕೋರಮಂಗಲದ ಕೆಫೆ ನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿ. ಅಗ್ನಿ ಅವಘಡದಿಂದ ಸಂಪೂರ್ಣ ಸುಟ್ಟು ಭಸ್ಮವಾದ ರೆಸ್ಟೋರೆಂಟ್. ಹಾಗೂ ನಾಲ್ಕು ಅಂತಸ್ತಿನ ಕಟ್ಟಡದ ಇತರ ಕಡೆಗಳಿಗೂ ವ್ಯಾಪಿಸಿದ ಬೆಂಕಿ ಮತ್ತು ಹೊಗೆ. ಘಟನೆಯಲ್ಲಿ ಕಟ್ಟಡದ ಮೇಲಿಂದ ಹಾರಿದ ಯುವಕ. 

Tap to resize

Latest Videos

undefined

ಬೆಂಗಳೂರಿಗೆ ಬೆಂಕಿ ದಿನವಾದ ಶನಿವಾರ: ಕಳೆದ ವಾರ ಪಟಾಕಿ ಮಳಿಗೆ, ಈ ವಾರ ಅಗರಬತ್ತಿ ಮತ್ತು ಗುಜರಿ ಅಂಗಡಿ

ಪದೇಪದೆ ಬೆಂಕಿ ಅವಘಡ ಮರುಕಳಿಸುತ್ತಿರುವ ಹಿನ್ನೆಲೆ ಇದೀಗ ಸರಣಿ ಅವಘಡಗಳಿಂದ ಎಚ್ಚೆತ್ತ ಅಗ್ನಿಶಾಮಕ ಇಲಾಖೆ. ನಗರದ ಪಬ್, ರೆಸ್ಟೋರೆಂಟ್ ಸೇರಿದಂತೆ ಎಲ್ಲ ರೀತಿಯ ಹೊಟೇಲ್ ಗಳಲ್ಲಿ ಸುರಕ್ಷತಾ ಕ್ರಮಗಳ ಪರಿಶೀಲನೆಗೆ  ತಪಾಸಣೆ ನಡೆಸುವಂತೆ ಅಗ್ನಿಶಾಮಕ ಇಲಾಖೆ ಡಿಜಿಪಿ ಕಮಲ್ ಪಂತ್ ಸೂಚನೆ ನೀಡಿದ್ದಾರೆ.

ಡಿಜಿಪಿ ಸೂಚನೆ ನೀಡಿರುವ ಹಿನ್ನೆಲೆ ಪಬ್ ರೆಸ್ಟೋರೆಂಟ್ ನಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದೆ. ಸೇಫ್ಟಿ ಮೇಜರ್ ಮೆಂಟ್ಸ್ ಏನಿದೆ, ಸಾರ್ವಜನಿಕರ ಸುರಕ್ಷತೆಗೆ ಏನೆಲ್ಲಾ ವ್ಯವಸ್ಥೆ ಇದೆ. ತುರ್ತು ಸಮಯದಲ್ಲಿ ರೆಸ್ಕ್ಯೂ ಮಾಡಲು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನ ಪರಿಶೀಲನೆ ನಡೆಸಲು ಮುಂದಾಗಿರುವ ಅಗ್ನಿಶಾಮಕ ದಳ. ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಕಡೆ ತಪಾಸಣೆ ನಡೆಸಿ ವರದಿ ನೀಡಲು ಸೂಚಿಸಿರುವ ಡಿಜಿಪಿ. 

ಯಾವುದೇ ಹೋಟೆಲ್ ರೆಸ್ಟೋರೆಂಟ್ ಪಬ್ ಅಗ್ನಿಶಾಮಕ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳದಿದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಠಾಣಾಧಿಕಾರಿಗಳಿಗೆ ಸೂಚಿಸಿರುವ ಡಿಜಿಪಿ. ಇಂದಿನಿಂದಲೇ ನಗರದಲ್ಲಿ ಹೆಚ್ಚು ಜನ ಸೇರುವ ಕಟ್ಟಡ, ಹೊಟೇಲ್ ರೆಸ್ಟೋರೆಂಟ್ ಪರಿಶೀಲಿಸಲು ಸೂಚಿಸಿದ ಕಮಲ್ ಪಂತ್. ಕೋರಮಂಗಲ ಅಗ್ನಿ ದುರಂತ ಬಳಿಕ ಕಠಿಣ ಕ್ರಮಕ್ಕೆ ಮುಂದಾದ ಅಗ್ನಿಶಾಮಕ ಇಲಾಖೆ.

ಬೆಂಕಿ ಭಾನುವಾರ: ಮಂಡ್ಯದ ಮನ್‌ಮುಲ್‌, ಶಿವಮೊಗ್ಗ ಮನೆ, ಕೊಡಗು ಶಾಲಾ ಬಸ್‌ನಲ್ಲಿ ಬೆಂಕಿ- ನಾಲ್ವರ ಸಾವು

ಡಿಜಿಪಿ ಕಮಲ್ ಪಂತ್ ಹೇಳಿದ್ದೇನು?

ಬೆಂಗಳೂರು ನಗರದಲ್ಲಿ ಸಾಲು ಸಾಲು ಅಗ್ನಿ ದುರಂತ ಸಂಭವಿಸುತ್ತಿರುವ ಹಿನ್ನೆಲೆ ಎಲ್ಲ ಕಡೆ ತಪಾಸಣೆ ನಡೆಸಲು ಸೂಚಿಸಲಾಗಿದೆ. ಬೆಂಗಳೂರಿನಾದ್ಯಂತ ಇರುವ ಪಬ್, ಬಾರ್, ರೆಸ್ಟೋರೆಂಟ್ ತಪಾಸಣೆ ಮಾಡಲಾಗುತ್ತಿದೆ. ನಾಲ್ಕು ವಲಯಗಳಲ್ಲಿ 56 ತಂಡಗಳಿಂದ ತಪಾಸಣೆ ನಡೆಸಲಾಗುತ್ತಿದೆ. ಅಗ್ನಿ ಸುರಕ್ಷತೆ ಹಿನ್ನಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಕಿ ದುರಂತ ಸಂಭವಿಸದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಎಲ್ಲಾ ಕಡೆ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಸರಿಯಾದ ರೀತಿಯಲ್ಲಿ ಸುರಕ್ಷತಾ ಕ್ರಮ ವಹಿಸದೇ ಇರುವ ಬಾರ್ ,ಪಬ್ ,ರೆಸ್ಟೋರೆಂಟ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಬಂಧ ಪಟ್ಟ ಹೊಟೇಲ್ ,ಬಾರ್ ,ಪಬ್ ಗಳ ಮಾಲೀಕರ ವಿರುದ್ಧ ಸ್ಥಳೀಯ ಠಾಣೆಗಳಲ್ಲಿ ಕೇಸ್ ಮಾಡಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

click me!