ಈಗಾಗಲೇ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಎಸ್‌ಐಟಿ ನೋಟಿಸ್ ನೀಡಿದೆ. ನಗರದ ಸಿಐಡಿ ಕೇಂದ್ರ ಕಚೇರಿಯಲ್ಲಿ ಪ್ರಕರಣದತ ನಿಖಾಧಿಕಾರಿಗಳ ಮುಂದೆ ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ನಾಗೇಂದ್ರ ಮತ್ತು ಬಸನ ಗೌಡ ದದ್ದಲ್ ಅವರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ಬೆಂಗಳೂರು(ಜು.09): ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದ ಬಹು ಕೋಟಿ ಹಣ ಅಕ್ರಮ ವರ್ಗಾ ವಣೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳ (ಎಸ್‌ಐಟಿ)ದ ವಿಚಾರಣೆಗೆ ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಂಗಳವಾರ ಹಾಜರಾಗುವ ನಿರೀಕ್ಷೆ ಇದೆ.
ಈಗಾಗಲೇ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಎಸ್‌ಐಟಿ ನೋಟಿಸ್ ನೀಡಿದೆ. ನಗರದ ಸಿಐಡಿ ಕೇಂದ್ರ ಕಚೇರಿಯಲ್ಲಿ ಪ್ರಕರಣದತ ನಿಖಾಧಿಕಾರಿಗಳ ಮುಂದೆ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರಿಗೆ ಅಧಿಕಾರಿಗಳು ಸೂಚಿಸಿದ್ದಾರೆ.
ವಾಲ್ಮೀಕಿ ನಿಗಮ ಹಗರಣ: ಪ್ರಕರಣದಲ್ಲಿ ನಾಗೇಂದ್ರನ ಬಲಿಪಶು ಮಾಡಲಾಗಿದೆ: ಜನಾರ್ದನ ರೆಡ್ಡಿ ವಾಗ್ದಾಳಿ
ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ:
ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳಿಂದ ಹಣ ಜಪ್ತಿಗೆ ತನಿಖಾಧಿಕಾರಿ ಹೆಸರಿ ನಲ್ಲಿ ಬೆಂಗಳೂರಿನ ಸೇಂಟ್ ಮಾರ್ಕ್‌ಸ್ ರಸ್ತೆಯಲ್ಲಿರುವ ಎಸ್ ಬಿಐನಲ್ಲಿ ಎಸ್‌ಐಟಿ ಖಾತೆ ತೆರೆದಿದೆ. ಈ ಖಾತೆಗೆ ಹಣ ಜಮೆ ಪ್ರಕ್ರಿಯೆ ಆರಂಭವಾ ಗಿದೆ. ನಿಗಮದಿಂದ ದೋಚಿದ್ದ ಹಣದಲ್ಲಿ ಬಹುತೇಕ ದುಡ್ಡು ಕೆಲವೇ ದಿನಗಳಲ್ಲಿ ಮರಳಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಲ್ಮೀಕಿ ನಿಗಮದಿಂದ ಹೈದರಾಬಾದ್‌ನ ಫಸ್ಟ್ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್ ನ 18 ನಕಲಿ ಖಾತೆಗಳಿಗೆ 94.32 ಕೋಟಿ ರು. ವರ್ಗಾವಣೆಯಾಗಿತ್ತು. ಬಳಿಕ ಸಹ ಕಾರಿ ಬ್ಯಾಂಕ್‌ನಿಂದ ಸುಮಾರು 193ಕ್ಕೂ ಅಧಿಕ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಯಾಗಿತ್ತು. ಇದರಲ್ಲಿ 15 ಕೋಟಿ ರು. ಹಣ ಪತ್ತೆ ಹಚ್ಚಿದ್ದ ಎಸ್‌ಐಟಿ, ಆ ಖಾತೆಗಳಿಂದ ಹಣ ಪಡೆಯಲುತನಿಖಾಧಿಕಾರಿ ಹೆಸರಿನಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.