ಜು. 7ರಂದು ರಾಜ್ಯದಲ್ಲಿ ಭಾರೀ ಮಳೆ ಸುರಿದಿದ್ದು, ಒಂದೇ ದಿನ ಶೇ. 59ರಷ್ಟು ಹೆಚ್ಚಿನ ಮಳೆಯಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ವಾಡಿಕಯಂತೆ ಜು. 7ರಂದು 36 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿಯ ಜು. 7ರಂದು 82 ಮಿ.ಮೀ. ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದ ಮಳೆ ಪ್ರಮಾಣ ಒಂದೇ ದಿನ ಶೇ. 129ರಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಜು.7ರಂದು ಒಟ್ಟು 9 ಮಿ.ಮೀ. ಮಳೆಯಾಗುತ್ತಿತ್ತು. ಮಳೆಯಾಗಿದ್ದು, ಶೇ. 59ರಷ್ಟು ಹೆಚ್ಚಿಗೆ ಮಳೆ ಸುರಿದಿದೆ.
ಬೆಂಗಳೂರು(ಜು.09): ಜೂನ್ ತಿಂಗಳಲ್ಲಿ ದುರ್ಬಲವಾಗಿದ್ದ ಮುಂಗಾರು ಮಳೆ ಜುಲೈನಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದೆ. ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಮಾಹಿತಿ ಪ್ರಕಾರ, ಈ ಬಾರಿ ವಾಡಿಕೆಗಿಂತ ಶೇ. 8ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮುಂಗಾರು ಸುರಿದಿದೆ.
ಆದರೆ, ಮಲೆನಾಡಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದ್ದು, ಶೇ. 19ರಷ್ಟು ಕಡಿಮೆ ಮಳೆ ಆಗಿದೆ. ಜೂ.1ರಿಂದ 30ರವರೆಗೆ ರಾಜ್ಯದಲ್ಲಿ ಶೇ. 3ರಷ್ಟು ಮಳೆ ಕೊರತೆ ಕಾಣಿಸಿಕೊಂಡಿತ್ತು. ವಾಡಿಕೆಯಂತೆ ಜೂನ್ ತಿಂಗಳಲ್ಲಿ 199 ಮಿ.ಮೀ. ಮಳೆ ಆಗಬೇಕು. ಆದರೆ ಈ ಬಾರಿ 194 ಮಿ.ಮೀ. ಮಳೆಯಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆ ಕೊರತೆ ಕಾಣಿಸಿಕೊಂಡಿತ್ತು. ಆದರೆ ಜುಲೈನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜು. 1ರಿಂದ 8ರವರೆಗೆ ವಾಡಿಕೆ ಗಿಂತ ಶೇ. 29ರಷ್ಟು ಹೆಚ್ಚಿಗೆ ಮಳೆಯಾಗಿದೆ. ಮಾಮೂಲಿಯಾಗಿ ಜು. 1ರಿಂದ 8 ರವರೆಗೆ 67 ಮಿ.ಮೀ. ಮಳೆಯಾಗುತ್ತಿದ್ದು, ಈ ಬಾರಿ 86 ಮಿ.ಮೀ. ಮಳೆಯಾಗಿದೆ.
ವರುಣನ ಅಬ್ಬರಕ್ಕೆ ಕಂಗೆಟ್ಟ ಕರಾವಳಿ, ಮಲೆನಾಡು: ಇನ್ನೂ 5 ದಿನ ಗಾಳಿ ಸಹಿತ ಭಾರೀ ಮಳೆ
ಒಂದೇ ದಿನ ಶೇ. 59 ಹೆಚ್ಚು ಮಳೆ:
ಜು. 7ರಂದು ರಾಜ್ಯದಲ್ಲಿ ಭಾರೀ ಮಳೆ ಸುರಿದಿದ್ದು, ಒಂದೇ ದಿನ ಶೇ. 59ರಷ್ಟು ಹೆಚ್ಚಿನ ಮಳೆಯಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ವಾಡಿಕಯಂತೆ ಜು. 7ರಂದು 36 ಮಿ.ಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿಯ ಜು. 7ರಂದು 82 ಮಿ.ಮೀ. ಮಳೆ ಸುರಿದಿದೆ. ಒಟ್ಟಾರೆ ಕರಾವಳಿ ಭಾಗದ ಮಳೆ ಪ್ರಮಾಣ ಒಂದೇ ದಿನ ಶೇ. 129ರಷ್ಟು ಹೆಚ್ಚಾಗಿದೆ. ರಾಜ್ಯದಲ್ಲಿ ಜು.7ರಂದು ಒಟ್ಟು 9 ಮಿ.ಮೀ. ಮಳೆಯಾಗುತ್ತಿತ್ತು. ಮಳೆಯಾಗಿದ್ದು, ಶೇ. 59ರಷ್ಟು ಹೆಚ್ಚಿಗೆ ಮಳೆ ಸುರಿದಿದೆ.
ಡ್ಯಾಂಗಳು 37% ಭರ್ತಿ:
ರಾಜ್ಯದ ಪ್ರಮುಖ 14 ಜಲಾಶಯಗಳಲ್ಲಿ ನೀರಿನ ಶೇಖರಣೆ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ.