
ಬೆಂಗಳೂರು (ಏ.05): ಇಸ್ರೋದ ಈ ಮಾಜಿ ರಾಕೆಟ್ ವಿಜ್ಞಾನಿ, ಎ. ಆರ್. ಕೃಷ್ಣಶಾಸ್ತ್ರಿ ಗಳ ಮೊಮ್ಮೊಗ, ವಿಜ್ಞಾನ ಲೇಖಕರಾಗಿದ್ದ ಸಿ.ಆರ್. ಸತ್ಯ (80) ಅವರು ಅನಾರೋಗ್ಯದಿಂದ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇಸ್ರೋದ ರಾಕೆಟ್ ಮೈಲುಗಲ್ಲು ಇಡುವ ಆರಂಭದಲ್ಲಿ ಬೆನ್ನೆಲುಬಾಗಿದ್ದ ಇವರಿಗೆ ಅಣು ತಜ್ಞ ಡಾ. ರಾಜರಾಮಣ್ಣ ಅವರು ಮಾರ್ಗದರ್ಶಕರಾಗಿದ್ದರು. 50 ವರ್ಷಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ರಂಗದಲ್ಲಿ ಅಮೋಘ ಸೇವೆ ಸಲ್ಲಿಸಿದ್ದರು. ಇವರು ಬರೆದಿರುವ ತ್ರಿಮುಖಿ, ಡಾ.ಯು.ಆರ್. ರಾವ್, ಅಳಿವಿಲ್ಲದ ಸ್ಥಾವರ ಕೃತಿಗಳು ಕನ್ನಡದ ವಿಜ್ಞಾನ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿವೆ.
ಬಾಹ್ಯಾಕಾಶ ವಿಜ್ಞಾನಿಯಾಗಿರದೆ ಉತ್ತಮ ಬರಹಗಾರ: ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ ಎನ್ನುವ ಮಾತಿದೆ. ಇಂತಹ ಮಾತುಗಳನ್ನ ಶ್ರೀ ಸಿ ಆರ್ ಸತ್ಯ ಅವರಂತಹ ಮಹಾನ್ ಆತ್ಮಗಳನ್ನ ನೋಡಿ ಹೇಳಿರುತ್ತಾರೆ ಎನ್ನುವುದು ನನ್ನ ನಂಬಿಕೆ. ಇಸ್ರೋ ಶೈಶಾವಸ್ಥೆಯಲ್ಲಿ ಇರುವಾಗ ಸೈಕಲ್ ಮೇಲೆ ರಾಕೆಟ್ ನೋಸ್ ಹೊತ್ತು ಹೋಗುತ್ತಿರುವ ಚಿತ್ರ ನೋಡದವರು ಇಲ್ಲ ಎನ್ನಬಹುದು. ಸೈಕಲ್ನ ಬದಿಯಲ್ಲಿ ಬಿಳಿ ಅಂಗಿಯಲ್ಲಿ ಇರುವವರು ವಿಜ್ಞಾನಿ ಸತ್ಯ ಅವರು. ಶ್ರೀ ಅಬ್ದುಲ್ ಕಲಾಂ ಅವರ ಜೊತೆಗೆ ಭುಜಕ್ಕೆ ಭುಜ ಕೊಟ್ಟು ದುಡಿದ ಕೀರ್ತಿ ಇವರದು , ಇವರು ಎ ಆರ್ ಕೃಷ್ಣ ಶಾಸ್ತ್ರಿಗಳ ಮೊಮ್ಮಗನೂ ಹೌದು.
ಬಿಎಸ್‌ವೈ, ಸಿದ್ದರಾಮಯ್ಯ ಒಳಒಪ್ಪಂದ: ದೇವೇಗೌಡ ಹೊಸ ಬಾಂಬ್
ಇವರು ಕೇವಲ ಬಾಹ್ಯಾಕಾಶ ವಿಜ್ಞಾನಿಯಾಗಿರದೆ ಉತ್ತಮ ಬರಹಗಾರರೂ ಆಗಿದ್ದರು. ಲಲಿತ ಪ್ರಬಂಧಗಳ ಜೊತೆಗೆ ಅವರು ಬರೆದ ಶಿಶು ಗೀತೆ ' ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ' ಕೇಳದ ಕನ್ನಡಿಗನಿಲ್ಲ ಎನ್ನವಷ್ಟು ಪ್ರಸಿದ್ದಿ ಪಡೆದಿದೆ. ಅನನ್ಯ ಇದೆ ಹಾಡನ್ನ ಶಾಲೆಯಲ್ಲಿ ಹಾಡಿ ಪ್ರಥಮ ಬಹುಮಾನ ಪಡೆದಿದ್ದಳು. ಅಂದಿನ, ಸತ್ಯ ತಾತನ ಮುಂದೆ ಈ ಹಾಡು ಹಾಡಬೇಕು ಎನ್ನುವ ಬಯಕೆಯನ್ನ ಕೂಡ ಪೂರೈಸಿದ್ದೆವು. ಅನನ್ಯಳ ಹಾಡು , ಅವಳ ಮಾತು ಕೇಳಿ ' ಭಾರತಕ್ಕೆ ಕೀರ್ತಿ ತರುತ್ತಾಳೆ ' ಎನ್ನುವ ಆಶೀರ್ವಾದದ ಮಾತನ್ನ ಆಡಿದ್ದರು.
ಒಂದೇ ಕ್ಷೇತ್ರಕ್ಕೆ ಸಿದ್ದು ಕಟ್ಟಿಹಾಕಲು ಯತ್ನ: ಕೆಲವು ನಾಯಕರಿಂದ ಹೈಕಮಾಂಡ್ ಮೇಲೆ ಒತ್ತಡ
ಇವರ ಸಾಧನೆಯ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಗ್ರಂಥವಾದೀತು , ಅದನ್ನ ಓದಲು ಕೂಡ ನಾವು ಸಮಯ ಬೇಡುತ್ತೇವೆ ಅಷ್ಟು ಸಾಧನೆ ಮಾಡಿದ ವ್ಯಕ್ತಿ ಇಂದು ' ಸಾಕಿನ್ನು ಇಲ್ಲಿಯ ಆಟ ' ಎಂದು ಹೊರಟು ಬಿಟ್ಟಿದ್ದಾರೆ. ಇಂತಹ ಹಿರಿಯ ಚೇತನದ ಜೊತೆಗೆ ಒಂದಷ್ಟು ಸಮಯ ಕಳೆದ ಪುಣ್ಯ ನಮ್ಮದು. ಹೋಗಿ ಬನ್ನಿ , ಮತ್ತೆ ಹುಟ್ಟಿ ಬನ್ನಿ ಎನ್ನುವ ಮಾತುಗಳಿಗೆ ನಿಜ ವಾರಸುದಾರರು ಇವರು. ಭಾರತ ನಿಮ್ಮಂತಹ ಪ್ರತಿಭೆಯನ್ನ ಸೃಷ್ಟಿಸಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ತಿಳಿಯದು . ನಷ್ಟದ ಬೆಲೆ ಕಟ್ಟಲಾಗದು . ಸಾರ್ ನಿಮ್ಮ ನಯ -ವಿನಯ -ಪ್ರೀತಿ ಮಾತುಗಳು ಎಂದಿಗೂ ನೆನಪಿನಲ್ಲಿರುತ್ತದೆ . ಹೋಗಿ ಬನ್ನಿ ಸಾರ್. ಶುಭವಿದಾಯ ಎಂದು ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ