ಮಾಜಿ ಮುಖ್ಯಮಂತ್ರಿ ಪತ್ನಿ ಮರಿಬಸಮ್ಮ ನಿಧನ

By Suvarna News  |  First Published Dec 8, 2020, 9:09 PM IST

ಈ ಹಿಂದೆ ಮೈಸೂರು ರಾಜ್ಯವಗಿದ್ದ ವೇಳೆ ಮುಖ್ಯಮಮಂತ್ರಿಯಾಗಿದ್ದ ದಿ.ಎಸ್.ಆರ್. ಕಂಠಿ ಅವರ ಪತ್ನಿ ವಿಧಿವಶರಾಗಿದ್ದಾರೆ.


ಬಾಗಲಕೋಟೆ, (ಡಿ.08) ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್. ಕಂಠಿ ಅವರ ಪತ್ನಿ ಮರಿಬಸಮ್ಮ ಎಸ್. ಕಂಠಿ (102) ಅವರು ಮಂಗಳವಾರ ನಿಧನರಾಗಿದ್ದಾರೆ.

ಮಾಜಿ ಸಿಎಂ ಎಸ್.ಆರ್. ಕಂಠಿ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸ್ಥಾಪಿಸಿರುವ ಸೈನಿಕ ಶಾಲೆಯಲ್ಲಿ ಪುತ್ರನೊಂದಿಗೆ ವಾಸಿತ್ತಿದ್ದ ಮರಿಬಸಮ್ಮ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಇಂದು (ಮಂಗಳವಾರ) ನಿಧರಾಗಿದ್ದಾರೆ. 

Tap to resize

Latest Videos

 ರಾಜಕೀಯ ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಕರ್ನಾಟಕ ಕಾಂಗ್ರೆಸ್ ನಾಯಕ

ಶತಾಯುಷಿ ಆಗಿದ್ದ ಮರಿಬಸಮ್ಮ ಅವರಿಗೆ ಇಬ್ಬರು ಪುತ್ರರಿದ್ದು, ಓರ್ವ ಪತ್ರ ಮಹೇಂದ್ರ ಕಂಠಿ ಅವರು ಸೈನಿಕ ಶಾಲೆಯ ಚೇರಮನ್‌ರಾಗಿದ್ದಾರೆ. ಮತ್ತೊರ್ವ ಪುತ್ರ ಈ ಹಿಂದೆಯೇ ನಿಧನರಾಗಿದ್ದಾರೆ.

ಅವರ ಸ್ವಂತ ಊರು ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿರುವ ಅವರ ಪತಿ ಎಸ್.ಆರ್. ಕಂಠಿ ಅವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಬಿ.ಡಿ. ಜತ್ತಿ ಅವರ ಬಳಿಕ ಎಸ್.ಆರ್. ಕಂಠಿ ಅವರು ಅಲ್ಪಾವಧಿ ಕಾಲ 1962ರ ಮಾರ್ಚ್ 14ರಿಂದ 1962 ಜೂನ್ 20ರ ವರೆಗೆ ರಾಜ್ಯದ (ಮೈಸೂರು ರಾಜ್ಯ) ಮುಖ್ಯಮಂತ್ರಿಯಾಗಿದ್ದರು. ಅವರ ಬಳಿಕ ಎಸ್. ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

click me!